ವರದಿ. ಮುಕ್ಕಣ್ಣ ಹುಲಿಗುಡ್ಡ

ಇಡೀ ವಿಶ್ವವೇ ಕೊರೋನಾ ಕಾಟಕ್ಕೆ ತತ್ತರಿಸಿ ಹೋಗಿದ್ದು ಎಲ್ಲಾ ಜನಸಾಮಾನ್ಯರಿಗೆ ಗೊತ್ತಿರುವ ವಿಷಯ, ಹಾಗೂ ಎಲ್ಲರೂ ಅದರ ಒಂದು ಕಷ್ಟವನ್ನು ಅನುಭವಿಸಿರುವುದು ಎಂದಿಗೂ ಮರೆಯಲಾಗದ ಸಂಗತಿ, ಬಡವರ ಬದುಕನ್ನು ಬೀದಿಗೆ ತಂತು, ಶ್ರೀಮಂತರಿಗೆ ದುಡ್ಡಿನಿಂದ ಏನನ್ನು ಪಡೆಯಲು ಸಾಧ್ಯವಿಲ್ಲ ಅನ್ನುವುದನ್ನು ಕಲಿಸಿದ ಗುರು ಅಂದರು ತಪ್ಪಾಗಲಾರದು, ಸರಿ ಈ ಮಹಾಮಾರಿ ತೊಲಗಲಿ ಜನಸಾಮಾನ್ಯರ ಬದುಕು ಬಂಗಾರವಾಗಲಿ ಅದೇನೇ ಇರಲಿ ಬಿಡಿ ಈಗ ನಾವು ಹೇಳ ಹೊರಟಿರುವ ವಿಷಯ “ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ “ನಿಡಗುಂದಿ ಎನ್ನುವ ಒಂದು ಗ್ರಾಮಪಂಚಾಯಿತಿಯ (ಎನ್, ಆರ್, ಇ, ಜಿಎ,)ಯ ಕರ್ಮಕಾಂಡದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ ನೋಡಿ.
ಕೇಂದ್ರ ಸರ್ಕಾರವೂ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎನ್.ಆರ್.ಇ.ಜಿಎ ) ಯೋಜನೆಯು ಗ್ರಾಮೀಣ ಪ್ರದೇಶದ ಬಡಜನರ ಹೊಟ್ಟೆ ತುಂಬಿಸುತ್ತಿವೆಯೋ..? ಏನೋ..? ಗೊತ್ತಿಲ್ಲ. ಆದರೆ ಒಂದಂಥೂ ಸತ್ಯ ಈ (ಎನ್.ಆರ್.ಇ.ಜಿ.ಎ) ಯೋಜನೆಯೀಗ ಕೆಲ ಭ್ರಷ್ಠ ಅಧಿಕಾರಿಗಳ ಮತ್ತು ನೌಕರ ಸಿಬ್ಬಂದಿಗಳು ಹಾಗೂ ಸ್ಥಳೀಯ ಚುನಾಯಿತರ ಪಾಲಿಗೆ ಅಕ್ಷಯ ಪಾತ್ರೆ ಆಗಿ ಬಿಟ್ಟಿರುವುದನ್ನು ನಾವು ಕಾಣಬಹುದು. ಇದು ನಿಜಕ್ಕೂ ನಮ್ಮನ್ನಾಳುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಿ ತಲೆ ತಗ್ಗಿಸಲೇ ಬೇಕಾಗಿದೆ.
ಏಕೆಂದರೇ ಈ ಕರ್ಮಕಾಂಡ ಬ್ರಹ್ಮಾಂಡ ಭ್ರಷ್ಟಾಚಾರದ ಅಡ್ಡಕಸುಬುಗಳು ಕೇವಲ ಒಂದೆರಡು ಗ್ರಾ.ಪಂ.ಗಳದ್ದಲ್ಲಾ..? ರಾಜ್ಯದ ಪ್ರತಿ ಜಿಲ್ಲೆ ತಾಲ್ಲೂಕು ಹಾಗೂ ಪ್ರತಿ ಗ್ರಾ.ಪಂ.ನಲ್ಲೂ ಅಕ್ರಮ ಅವ್ಯವಹಾರಗಳು ನಡೆದಿದ್ಧು ಎನ್.ಆರ್.ಇ.ಜಿ.ಎ ಹೆಸರಲ್ಲಿ ಗ್ರಾ.ಪಂ.ನ ಸ್ಥಳೀಯ ಚುನಾಯಿತ ಸದಸ್ಯರಿಂದ ಹಿಡಿದು ಪಿಡಿಒ ಹಾಗೂ (ಸೆಕ್ರೇಟರಿ) ಗಳು ತಾ.ಪಂ.ಇಒ ಮತ್ತು ಸಿಇಓ ಗಳಿಂದ ಹಿಡಿದು ಜಿ.ಪಂ ಸದಸ್ಯರ ತನಕವೂ ಕೈಯಾಡಿಸಿರುತ್ತಾರೆ. ಇನ್ನೂ ಶಾಸಕರು ಸಂಸದರ ಬಗ್ಗೆ ಅಂಥೂ ಹೇಳೋ ಹಾಗಿಲ್ಲ. ಕೋಟಿ ಕೋಟಿ ಲೂಟಿ ಹೊಡೆದು ಕೆಲವರು ಲೋಕಾಯುಕ್ತ ಅಂಗಳ ತಲುಪಿವೆ. ಅಂದಮೇಲೆ ಬೆಳಗಾಂ ಜಿಲ್ಲೆಯ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾ.ಪಂ.ನಲ್ಲಿ ಬಿಚ್ಚಿಟ್ಟಿರುವ ನಕಲಿ ಜಾಬ್ ಕಾರ್ಡ್ ಕರ್ಮಕಾಂಡ ಏನೇನು ಅಲ್ಲಾ..? ಬಿಡಿ ಏಕೆಂದರೇ ಪ್ರಭಾವಿ ರಾಜಕಾರಣಿಗಳೇ ಈ ಖಧೀಮರ ಕಣ್ಗಾವಲಾಗಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಹಾಗಿದ್ದರೂ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾ.ಪಂ.ನ ಈ ರಗಳೆ ರಂಪಾಟ ದೂರು ಮೇಲಾಧಿಕಾರಿಗಳ ಹೊಸ್ತಿಲು ಮೆಟ್ಟಿದೆ ಈ ಪ್ರಕರಣದಲ್ಲಿ ತಪ್ಪಿತಸ್ಥ ಕಡುಭ್ರಷ್ಠ ಲಂಚಕೋರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವರೋ..? ಅಥವಾ ಎಂಜಲು ಕಾಸಿನಾಸಿಗೆ ಜಾಬ್ ಕಾರ್ಡ್ ಪ್ರಕರಣವನ್ನೇ ಮುಚ್ಚಿ ಖುಲಾಸೆ ಮಾಡಿ ಬಿಡುವರೋ..? ಅನ್ನುವುದನ್ನೀಗ ಕಾದು ನೋಡಬೇಕಿದೆ.
*ಪಿಡಿಒ ಕಾಂಬಳೆಯ ಕೈ ಛಳಕಕ್ಕೆ ನಿಡಗುಂದಿ ಗ್ರಾ.ಪಂ ಮಾನ ಹರಾಜು*
