ಐ ಟಿ ಐ ಪ್ರವೇಶಕ್ಕೆ ಅವಧಿ ವಿಸ್ತರಣೆ… M

ವರದಿ. ಶಶಿಕುಮಾರ್ ಚಳ್ಳಕೆರೆ

ಐಟಿಐ ಪ್ರವೇಶಕ್ಕೆ ಅವಧಿ ವಿಸ್ತರಣೆ
ಚಿತ್ರದುರ್ಗ,ಫೆಬ್ರುವರಿ12;
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2020-21ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದಂತೆ ಆಪ್‍ಲೈನ್‍ನಲ್ಲಿ ಆಕಸ್ಮಿಕ ಸುತ್ತಿನಲ್ಲಿ ಅರ್ಜಿ ಸಲ್ಲಿಸಲು ಅವಧಿಯನ್ನು ಫೆಬ್ರವರಿ 15ರವರೆಗೆ ವಿಸ್ತರಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಮುಂದುವರೆದ ಸುತ್ತಿನಲ್ಲಿ ಪ್ರಾಚಾರ್ಯರ ಹಂತದಲ್ಲಿ ಬಾಕಿ ಉಳಿದಿರುವ ಸ್ಥಾನಗಳಿಗೆ ಮಾತ್ರ ಫೆಬ್ರುವರಿ 15ರಂದು ಅರ್ಜಿ ಸ್ವೀಕರಿಸಲು ಮತ್ತು ಪ್ರವೇಶ ಮಾಡಿಕೊಳ್ಳಲು ಕೊನೆಯ ದಿನಾಂಕವಾಗಿರುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವವರು ಮತ್ತು ಈಗಾಗಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳದವರು ಪರಿಶೀಲನಾ ಶುಲ್ಕ ರೂ. 50/- ಪಾವತಿಸಿ ಅರ್ಜಿ ಪರಿಶೀಲಿಸಿಕೊಳ್ಳುವುದು. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿಸಿ ಸ್ಥಾನ ಹಂಚಿಕೆ ಆಗದವರು ಹಾಗೂ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ಸ್ಥಾನ ವಿತರಣೆಯಾಗಿ ಪ್ರವೇಶ ಪಡೆದುಕೊಳ್ಳದವರು ಶುಲ್ಕ ರೂ. 50/- ರಿಂದ ವಿನಾಯಿತಿ ನೀಡಲಾಗಿದೆ. ಹಾಗೂ ರೂ. 50/- ಪಾವತಿಸಿರುವ ರಸೀದಿಯ ಪ್ರತಿಯನ್ನು ಲಗತ್ತಿಸಬೇಕು. ಈ ಸಂಸ್ಥೆಯು ಮಹಿಳಾ ಸಂಸ್ಥೆ ಆಗಿದ್ದು, ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಕಚೇರಿಗೆ ಬಂದು ಅರ್ಜಿಯನ್ನು ಸ್ವೀಕರಿಸಿ ಫೆಬ್ರುವರಿ 15ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ(ಮ) ಪ್ರಾಚಾರ್ಯರ ಬಿ.ಸುರೇಶ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು  ಸರ್ಕಾರಿ (ಮ) ಕೈಗಾರಿಕಾ ತರಬೇತಿ ಸಂಸ್ಥೆ ಚಿತ್ರದುರ್ಗ, ದೂರವಾಣಿ ಸಂಖ್ಯೆ 08194-234515ಗೆ ಸಂಪರ್ಕಿಸಬಹುದು.
ಖಾಲಿ ಉಳಿದಿರುವ ವೃತ್ತಿಗಳ ವಿವರ: 1 ವರ್ಷ ಅವಧಿಯ  COPA ncvt    ಕೋರ್ಸ್‍ನ 37 ಸ್ಥಾನಗಳು ಖಾಲಿ ಉಳಿದಿದ್ದು, ಎಸ್‍ಎಸ್‍ಎಲ್‍ಸಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2 ವರ್ಷ ಅವಧಿಯ TPES ncvt  ಕೋರ್ಸ್‍ನ 12 ಸ್ಥಾನಗಳು ಖಾಲಿ ಉಳಿದಿದ್ದು, ಒಟ್ಟು 49 ಸ್ಥಾನಗಳಿಗೆ ಎಸ್‍ಎಸ್‍ಎಲ್‍ಸಿ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
==========

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend