ವರದಿ. ಖಾಜಾವಲಿ

ಇಂದು ಪ್ರತಿ ಭಾನುವಾರದಂತೆ ನಮ್ಮ ಕ್ಲೀನ್ & ಗ್ರೀನ್ ಫೋರ್ಸ್ ತಂಡದ ವತಿಯಿಂದ ಸರಕಾರಿ ಪ್ರೌಢಶಾಲೆ,ಸಿದ್ದಾಪುರದ ಆವರಣದಲ್ಲಿ ಸಸಿಗಳಿಗೆ ನೀರುಣಿಸುವ ಮತ್ತು ಸ್ವಚ್ಛತಾ ಕಾರ್ಯ ನಡೆಯಿತು. ಜೊತೆಗೆ ಸಿದ್ದಾಪುರದ “ಪವಾರ್ ಮ್ಯಾನ” (ಶಕ್ತಿಮಾನ್)ಗಳಿಗೆ ಕೆ.ಇ.ಬಿ.ಯಲ್ಲಿ ಕಾರ್ಯನಿರ್ವಹಿಸುತ್ತಿರುವ “ಲೈನ್ ಮ್ಯಾನ್ “ಗಳಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು,ಹಾಗೂ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮತ್ತು ಕೆ ಇ ಬಿ ನೌಕರರಿಗೆ ಸಸಿಗಳನ್ನು ವಿತರಿಸಿ ಸನ್ಮಾನಿಸಲಾಯಿತು , ಈ ಸಂದರ್ಭದಲ್ಲಿ “ಲೈನ್ ಮ್ಯಾನ್”ಗಳಾದ ಕೆ.ಇ.ಬಿ. ನೌಕರರಾದ ಶ್ರೀ ನರಸಿಂಗ್ ರವರು ಶ್ರೀ ಮಣಿ ಯವರು ,ಶ್ರೀ ಮಹಾಂತೇಶ,
ಶ್ರೀ ಜಾವೀದ್ ಪಾಷಾ,ಶ್ರೀ ಅಲ್ತಾಫ್ ಮುಲ್ಲರ್, ಶ್ರೀ ಮಹಮ್ಮದ್ ರಫೀ, ಶ್ರೀ ವೀರೇಶ ನಾಯಕ, ಮತ್ತು ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ ಮಾಲೀಪಾಟೀಲ್,ಪಂಪನಗೌಡಸಂಕನಾಳ, ಹಾಗೂ ಕ್ಲೀನ್ & ಗ್ರೀನ್ ಫೋರ್ಸ್ ತಂಡದ ಸದಸ್ಯರಾದ ಶಿಕ್ಷಕರಾದ ಶ್ರೀ ಶರಣಪ್ಪ ಗೌರಿಪುರ, ಶ್ರೀ ವಿಠಲ್ ಜೀರಗಾಳಿ, ಚಂದ್ರಶೇಖರ ಗಣವಾರಿ , ಶ್ರೀಮತಿ ಸುಮಂಗಲ ಸಿಂಪಿ ,ಬಸವರಾಜ ಎನ್, ಸಚಿನ್,ಹಾಸ್ಟೇಲ್ ಸಿಬ್ಬಂದಿಗಳಾದ ಶ್ರೀ ಗದ್ದೆಪ್ಪ ಜಿ ಕುರಿ, ಮಹಮ್ಮದ ರಫೀ,ನಿರುಪಾದಿ, ಮತ್ತು ವಿದ್ಯಾರ್ಥಿಗಳು ಪಾಲ್ಗೋಂಡಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
