ಅದ್ಧೂರಿಯಿಂದ ಜರುಗಿದ ಮುದ್ದಿ ಬಸವೇಶ್ವರ ರಥೋತ್ಸವ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಶ್ರೀ ಮುದ್ದಿ ಬಸವೇಶ್ವರ ರಥೋತ್ಸವ ಗುರುವಾರ ಸಂಜೆ ಅದ್ಧೂರಿಯಿಂದ ಜರುಗಿತು.ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಪೂಜೆ ಅಭಿಷೇಕ ಮಂಗಳಾರತಿ ಗಂಟಾನಾದ ಮೊಳಗಿದವು.ಗುರುವಾರ ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುದ್ದಿ ಬಸವೇಶ್ವರ ಸ್ವಾಮಿ ಯ ಹುಚ್ಚಯ್ಯ ಉತ್ಸವ ಸಮಾಳ ನಂದಿಕೋಲು ವಿವಿಧ ವಾದ್ಯ ಮೇಳ ದೊಂದಿಗೆ ಜರುಗಿತು.ಬಳಿಕ ದೇವಸ್ಥಾನದ ಆವರಣದಲ್ಲಿ ಅಗ್ನಿ ಆಯುವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಸಂಜೆ ರಥೋತ್ಸವದ ವೇಳೆ ನೆಡೆದ ಪಟಾಕ್ಷಿ ಹರಾಜು ಪ್ರಕ್ರಿಯೆ ಯಲ್ಲಿ ಚಿನಿವಾಲರ ಕೊಟ್ರೇಶ್ ಅವರು 30 ಸಾವಿರ 101 ರೂಪಾಯಿಗೆ ಪಡೆದರು.ನಂತರ ಸಹಸ್ರಾರು ಭಕ್ತರ ಜಯಘೋಷ ದ ಮದ್ಯ ಮುದ್ದಿ ಬಸವೇಶ್ವರ ಸ್ವಾಮಿ ರಥೋತ್ಸವ ಅದ್ದೂರಿಯಾಗಿ ಜರುಗಿತು.ಈ ವೇಳೆ ಮಾಲವಿ ಗ್ರಾಮದ ದೈವಸ್ಥರು ಹಿರಿಯರು ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ಪಾಲ್ಗೊಂಡಿದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
