;

ಗಂಗಾವತಿ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಭೇಟಿ!!!!!

ಗಂಗಾವತಿ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಭೇಟಿ!!!!!
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ನಗರ ತಾಲೂಕು ಪಂಚಾಯತ್ ಅವರಣದಲ್ಲಿ ಇರುವ ಸಾಹಿತ್ಯ ಪರಿಷತ್ ಭಾವನೆಗೆ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಭೇಟಿ ನೀಡಿ ಕಟ್ಟಡವನ್ನು ವೀಕ್ಷಣೆ ಮಾಡಿದರು. ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ಅವೈಜ್ಞಾನಿಕವಾಗಿನಿರ್ಮಾಣ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಶಾಸಕರಿ ದೂರು ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಬುಧವಾರ ದಂದು ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂತು. ಕಟ್ಟಡ ಬಾಲ್ಕನಿ ಭಾಗದಲ್ಲಿ ಗೋಡೆ ನಿರ್ಮಾಣ ಮಾಡಿ ಮುಚ್ಚಲಾಗಿದೆ. ಅದೇ ರೀತಿ ಧ್ವನಿ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲದಿರುವುದು ಸಹ ಕಂಡು ಬಂದಿತು. ಕನ್ನಡ ಸಾಹಿತ್ಯ ಪರಿಷತ್ ಭವನ ಸಮಸ್ಯೆಯಲ್ಲಿರುವುದು ಶಾಸಕರು ಮನಗಂಡು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚಿಸಿದರು. ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಕನ್ನಡ ಸಾಹಿತ್ಯ ಪರಿಷತ್ ಭವನವನ್ನು ದುರಸ್ತಿಗೊಳಿಸಿ ಬಳಕೆ ಬರುವಂತೆ ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಭವನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತದೆ ಎಂದು ತಿಳಿಸಿದರು. ಕಟ್ಟಡದಲ್ಲಿದ್ದೀನಿ ಸರಿ ಇಲ್ಲ ಇದನ್ನು ಸರಿಪಡಿಸಲಾಗುವುದು ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಕ ಅಧಿಕಾರಿ ಹಾಗೂ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಇಂದು ನನ್ನ ಜೊತೆಯಲ್ಲಿ ಭೇಟಿ ನೀಡಿದ್ದಾರೆ. ಸರಿಪಡಿಸಲು ಅವರಿಗೆ ಸೂಚಿಸುತ್ತೇನೆ. ದಕ್ಷಿಣ ಕನ್ನಡ ಬಳಕೆ ಬರುವ ರೀತಿಯಲ್ಲಿ ದುರಸ್ತಿ ಕಾರ್ಯ ಮಾಡುವಂತೆ ತಿಳಿಸುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ್ ತಾಲೂಕ್ ಅಧ್ಯಕ್ಷ ಶ್ರೀನಿವಾಸ್ ಅಂಗಡಿ. ಚಂದ್ರಶೇಖರ್ ಅಕ್ಕಿ. ರಮೇಶ್ ಕುಲಕರ್ಣಿ. ಶಿವನಂದ ತಿಮ್ಮಪುರ್. ಚನ್ನಬಸವ. ಮಹೇಶ್ ಸಿಂಗನಾಳ. ಶ್ರೀನಿವಾಸ್. ಎಂ.ಜಿ.ಪಂಪಣ್ಣ ನಾಯಕ. ಸುರೇಶ್. ಕಲಾಪ್ರಿಯ. ರಮೇಶ್ ಹಾಗೂ ತಾಲೂಕು ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿದ್ದರು…


ವರದಿ,ಹೆಚ್. ಮಲ್ಲೇಶ್ವರಭಂಡಾರಿ ಗಂಗಾವತಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;