ಮೋಡಿ ಲಿಪಿ ದಾಖಲೆಯ ಮಹಾಲಿಂಗೆಶ್ವರ ಮಠ ಪುಸ್ತಕ ಬಿಡುಗಡೆ.
ಮಹಾಲಿಂಗಪುರ: ಶ್ರಾವಣ ಮಾಸದ ಮೊದಲ ಸೋಮವಾರದಂದು ಪಟ್ಟಣದ ಆರಾಧ್ಯ ದೈವ ಜಗದ್ಗುರು ಶ್ರೀ ಮಹಾಲಿಂಗೆಶ್ವೇರ ಮಠದ ಮೋಡಿ ಲಿಪಿ ದಾಖಲೆಯ ಕಾಗದದಿಂದ ಮೋಡಿ ಲಿಪಿ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿಯವರ ರಚಿಸಿದ ಮೋಡಿ ದಾಖಲೆಯಲ್ಲಿ ಶ್ರೀ ಜಗದ್ಗುರು ಮಹಾಲಿಂಗೆಶ್ವರ ಪುಸ್ತಕವನ್ನು ಮ.ನಿ.ಪ್ರ ಶ್ರೀ ರಾಜೇಂದ್ರ ಮಹಾ ಸ್ವಾಮಿಗಳು ಬಿಡುಗಡೆಗೊಳಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು ಡಾ. ಕಲ್ಯಾಣಿಯವರು ಶ್ರೀ ಮಠಕ್ಕೆ ಆಗಮಿಸಿದಾಗ ಪುರಾತನ ಕಾಲದಿಂದ ಸಂಗ್ರಹಿಸಿಡಲಾದ ಮೋಡಿ ದಾಖಲೆಯ ಮೂಲ ಆಸ್ತಿ ಕ್ರೋಡಿಕರಣ ಮಾಡಿ ದಾಖಲಿಸುವ ಬಗ್ಗೆ ತಿಳಿಸಿದಾಗ ಎಲ್ಲ ಇತಿಹಾಸ ಕಾಗದಗಳನ್ನು ನೀಡಿದ್ದರಿಂದ ಪುಸ್ತಕ ರಚಿತವಾಗಿ ಈ ಪುಸ್ತಕ ಮೂಡಿ ಬಂದಿದೆ. ಸುಳ್ಳು ಸಾಕ್ಷಿ ಇರಬಾರದೆಂಬ ಶ್ರೀಗಳ ಬಯಕೆ ಅಂತೆ ಸತ್ಯ ಸಂಗತಿಗಳು ಒಳಗೊಂಡ ಸಾಕ್ಷ ದಾಖಲೆಯ ಛಾಯಾಚಿತ್ರಗಳನ್ನು ಬಳಸಿ ಪುಸ್ತಕ ರಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸದ್ಬಕ್ತರಿಗೆ ಭಕ್ತಿ ಪೂರ್ವಕವಾಗಿ ಆಧಾರ ಸಹಿತ ಸಾಕ್ಷಿಕರೆಸಲು ಈ ಪುಸ್ತಕವನ್ನು ಪ್ರಕಟಗೊಳಿಸಲಾಗಿದೆ ಇದರಲ್ಲಿ ಡಾ. ಕಲ್ಯಾಣಿಯವರು ಸಂಶೋಧನಾತ್ಮಕ ವಿಚಾರಗಳನ್ನು ಹಂಚಿಕೊಂಡಿರುವುದ ಗಮನಾರ್ಹ ಎಂದರು. ಮಠದ ಇತಿಹಾಸ ವ್ಯಾಪಕವಾದದ್ದು ಮತ್ತು ವೈವಿಧ್ಯಮಯ ಆಗಿರುವುದರಿಂದ ವೈಶಿಷ್ಟ್ಯತೆ ಗುರುತಿಸಿ ಸದ್ಯದ ವಿದ್ಯಮಾನಗಳ ಅನುಗುಣವಾಗಿ ವಿಭಿನ್ನ ದೃಷ್ಟಿಯಿಂದ ಭೌತಿಕ ಸರುಕಗಳ ಕ್ರಮದಲ್ಲಿ ಮೌಲ್ಯ ಮಾಪನ ಮಾಡಿ ವಿಶ್ಲೇಷಿಸಿದ್ದಾರೆ. ಅದರ ಎಲ್ಲೆಗಳು ಹರಡಿಕೊಂಡ ರೀತಿ ಅದೇ ಜಾಡಿನಲ್ಲಿ ನಡೆದಿರುವುದು ಡಾ. ಕಲ್ಯಾಣಿಯವರ ಅಧ್ಯಯನದ ಶಿಸ್ತು ಮೆಚ್ಚುವಂತಹದ್ದು. ಶೀಮಠದ ತಾಳೇಗರಿ ಪ್ರತಿ ಗ್ರಂಥಗಳನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಹಿಂದಿನ ಗುರುಗಳು ನೀಡಿದ್ದಾರೆ ಅವುಗಳು ವಚನ ಸಾಹಿತ್ಯದ ಮಹತ್ವದ ಗ್ರಂಥಗಳಾಗಿದ್ದವು.

