ಸ್ಥಳೀಯರಗೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ

ಬನಹಟ್ಟಿ: ಮುಂಬರುವ ಕರ್ನಾಟಕದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಭಾರಿ ಕುತೂಹಲ ಮೂಡಿಸಿದ್ದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಟ್ಟಿ ಬಿಡುಗಡೆ ಹಿನ್ನೆಲೆ ರಾಜ್ಯಾದ್ಯಂತ ಟಿಕೆಟ್ ತಪ್ಪಿದ ಆಕಾಂಕ್ಷಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು ಅದೇ ರೀತಿ ತೇರದಾಳ ವಿಧಾನಸಭಾ ಮತಕ್ಷೇತ್ರದ ಬನಹಟ್ಟಿಯ ಈಶ್ವರಲಿಂಗ ಮೈಧಾನದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಬಿಜೆಪಿ ಟಿಕೆಟ್ ಸ್ಥಳೀಯರಿಗೆ ಮತ್ತು ನೇಕಾರರಿಗೆ ನೀಡದೆ ಇರುವುದನ್ನು ಖಂಡಿಸಿ ಪ್ರತಿಭಟಿಸಲಾಯಿತು.

ತೇರದಾಳ ಮತಕ್ಷೇತ್ರದಿಂದ ಸತತ ಮೂರು ಬಾರಿ ಬಿಜೆಪಿ ನೀಡಿದ್ದು ಈ ಬಾರಿಯೂ ಸಿದ್ದು
ಸವದಿಯವರಿಗೆ ಟಿಕೆಟ್ ನೀಡಿದ್ದು ಸ್ಥಳೀಯರಿಗೆ ಮತ್ತು ತೇರದಾಳ ಮತಕ್ಷೇತ್ರದಲ್ಲಿ ಅತೀ ಹೆಚ್ಚು ನೇಕಾರರಿದ್ದು ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಹೈಕಮಾಂಡ್ ಸ್ಥಳೀಯವಾಗಿ ನಿಷ್ಠಾವಂತ ಕಾರ್ಯಕರ್ತರು ಮತ್ತು ಪಕ್ಷಕ್ಕಾಗಿ ದುಡಿದ ಆಕಾಂಕ್ಷಿಗಳನ್ನು ಪರಿಗಣಿಸಿ
ಟಿಕೆಟ್ ನೀಡಬೇಕು ಒಂದು ಸ್ಥಳೀಯರಿಗೆ ನೀಡದೆ ಇದ್ದರೆ ಬಾರಿ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯ ವೀರಬಿಕ್ಷಾವರ್ತಿ ಮಠದ ಶಿವಶಂಕರ ಸ್ವಾಮೀಜಿ ಮಾತನಾಡಿ ತೇರದಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ನೇಕಾರರಿಗೆ ನೀಡಬೇಕು ಒಂದುವೇಳೆ ನೀಡದಪಕ್ಷ ನೇಕಾರರು ಬಿಜೆಪಿಗೆ ಮತ ನೀಡಬಾರದು ಎಂದು ತಿವ್ರ ಆಕ್ರೋಶ ಹೊರ ಹಾಕಿದರು. ತೇರದಾಳ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಭೀಮಶಿ ಮಗದುಮ, ಬಸವರಾಜ ಬಾಳಿಕಾಯಿ,ರಾಜು ಅಂಬಲಿ,ಮಹಾದೇವ ಮಾರಾಪುರ,ಕಿರಣ ದೇಸಾಯಿ,ಬಸವರಾಜ ದಲಾಲ ಬಿಜೆಪಿ ಮುಖಂಡರಾದ ಕುಮಾರ ಕದಂ,ಬ್ರಿಜ್ ಮೋಹನ್ ಡಾಗಾ,ದೇವಳಸರ್ಕಾರ ದೇಸಾಯಿ ಹಾಗೂ ಸ್ಥಳೀಯ ಆಕಾಂಕ್ಷಿಗಳ ಬೆಂಬಲಿಗರು ಉಪಸ್ಥತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ರಬಕವಿ-ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
