- ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಗುರುಭವನದಲ್ಲಿ ಇಂದು ಭಾರತೀಯ ವಿದ್ಯಾರ್ಥಿ ಸಂಘ ಮತ್ತು ಪ್ರಬುದ್ಧ ಭಾರತ ಜನಸೇವಾ ಕೇಂದ್ರ ಮೊಳಕಾಲ್ಮುರು ಇವರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಾದ “IAS/KAS/PSI/FDA/SDA/PDO/ ಪರೀಕ್ಷೆ ತಯಾರಿ ಕುರಿತು. ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು . ಈ ತರಬೇತಿಯನ್ನು ನೀಡಲು ಖ್ಯಾತ IAS ತರಬೇತುದಾರರಾದ ಡಾ. ಶಿವಕುಮಾರ್, ನಿರ್ದೇಶಕರು ಅಕ್ಕಾ IAS ಅಕಾಡೆಮಿ ಬೆಂಗಳೂರು ಮತ್ತು ದೆಹಲಿ ಇವರು ನೀಡಲಿದ್ದು ,ತಾಲ್ಲೂಕಿನ ಪದವೀಧರರು,ಪರೀಕ್ಷೆ ತಯಾರಿಯಲ್ಲಿರುವವರು,ಹಾಗೂ ಪ್ರೀತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು,ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರುತ್ತೇವೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಗ್ರ ಶ್ರೇಯಾಂಕದ ಫಲಿತಾಂಶ ಗಳಿಸಬೇಕಿದೆ. ಸರ್ಕಾರಿ ಹುದ್ದೆ ಪಡೆದು ಸ್ವಾಭಿಮಾನದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ| ಶಿವಕುಮಾರ್ ಕರೆ ನೀಡಿದರು. ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಪ್ರಬುದ್ಧ ಭಾರತ ಜನಸೇವಾ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಐಎಎಸ್, ಕೆಎಎಸ್, ಪಿಎಸ್ಐ, ಪಿಡಿಒ, ಎಫ್ಡಿಎ ಹಾಗೂ ಎಸ್ಡಿಎ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಪಡೆಯದಿದ್ದಲ್ಲಿ ಸಮಾಜದಲ್ಲಿ ಮೈ ಘನತೆ, ಗೌರವಗಳು ಪ್ರಾಪ್ತವಾಗುವುದಿಲ್ಲ, ಮನುಷ್ಯನಿಗೆ ಉದ್ಯೋಗವಿಲ್ಲದ ಬದುಕು ಸ್ವಾಭಿಮಾನವಿಲ್ಲದ ಬದುಕಾಗುತ್ತದೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಮತ್ತು ಪರಿಪಕ್ವವಾಗಲು ಸೂಕ್ತವಾದಂತಹ ತರಬೇತಿಗಳು ಅತ್ಯಂತ ಅಗತ್ಯ ಎಂದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಯಾಂಕದೊಂದಿಗೆ ಉತ್ತೀರ್ಣರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ಯುಪಿಎಸ್ಸಿ ಪರೀಕ್ಷೆಯಲ್ಲಿ ಬಹುತೇಕರು ಉತ್ತರ ಭಾರತದವರೇ ಆಯ್ಕೆಯಾಗುತ್ತಿದ್ದಾರೆ. ಅವರ ಮಾತೃಭಾಷೆ ಹಿಂದಿಯಾಗಿರುವುದರಿಂದ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಅಧಿಕಾರಿಗಳಾಗಿ ಆಯ್ಕೆಯಾಗುತ್ತಾರೆ. ನಾವು ಕೂಡ ತೇರ್ಗಡೆಯಾಗಿ ಸುಲಭವಾಗಿ ಆಯ್ಕೆಯಾಗಿ ಅಧಿಕಾರಿಗಳಾಗಲು ಇಂಗ್ಲಿಷ್ ಭಾಷೆ ಯನ್ನು ಕಲಿಯಬೇಕಾಗಿರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಈ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ರೂಪಿಸಿಕೊಳ್ಳಬೇಕೆಂದರು. ಐಎಎಸ್ ತರಬೇತುದಾರರಾದ ಡಾ| ಕಿರಣ್ ಕುಮಾರ್ ಮಾತನಾಡಿ, ಜೀವನದಲ್ಲಿ ಯಶಸ್ಸನ್ನು ಗಳಿಸಲು ಅವಕಾಶಗಳ ಗೊಂಚಲಿಗೆ ಕೈ ಹಾಕಬೇಕು. ಹಾಗಾದಾಗ ಮಾತ್ರ ನಕ್ಷತ್ರಗಳನ್ನು ಮುಟ್ಟಲು ಸಾಧ್ಯ. ಹಾಗೆಯೇ ನಮ್ಮ ಕನಸುಗಳ ದೊಡ್ಡ ದೊಡ್ಡ ಹುದ್ದೆಗಳ ಮೇಲಿದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ದೇವರಾಜ ಒಡೆಯರ್, ವಿಚಾರವಾದಿ ಡಾ| ಶ್ರೀನಿವಾಸ್, ಹೈಕೋರ್ಟ್ ವಕೀಲ ಹರಿರಾಮ್, ನೌಕರರ ಸಂಘದ ಅಧ್ಯಕ್ಷ ಎಸ್. ಈರಣ್ಯ ಪ್ರಾಂಶುಪಾಲ ಒ, ಓಬಯ್ಯ, ಮಂಜಣ್ಣ ಬಿ.ವಿ.ಎಸ್ನ ಜಿಲ್ಲಾಧ್ಯಕ್ಷ ಪಿ. ಮಂಜಣ್ಣ ಪದ್ಮಾವತಿ ಮತ್ತಿತರರು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