ಬಸವಾದಿ ಪ್ರಮಥರ ಲೊಕೋದ್ದಾರ ಚಿಂತನೆ ನಡೆ-ನುಡಿ ಆಚಾರ ಪಾಲಿಸುತ್ತಾ ಬಂದಿದ್ದರಿಂದ ಚರಿತ್ರೆಯಲ್ಲಿ ಶ್ರೀ ಮಹಾಲಿಂಗೆಶ್ವೇರ ಸಂಸ್ಥಾನ ಮಠವು ಇಡೀ ಮಠ ಪರಂಪರೆಯಲ್ಲಿ ಜಗದ್ಗುರು ಎಂಬ ಅಭಿದಾನ ಗೌರವಕ್ಕೆ ಪಾತ್ರವಾಗಿದೆ. ಮಠದ ಭಕ್ತರು ಸದಾ ಧಾನ-ಧರ್ಮ, ಜಟಾಭಿಷೇಕದಂತಹ ಪೂಜೆಗೈದು ಶ್ರೀ ಮಹಾಲಿಂಗೆಶ್ವೇರ ಆಶಿರ್ವಾದ ಪಡೆದು ಮಠದ ಸದ್ಬಕ್ತರಾಗಿ ಮಠದ ಆಚರಣೆಯ ಆಯಾಕಾಲನು ಸಮಯದಲ್ಲಿ ಸಮರ್ಪಕವಾಗಿ ನಡೆದು ಬಂದಿದ್ದಾಗಿದೆ. ಡಾ. ಕಲ್ಯಾಣಿಯವರು ಶ್ರೀಮಠದ ಭಕ್ತರು ಹಳೆಯ ಪತ್ರ ವ್ಯವಹಾರ ಗಳನ್ನು ಇದ್ದಿದ್ದು ಗಮನಿಸಿ ಅದನ್ನು ವ್ಯವಸ್ಥಿತವಾಗಿ ಸಂರಕ್ಷಿಸಿದರಿಂದ ಮಠದ ಇತಿಹಾಸ ಇನ್ನು ಹೆಚ್ಚು ತಿಳಿಯುತ್ತದೆ ಮತ್ತು ಮುಂದಿನ ಪೀಳಿಗೆಗೆ ತಿಳಿಸಲು ಸರಳವಾಗುವುದು ಎಂದು ನುಡಿದರು. ಶ್ರಾವಣ ಮಾಸದ ಮೊದಲ ಸೋಮವಾರದ ಬೆಳಗಿನ ಸೇವಾಪೂಜೆಗೆ ಸುಕ್ಷೇತ್ರದ ಸದ್ಬಕ್ತರು ಸಾಕ್ಷಿಯಾದರು..

ವರದಿ.ಬಸವರಾಜ ನಂದೆಪ್ಪನವರ.
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