ಅದೆಷ್ಠೋ ಕುಗ್ರಾಮಗಳಲ್ಲಿ ಇರುವ ಬಡ ಜೀವಗಳು ಇಂದಿಗೂ ತುತ್ತು ಅನ್ನಕ್ಕಾಗಿ ತತ್ತರಿಸಿ ಹೋಗಿರುವ ಸನ್ನಿವೇಶಗಳು ಬಹಳಷ್ಠಿವೆ. ಸ್ವಗ್ರಾಮದಲ್ಲಿ ಜೀವನ ನಡೆಸಲು ಉದ್ಯೋಗವಿಲ್ಲದ ಅದೆಷ್ಠೋ..? ನಿರುದ್ಯೋಗಿಗಳು ಕೂಲಿ ಹರಸಿ ಬೇರೆ ಬೇರೆ ಕಡೆ ಗುಳೆ ಹೊರಟಿರುವುದನ್ನು ನಾವು ಸಹಜವಾಗಿಯೇ ಕಾಣಬಹುದು. ಆಗೂ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ತಲುಪಿಸಿ ಇಡಿ ಗ್ರಾಮವನ್ನೇ ಅಭಿವೃದ್ಧಿಯ ಪಥದ ಕಡೆ ತರುವ ಜವಾಬ್ದಾರಿ ಹೊಣೆಗಾರಿಕೆ ಆಯಾ ಗ್ರಾ.ಪಂ.ನ (ಪಿಡಿಒ) ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹೆಗಲ ಮೇಲಿರುತ್ತದೆ. ಆದರೆ ಇವರೇ ಅಡ್ಡದಾರಿಯಲ್ಲಿ ದುಡ್ಡು ಮಾಡುವ ದುಡ್ಡಿನ ದುರಾಸೆಗೆ ಮತ್ತು ಐಷಾರಾಮಿ ಜೀವನ ಮಾಡುವ ತಿಕ್ಕಲುತನಕ್ಕೆ ಗ್ರಾ.ಪಂ.ಯ ಹಾಗೂ ಜಿಲ್ಲಾಡಳಿತ ಮತ್ತು ಆಡಳಿತ ಸರ್ಕಾರದ ಮಾನ ಹರಾಜು ಮಾಡುವ ಮೂರ್ಖ ಕೆಲಸಕ್ಕೆ ತನ್ನ ಮೇಲಾಧಿಕಾರಿಗಳ ಬಗ್ಗೆ ಯಾವುದೇ ಅಳುಕಿಲ್ಲದೇ ಮುನ್ನುಗ್ಗುವ ಪಿಡಿಒ ಕಾಂಬಳೆಯಂತಹ ಧನಪಿಶಾಚಿಗಳ ಮೇಲೆ ಬೆಳಗಾಂ ಜಿಲ್ಲೆಯ ಜಿ.ಪಂ.ಸಿಇಓ ಅವರೇನಾದರೂ ಹಿಡಿತ ಸಾಧಿಸಲು ಮುಂದಾಗದಿದ್ದರೇ..? ಅದರಿಂದ ಆಗುವ ಮುಜುಗರಕ್ಕೆ ಜಿಲ್ಲಾಡಳಿತ ಹಾಗೂ ಜಿ.ಪಂ.ಸಿಇಓ ಅವರೇ ನೇರ ಹೊಣೆಗಾರರು ಅನ್ನುವ ಪ್ರಶ್ನೆ ರಾಯಭಾಗ ತಾಲ್ಲೂಕಿನೆಲ್ಲೆಡೆ ಬಾರಿ ಸದ್ದು ಮಾಡುತ್ತಿವೆ. ಇಷ್ಠೆಲ್ಲಾ ಪಿಠಿಕೆ ಹಾಕಿದ್ದೇಕೆ.! ಅಂತೀರಾ…? ಬೆಳಗಾಂ ಜಿಲ್ಲೆಯ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾ.ಪಂ.ನ ಕಡುಭ್ರಷ್ಠ ಪಿಡಿಒ ಕಾಂಬಳೆ ಅನ್ನೋ ಐನಾತಿ ಆಸಾಮಿ ಎಂಜಲು ಹಣಕ್ಕೆ ನಾಲಿಗೆ ಚಾಚಿ ಯಾರದ್ದೋ..? ಹೆಸರಿನ ಜಾಬ್ ಕಾರ್ಡ್ ಅನ್ನು ಇನ್ಯಾರದ್ದೋ..? ಹೆಸರಿನಲ್ಲಿ ಕೂರಿಸುವ ಕೆಟ್ಟ ಚಾಳಿಯನ್ನು ರೂಡಿಸಿ ಕೊಂಡಿರುವ ಈ ಲಂಚಬಾಕ ಎಲ್ಲೆಲ್ಲಿ…? ಎಷ್ಠೆಷ್ಠು…? ಅಕ್ರಮ ಹಣ ಆಸ್ತಿ ಸಂಪಾದನೆ ಮಾಡಿರುವನೋ…? ಅದು ತನಿಖೆಯಿಂದಷ್ಟೇ ಹೊರ ಬರಲಿದೆ. ಅಷ್ಠೇ ಅಲ್ಲದೇ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ದೇವಪ್ಪ ಕಾಂಬಳೆ ಅನ್ನೋ ಆಸಾಮಿ ಮನಸೋಯಿಚ್ಚೇ ಈ ನಿಡಗುಂದಿ ಗ್ರಾ.ಪಂ.ಯನ್ನು ಕುಲಗೆಡಿಸಿ ನುಂಗಿ ನೀರು ಕುಡಿದು ಊರು ಬಿಟ್ಟಿರುವ ನೆಂಬ ಮಾಹಿತಿಗಳು ಲಭ್ಯವಾಗಿವೆ. ಹಾಗಾಗಿ ಅದು ನಮಗೆ ಬೇಡದ ವಿಚಾರ. ಬಿ.ಎಸ್.ಕಾಂಬಳೆ ಅನ್ನೋ ಈ ಭ್ರಷ್ಠ ಪಿಡಿಒ ಏನೆಲ್ಲಾ ಲುಚ್ಚಾ ಕೆಲಸಗಳನ್ನು ಮಾಡಿದ್ದಾನೆ ಅನ್ನುವ ನೈಜ ಮಾಹಿತಿಗಳು ಬಾಯಿಂದ ಬಾಯಿಗೆ ಹರಿದಾಡುತ್ತಿರುವುದು ನಿಡಗುಂದಿ ಗ್ರಾ.ಪಂ.ನ್ನೇ ಬೆತ್ತಲು ಮಾಡಿರುವಂತೆ ಕಂಡು ಬರುತ್ತಿವೆ. ಅದಕ್ಕೆಲ್ಲ ಪುಷ್ಠಿ ನೀಡುವಂತೆ ಬೇರೆ ಜಿಲ್ಲೆಯೊಂದರ ಪ್ರತಿಷ್ಠಿತ ಕಂಪೆನಿಗಳಲ್ಲೊಂದಾದ ಎಂ.ಎನ್.ಸಿ ಕಂಪೆನಿಯ ಸಾಗರ್ ಸಿದ್ದುಗೋಡ ಗುಡೋಡಗಿ ಎಂಬಾತ ಉದ್ಯೋಗಿಯ ತಿಂಗಳ ವೇತನ ಸುಮಾರು 50 ರಿಂದ 60 ಸಾವಿರ ಪಡೆಯುವ ವ್ಯಕ್ತಿಯ ಹೆಸರಲ್ಲೂ ಜಾಬ್ ಕಾರ್ಡ್ ಇದ್ದು ವಿಶ್ವನಾಥ್ ಬಿಜ್ಯವಾಡಿ ಸೇರಿದಂತೆ ಚೇತನ್ ಅಶೋಕ್ ಪೂಜಾರಿ ಮತ್ತು ರಾಜೀವ್ ಸಿರಿಮಂದರ್ ಶೆಟ್ಟಿ ಹಾಗೂ ಹರೀಶ್ ಎನ್ನುವಾತ ಸ್ವಗ್ರಾಮದವನಲ್ಲವಾದರೂ ಇವರ ಹೆಸರಲ್ಲಿ ಜಾಬ್ಕಾರ್ಡ್ಇದ್ದು ಹಾಗೂ ಇಂತಹ ಹಲವಾರು ಉದ್ಯಮಿಗಳ ಹೆಸರಲ್ಲೂ ಜಾಬ್ ಕಾರ್ಡ್ ಇರುವುದಲ್ಲದೇ ಗ್ರಾ.ಪಂ.ನ ಹಾಲಿ ಸದಸ್ಯನಾಗಿರುವ ವಿಠ್ಠಲ್ ಪ್ರಭು ಗೊಂಡೆ ಮತ್ತು ಬಸುಗೌಡ ಚೆನ್ನಗೌಡ ಪಾಟೀಲ್ ಸೇರಿದಂತೆ ಮತ್ತೊಬ್ಬ ಹಾಲಿ ಸದಸ್ಯ ಮತ್ತು ಗುತ್ತಿಗೆದಾರನಾಗಿರುವ ಅಶೋಕ್ ಪಟಿಗೌಡ ಪಾಟೀಲ್ ನಂತಹ ಕಡುಭ್ರಷ್ಠರ ಕೈಯ್ಯಲ್ಲೂ ಈ ಜಾಬ್ ಕಾರ್ಡ್ ಇರುವುದೀಗ ಸೋಜಿಗದ ಸಂಗತಿಯಾಗಿದೆ. ಅಷ್ಠೇ ಅಲ್ಲದೇ ಬೇರೆಡೆ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರ ಹೆಸರಲ್ಲೂ ಜಾಬ್ ಕಾರ್ಡ್ ಗಳು ಈ ಭ್ರಷ್ಠರು ಖಜಾನೆ ತುಂಬಿಸಿ ಕೊಳ್ಳುವ ಚಾಳಿ ರೂಡಿಸಿ ಕೊಂಡಿರುವುದು ದುರದೃಷ್ಟಕರ ಮತ್ತು ಇಂತಹ ಭ್ರಷ್ಟರ ಮೇಲೆ ಮಾದ್ಯಮದವರು ಹಾಗೂ ಸಾಮಾಜಿಕ ಹೋರಾಟಗರರೂ ಪ್ರಶ್ನೆ ಮಾಡಲು ಮುಂದಾದರೆ ಅವರಿಗೆ ಬೆದರಿಕೆ ಹಾಕಿ ಬಾಯನ್ನು ಮುಚ್ಚಿಸುವ ಒಂದು ಕಾರ್ಯಕ್ಕೆ ಮುದಾಗುವರು ಎನ್ನುವ ಒದಂತಿಗಳು ಇವೆ.ಅದೇನೆ ಇರಲಿ ಇಲ್ಲಿನ ಜಿಲ್ಲಾದಿಕಾರಿಗಳು ಮತ್ತು ಜಿ.ಪಂ.ಸಿಇಓ ಅವರು ಈ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾ.ಪಂ.ನ ನಕಲಿ ಜಾಬ್ ಕಾರ್ಡ್ ಅಡ್ಡಕಸುಬುಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇವರಿಗೆ ತಿಳಿದಿಲ್ಲವೆಂಬುದಂಥೂ ನಮಗೆ ಗೋಚರವಾಗುತ್ತಿವೆ.

*ಜಿ.ಪಂ.ಸಿಇಓ ಅವರೇ ನಿಡಗುಂದಿ ಗ್ರಾ.ಪಂ.ಗೆ ಭೇಟಿ ನೀಡಿ ಇಂತಹ ಭ್ರಷ್ಠರನ್ನು ಒದ್ದೋಡಿಸಿ*
ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾ.ಪಂ.ನ ಕಡುಭ್ರಷ್ಠ ಪಿಡಿಒ ಬಿ.ಎಸ್ ಕಾಂಬಳೆ ಇಬ್ಬಂದಿತನಕ್ಕೆ ಪಂಚಾಯತ್ ರಾಜ್ ಕಾಯ್ದೆಗಳು ನಿಯಮ ನಿಬಂಧನೆಗಳು ಇಲ್ಲಿನ ಗ್ರಾ.ಪಂ.ನ ಕೆಲ ಚುನಾಯಿತ ಸದಸ್ಯರ ಹಿಡಿತದಲ್ಲಿದೆ ಅನ್ನುವುದಕ್ಕೆ ನಿಯಮ ಬಾಹಿರವಾಗಿ ಜಾಬ್ ಕಾರ್ಡ್ ಪಡೆದಿರುವುದೇ ಒಂದು ಉತ್ತಮ ನಿದರ್ಶನವಾಗಿದೆ. ಸುಮಾರು 3550 ಕ್ಕೂ ಅಧಿಕ ಜಾಬ್ ಕಾರ್ಡ್ ಗಳು ಈ ಭ್ರಷ್ಠ ಪಿಡಿಒ ಬಿ.ಎಸ್ ಕಾಂಬಳೆಯ ಲಂಚಗುಳಿತನಕ್ಕೆ ಸಾಕ್ಷಿಯಾಗಿ ನಿಂತಿವೆ. ಅಷ್ಠೇ ಅಲ್ಲದೇ ಈ ನಕಲಿ ಜಾಬ್ ಕಾರ್ಡ್ ಪ್ರಕರಣ ಇಂದು ನಿನ್ನೆಯದಲ್ಲಾ ಸುಮಾರು 2015 ರಿಂದಲೂ ಪಿಡಿಒ ಬಿ.