ವರದಿ. ವಿರೇಶ್ ಸಿರಿಗುಪ್ಪ

*ಮಾನ್ಯ ಶ್ರೀ ಜೆ. ಎನ್. ಗಣೇಶ್ ಶಾಸಕರು ಕಂಪ್ಲಿ ಕ್ಷೇತ್ರ*
*ಕಂಪ್ಲಿಯಲ್ಲಿ ಮಾನ್ಯ ಶ್ರೀ ಜೆ. ಎನ್. ಗಣೇಶ್ ಶಾಸಕರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶ್ರೀದೇವಿ ಜೆ. ಎನ್. ಗಣೇಶ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ*
ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಹಾಗೂ ಶಾಸಕರು ಮಾತನಾಡಿ ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ.

ಇದು ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ”ಅಂತರಾಷ್ಟ್ರೀಯ ಮಹಿಳೆಯರ ದಿನ” ವನ್ನ ಆಚರಿಸುತ್ತಾರೆ ಕಂಪ್ಲಿ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಕೈಗಾರಿಕೋದ್ಯಮ ಗಳನ್ನು ಸ್ಥಾಪನೆ ಮಾಡುವ ದೊಡ್ಡ ಕನಸಿದೆ ಅದನ್ನು ಈಡೇರಿಸಲು ಕ್ಷೇತ್ರದ ಜನತೆಯ ಸಹಕಾರ ಬಹಳ ಮುಖ್ಯ ಮಹಿಳೆಯರಿಗಾಗಿ ನಿಮ್ಮ ಬೆಂಬಲಕ್ಕೆ ಹಾಗೂ ನಿಮ್ಮ ಏಳಿಗೆಗಾಗಿ ನಾನು ಸದಾ ಇದ್ದೇನೆ ಯಾವುದೇ ಸಂದರ್ಭದಲ್ಲಿ ಸಹ ನೀವು ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಲಾಯಿತು ಇದೇ ಸಂದರ್ಭದಲ್ಲಿ ಶ್ರೀಮತಿ ಶ್ರೀದೇವಿ ಜೆ.ಎನ್.ಗಣೇಶ್ ಮೇಡಂ ಮಾತನಾಡಿ ಸ್ತ್ರೀ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ – ಸ್ತ್ರೀಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ ಎಂದು ಹೇಳಿದರು ಸ್ಥಳದಲ್ಲಿ ಶಾಸಕರ ಸ್ನೇಹಿತರಾದ ಹಾಗೂ ಕಾರ್ಯಕ್ರಮದ ಉಸ್ತುವಾರಿ ಗಳು ಶ್ರೀಯುತ ಮಂಜುನಾಥ್ ನಾಯ್ಡು ತಾಲೂಕು ಪಂಚಾಯತ್ ಅಧ್ಯಕ್ಷರು ಶ್ರೀಮತಿ ಉಮಾದೇವಿ ಪವಿತ್ರ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರು ಶ್ರೀಮತಿ ಪವಿತ್ರ ಶಿವನಗೌಡ ಕಂಪ್ಲಿ ಬ್ಲಾಕ್ ಅಧ್ಯಕ್ಷರು ಇಟಿಗೆ ಬಸವರಾಜ್ ಗೌಡ ಶ್ರೀಯುತ ಶಿವನಗೌಡ ಕಂಪ್ಲಿ ಪುರಸಭೆ ಸದಸ್ಯರು ಶ್ರೀಮತಿ ಶ್ರೀ ನಾಗಮ್ಮ ಸತ್ಯಪ್ಪ ಶ್ರಿಮತಿ ಸುಮಾ ರಾಘವೇಂದ್ರ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಯಶಸ್ವಿಗೊಳಿಸಿದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
