ಹೊಳಲ್ಕೆರೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ ಮಾಜಿ ಸಚಿವ ಹೆಚ್ ಆಂಜನೇಯ.

ಮಾಜಿ ಸಚಿವ ಹೆಚ್. ಆಂಜನೇಯ ಅವರು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ನಿರಂತರ ಪ್ರಚಾರ ಕೈಗೊಂಡಿದ್ದು, ಕ್ಷೇತ್ರದ ಉದ್ದಗಲಕ್ಕೂ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದು. ತಾಳ್ಯ ಜಿಲ್ಲಾ ಪಂಚಾಯ್ತಿ ಕ್ಷೇತ್ರವ್ಯಾಪ್ತಿಯಲ್ಲಿ ಇಂದು ಗೌಡಿಹಳ್ಳಿ, ಗೊಲ್ಲರಹಳ್ಳಿ, ಎನ್ ಜಿ, ಹಳ್ಳಿ ಆವಿನಹಟ್ಟಿ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಈ ಸಲ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕೆಂದು ವಿನಂತಿಸಿದರು.

ಇನ್ನು ಪ್ರಚಾರದ ವೇಳೆ ಜೆಸಿಬಿ ಮೂಲಕ ಆಂಜಿನೇಯ ಮತ್ತು ಮಾಜಿ ಶಾಸಕ ಉಮಾಪತಿ ವೈಶಾಕ್ ಯಾದವ್ ಅವರಿಗೆ ಆವಿನಹಟ್ಟಿ ಗ್ರಾಮದಲ್ಲಿ ಬೃಹತ್ ಹೂವಿನ ಹಾರ ಹಾಕಿ, ಗ್ರಾಮದಲ್ಲಿ ಹೂಮಳೆ ಸುರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಂಗಾಧರ್, ರಂಗಸ್ವಾಮಿ, ಮೋಹನ್ ರಾಜ್ ಬಾಬಣ್ಣ, ದುಮ್ಮಿ ಚಿತ್ತಪ್ಪ ಯಾದವ್, ಇನ್ನು ಅನೇಕ ಮುಖಂಡರು ಇದ್ದರು..

ವರದಿ. ಸುರೇಶ್. ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
