;

ವಿಜಯನಗರ ಲಿಂಗಾಯಿತ ಮಠಾಧಿಪತಿಗಳು ಒಕ್ಕೂಟ ವತಿಯಿಂದ ವಿಶೇಷ ಆಹ್ವಾನ…!!!

ದಿನಾಂಕ :30.8.2025 ರಂದು ವಿಜಯನಗರ ಲಿಂಗಾಯಿತ ಮಠಾಧಿಪತಿಗಳು ಒಕ್ಕೂಟ ವತಿಯಿಂದ 2025 ಸೆಪ್ಟಂಬರ್ 1 ರಿಂದ ಅಕ್ಟೋಬರ್ 1 ರವರೆಗೆ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾllಶ್ರೀನಿವಾಸ್ ಎನ್ ಟಿ ರವರನ್ನ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟದ ಪದಾಧಿಕಾರಿಗಳು ವಿಶೇಷವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾll ಶ್ರೀನಿವಾಸ್ ಎನ್ ಟಿ ರವರು ಮಾತನಾಡಿ, ಮಾನ್ಯ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ‘ಸಾಂಸ್ಕೃತಿಕ ನಾಯಕನ ಬಸವಣ್ಣ ‘ ಎಂದು ಘೋಷಣೆ ಮಾಡಿದರು. ಇದೊಂದು ಐತಿಹಾಸಿಕ ಘಟನೆ. ಬಸವಣ್ಣನವರು ಕರ್ನಾಟಕ ಮಾತ್ರ ಅಲ್ಲ : ” ವಿಶ್ವದ ಸಂಸ್ಕೃತಿ ನಾಯಕ” ಬಡವ- ಬಲಿದ ಎನ್ನುವ ಭೇದಭಾವವಿಲ್ಲದ ಸಮ ಸಮಾಜವನ್ನು ನೆಲೆಗೊಳಿಸಿದವರು. ಅಂತಹ ಮಹಾ ನಾಯಕರ ಆದರ್ಶಗಳನ್ನ, ವಿಚಾರಗಳನ್ನ, ಮೌಲ್ಯಗಳನ್ನ ನಾನು ಅಳವಡಿಸಿಕೊಂಡು ನಿರಂತರವಾಗಿ ಬಿಡುವಿಲ್ಲದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಲಿಂಗಾಯಿತ ಮಠಾಧಿಪತಿಗಳ ಪ್ರಗತಿಪರ ಒಕ್ಕೂಟದ ಪದಾಧಿಕಾರಿಗಳು ಹಾಗೂ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು & ಸದಸ್ಯರುಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು…

ವರದಿ ಎಂ ಬಸವರಾಜ್ ಕಕ್ಕುಪ್ಪಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;