;

ಸಂತ ಸೇವಾಲಾಲ್ ಮಹಾರಾಜ ಜಯಂತಿಯನ್ನು ಆಚರಿಸಲಾಯಿತು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:ಸಂತ ಸೇವಾಲಾಲ್ ಮಹಾರಾಜ ಜಯಂತಿ ಆಚರಿಸಲಾಯಿತು*- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ತಾಲೂಕು ಬಂಜಾರ ಸಮುದಾಯದವರಿಂದ ಶ್ರೀಸಂತ ಸೇವಾಲಾಲ್ ಮಹಾರಾಜ ಜಯಂತಿ ಆಚರಿಸಲ‍ಾಯಿತು,ಪಟ್ಟಣದ ಮಹಾತ್ಮ ಗಾಂಧಿ ಚಿತ‍ಭ್ಮಕ್ಕೆ ಗೌರವ ಸಲ್ಲಿಸುವ ಮೂಲಕ,ಸಂತ ಶ್ರೀಸೇವಾಲಾಲ್ ಮಹಾರಾಜ ರ ಭಾವಚಿತ್ರ ಮೆರವಣಿಗೆ ಆರಂಭಿಸಲಾಯಿತು ಮಾಡಲಾಯಿತು.ವಿವಿದ ವಾಧ್ಯ ವೃಂಧಗಳೊಂದಿಗೆ ಶ್ರೀಗುರುಗಳನ್ನೊಳಗೊಂಡ ಮೆರವಣಿಗೆ,ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು ನಂತರ ಮೇನ್ ಬಾಯ್ಸ್ ಸ್ಕೂಲ್ ಆವರಣದಲ್ಲಿ ಸಭೆ ಸಮಾರಂಭ ಜರುಗಿತು,ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಬಂಜಾರ ಸಮುದಾಯದ ಪುರುಷರು ಹಾಗೂ ಸ್ತ್ರೀಯರು.ಜಯಂತಿಯಲ್ಲಿ ತಮ್ಮ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು, ಸಂಪ್ರದಾಯಿಕ ನೃತ್ಯದೊಂದಿಗೆ ಜನಸಾಮಾನ್ಯರ ನೋಟವನ್ನ ತಮ್ಮತ್ತ ಸೆಳೆದರು.

ವೇದಿಕೆಯಲ್ಲಿ ಶ್ರೀಸೂರಗೊಂಡಮಕೊಪ್ಪದ ಬಾಲಕೃಷ್ಣ ಮಹಾರಾಜ್ ಹಾಗೂ ದೂಪದಹಳ್ಳಿ ಶ್ರೀಶಿವಪ್ರಕಾಶ್ ಮಹಾರಾಜ್ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.ಕೂಡ್ಲಿಗಿ ತಾಲೂಕು ಬಂಜಾರ ಅಭಿವೃದ್ಧಿ ಸಂಘ,ಲಮಾಣಿ ಸಮಾಜ ಅಭಿವೃದ್ಧಿ ಸಂಘ ಸೇರಿದಂತೆ ಶ್ರೀಸಂತ ಸೇವಾಲಾಲ್ ಮಹಾರಾಜ ಬಂಜಾರ ಅಭಿವೃದ್ಧಿ ಸಂಘ ಸೇರಿದಂತೆ,ತಾಲೂಕಿನ ಬಂಜಾರ ಸಮುದಾಯದ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು.ತಾಂಡ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಜನಪ್ರತಿನಿಧಿಗಳು,ತಾಂಡಗಳ ಮುಖಂಡರು,ವಿವಿದ ನೌಕರ ವರ್ಗದವರು ಗಣ್ಯರು, ಹಿರಿಯರು ವಿವಿದ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;