ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ದಿನಾಂಕ 11.3.. 2021.* *ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕು.
ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಮನವಿ:—-* ಸಿದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ, ಹಾಗೂ ವಾಸಿಸುವ ಕುಟುಂಬಗಳ ಮನೆಯ ಮುಂದೆ ಕೆಲವು ಸಾರ್ವಜನಿಕರ ಬಚ್ಚಲು ನೀರುಹಾಗೂ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ನೀರಿನ ನಲ್ಲಿ ಗಳ ನೀರು ಹರಿದುಬಂದು ಸಾರ್ವಜನಿಕರು ಓಡಾಡುವ ದಾರಿಯಲ್ಲಿ ನಿಲ್ಲುತ್ತವೆ. ಈ ರೀತಿ ನೀರು ವಾಸಿಸುವ ಕುಟುಂಬಗಳ ಮುಂದೆ ಹರಿಯುವುದರಿಂದ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ನಂತರ ದಾರಿಯಲ್ಲಿ ಹರಿಯುವುದರಿಂದ ರೈತರು ಜಮೀನುಗಳಿಗೆ ಗಾಡಿ ಎತ್ತುಗಳನ್ನು ಹೊಡೆದುಕೊಂಡು ಹೋಗುವುದು ಸ್ವಲ್ಪ ತೊಂದರೆ ಯಾಗುತ್ತದೆ. ಹಾಗೂ ಶಾಲಾ ಕಾಂಪೌಂಡಿಗೆ ಕೆಲವರು ಕಸದ ತಿಪ್ಪೆ ಗಳನ್ನು ಹಾಕಿರುತ್ತಾರೆ.

ಈ ವಿಚಾರವಾಗಿ ಸುಮಾರು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸುಮಾರು ಬಾರಿ ಅಧಿಕಾರಿಗಳಲ್ಲಿ ಕೇಳಿ ಕೊಂಡಿರುತ್ತೇವೆ. ಆದರೂ ಪ್ರಯೋಜನವಾಗಿಲ್ಲ ಮಳೆಗಾಲದಲ್ಲಿ ಓಡಾಡುವುದು ಅಂತೂ ತುಂಬಾ ಕಷ್ಟಕರವಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಿಸಿ ರಸ್ತೆ ಕಾಮಗಾರಿಯನ್ನು ಮಂಜೂರು ಮಾಡಿಸಿ ಶಾಲಾ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೂ ದನಕರುಗಳಿಗೂ ವಾಹನಗಳಿಗೂ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಿದ್ದಾಪುರ ಗ್ರಾಮದ ಡಿ ಎಂ ಈಶ್ವರಪ್ಪ ದಲಿತ ಸಂಘರ್ಷ ಸಮಿತಿ ಕೂಡ್ಲಿಗಿ ತಾಲೂಕು ಸಂಘಟನಾ ಸಂಚಾಲಕ ರು. ಮುಖಂಡರಾದ ಈ ರಾಮಣ್ಣ. ಈ ಅಂಜಿನಪ್ಪ.ಗೌಡಪ್ಪ ವೀರೇಶ. ಊರಿನ ಗ್ರಾಮಸ್ಥರಾದ ಮಡಿವಾಳ ಬಸವರಾಜ್. ಪೂಜಾರಿ ಬಿ ಬಸವರಾಜ್. ಗ್ರಾಮ ಪಂಚಾಯಿತಿ ಸದಸ್ಯರಾದ ಡಿ ಎಂ ಜೀವ ಪ್ರಕಾಶ್. ವಿಜಯಕುಮಾರ್. ಶ್ರೀಮತಿ ಗಂಗಮ್ಮ. ಸಿದ್ದಾಪುರ ಗ್ರಾಮದ ಮುಖಂಡರು ಸಮಸ್ತ ಗ್ರಾಮಸ್ಥರು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುತ್ತಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
