;

Kms ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ…!!,

ವರದಿ. ಡಿ. ಎಂ.ಈಶ್ವರಪ್ಪ ಸಿದ್ದಾಪುರ

ದಿನಾಂಕ 3.03. 2021. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಾ ಹೊಸಹಳ್ಳಿ*

ಶ್ರೀ ಶರಣಶ್ವರ ವಿದ್ಯಾಸಂಸ್ಥೆ ಕಾನಾಮಡಗು.K.M.S. ಪ್ರಥಮ ದರ್ಜೆ ಕಾಲೇಜು ಕಾನಹೊಸಹಳ್ಳಿ
ದಿನಾಂಕ 1.3.2021. ರಂದು ಸೋಮವಾರ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿರುವ ಕೆಎಂಎಸ್ ಪ್ರಥಮದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಕೆಎಂ ಶಶಿಧರ್ ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಶಶಿಧರ್ ಅವರು ಮಾತನಾಡಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಸರ್ಕಾರದಿಂದ ಶಿಕ್ಷಣಕ್ಕೆ ಸಿಗುವ ಕೆಲವು ಸೌಲಭ್ಯಗಳ ಬಗ್ಗೆ ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ಉಪಯೋಗ ಮಾಡಿಕೊಂಡು ಕಾಲೇಜಿನಲ್ಲಿ ನಿಮಗೆ ಶಿಕ್ಷಕರು ಬೋಧನೆ ಮಾಡುವಾಗ ಗಮನಹರಿಸಿ ಪಾಠಗಳನ್ನು ಕೇಳಿ ನಮ್ಮ ಕಾಲೇಜಿ ಗೆ ಒಳ್ಳೆಯ ಹೆಸರು ತರುವುದರ ಮೂಲಕ ನಿಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಹೆಸರನ್ನು ತರುವುದರ ಮೂಲಕ ಉನ್ನತ ಪದವೀಧರರಾಗಿ ಉನ್ನತ ಪದವಿ ತೆಗೆದು ಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ಈ ಸಂದರ್ಭದಲ್ಲಿ ಮಾತನಾಡಿದರು.ಆಡಳಿತಾಧಿಕಾರಿಗಳಾದ ಕೆಎಂ ಹರ್ಷವರ್ಧನ್. ಶ್ರೀಮತಿ ಸುರಭಿ ಕೆಎಂ ಹರ್ಷವರ್ಧನ್. ಈ ಸಮಾರಂಭ ಕುರಿತು ಮಾತನಾಡಿದರು. ಕಾಲೇಜಿನ ಶಿಕ್ಷಕರು ಪ್ರಾಂಶುಪಾಲರು ಈ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳ ಬಗ್ಗೆ ಈ ವಿದ್ಯಾಸಂಸ್ಥೆ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸುದರ್ಶನ್ ಶಿಕ್ಷಕ ಸಿಬ್ಬಂದಿಗಳಾದ ರಾಜು ನಾಯಕ್. ಓಬಯ್ಯ ತಿಪ್ಪೇಸ್ವಾಮಿ ಸುಜಾತ. ಶೃತಿ ಮತ್ತು ಕೆಎಂಎಸ್ ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲರು. ವಿದ್ಯಾನಿಕೇತನ ಶಾಲೆಯ ಮುಖ್ಯಗುರುಗಳು ಸಿಬ್ಬಂದಿ ವರ್ಗ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸಂಸ್ಥೆಯ ಎಲ್ಲಾ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;