ಎಸ್ ಕಾಂಬಳೆಯ ವಸೂಲಿ ದಂಧೆಯು ಸಾರಾಸಗಟಾಗಿ ನಡೆಯುತ್ತಿವೆ ಅನ್ನುವ ಮಾತುಗಳು ನಿಡಗುಂದಿ ಗ್ರಾ.ಪಂ.ನ ಸುತ್ತ ಮುತ್ತೆಲ್ಲಾ ಸದ್ದಿಲ್ಲದೆ ಗಿರಕಿ ಹೊಡೆಯುತ್ತಿವೆ. ಆದರೆ ಪಿಡಿಒ ಬಿ.ಎಸ್ ಕಾಂಬಳೆಯ ಪೋರ್ಜರಿ ಜಾಬ್ ಕಾರ್ಡ್ ನ ಧನದಾಹದ ವಿಚಾರದಲ್ಲಿ ತಾ.ಪಂ.ನ ಕಾರ್ಯನಿರ್ವಾಹಕ ಅಧಿಕಾರಿಯದ್ದು ಕೂಡ ಪ್ರಮುಖ ಪಾತ್ರ ಇರುತ್ತದೆ ಅನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ಕಳೆದ 2015 ರಿಂದಲೂ ಒಂದೇ ಕಡೆ ಗೂಟ ಹೊಡೆದು ಕೊಂಡು ಇರುವ ಈ ಪಿಡಿಒ ಬಿ.ಎಸ್ ಕಾಂಬಳೆಯ ಲುಚ್ಚಾ ಕೆಲಸಗಳಿಗೆ ರಾಯಭಾಗ ತಾ.ಪಂ.ನ ಯಾವ್ಯಾವ…? ಇಓ ಗಳು ಈತನಿಗೆ ಬೆಂಗಾವಲಾಗಿ ನಿಂತಿದ್ದರೋ..? ಅನ್ನುವ ಪ್ರಶ್ನೆ ಜನಸಾಮಾನ್ಯರ ಮನಸ್ಸಿನಲ್ಲಿ ಕಾಡತೊಡಗಿದೆ . ಹಾಗಾಗಿ ಈ ನಕಲಿ ಜಾಬ್ ಕಾರ್ಡ್ ಪ್ರಕರಣದ ರುವಾರಿ ಆಗಿರುವ ಪಿಡಿಒ ಬಿ.ಎಸ್ ಕಾಂಬಳೆ ವಿರುದ್ಧ ಶಿಸ್ತು ಕ್ರಮ ಜರುಗಿಸುವರೋ…? ಅಥವಾ ಇದ್ಯಾವುದರ ಬಗ್ಗೆಯೂ ಖಿಂಚಿತ್ತು ತಲೆ ಕೆಡಿಸಿ ಕೊಳ್ಳದೇ ಬಾಯಿ ಮುಚ್ಚಿ ಕುಳಿತಿದ್ದ ತಾ.ಪಂ.ಇಓ ನ ಬೇಜವಬ್ದಾರಿತನ ಮತ್ತು ಅಸಡ್ಡೆತನವನ್ನೇ ಪ್ರಮುಖ ಕಾರಣವನ್ನಾಗಿಸಿಕೊಂಡು ಕರ್ತವ್ಯಲೋಪದ ಆರೋಪದಡಿ ತಾ.ಪಂ.ಇಓ ನನ್ನೇ ಕರ್ತವ್ಯದಿಂದ ಅಮಾನತ್ತು ಪಡಿಸುವರೋ…? ಅನ್ನುವ ಹತ್ತು ಹಲವು ಕೌತುಕಗಳು ನಿಡಗುಂದಿ ಗ್ರಾ.ಪಂ.ಯನ್ನು ಆವರಿಸಿ ಕೊಂಡಿರುವುದು ಹೌದು.ನೋಡಿ ಬಡವರ ಪಾಲು ರಾಜ್ಯದಲ್ಲಿ ಹೇಗೆ ಭ್ರಷ್ಟರ ಪಲಾಗುತ್ತಿದೆ ಇಂತವರಿಗೆ ನಮ್ಮ ಸರ್ಕಾರದ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧ ಪಟ್ಟ ಸಚಿವರು ಶಿಸ್ತುಕ್ರಮವನ್ನು ಜರುಗಿಸಲಿ ಎಂಬುದೇ ನಮ್ಮ ಒಂದು ಎಚ್ಚರಿಕೆಯ ಆಶಯ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
