;

ಸಿ ವಿಜಿಲ್ ಆಪ್ ಬಳಸಿ ಚುನಾವಣಾ ಅಕ್ರಮ, ಭ್ರಷ್ಟಾಚಾರ ತಡೆಯಬಹುದು. ಚುನಾವಣಾ ಅಧಿಕಾರಿ ತೇಜ್ ಆನಂದ್ ರೆಡ್ಡಿ…!!!

ಸಿ ವಿಜಿಲ್ ಆಪ್ ಬಳಸಿ ಚುನಾವಣಾ ಅಕ್ರಮ, ಭ್ರಷ್ಟಾಚಾರ ತಡೆಯಬಹುದು. ಚುನಾವಣಾ ಅಧಿಕಾರಿ ತೇಜ್ ಆನಂದ್ ರೆಡ್ಡಿ. ವಿಜಯನಗರ ಜಿಲ್ಲೆ ,ಹಗರಿಬೊಮ್ಮನಹಳ್ಳಿ, ಸಿ.ವಿಜಿಲ್ ಆಪ್ ನಲ್ಲಿ ನೇರವಾಗಿ ಚುನಾವಣಾ ಅಕ್ರಮಗಳ ಫೋಟೋ ವಿಡಿಯೋ ಹಂಚುವುದರ ಮೂಲಕ ಭ್ರಷ್ಟಾಚಾರ ತಡೆಗಟ್ಟಬಹುದು ಇದು ಸ್ಪಷ್ಟ ಜಿಪಿಎಸ್ ಅಧಿಕವಾಗಿರುತ್ತದೆ. ಎಂದರು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚುನಾವಣೆ ಅಧಿಕಾರಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ, ತೇಜಾನಂದ ರೆಡ್ಡಿ ತಿಳಿಸಿದರು. ಪಟ್ಟಣದ ಹಳೆ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ನಾಮಿನೇಷನ್ ಗೆಜೆಟ್ ನೋಟಿಫಿಕೇಶನ್, ಏಪ್ರಿಲ್ 13ರಂದು ಪ್ರಾರಂಭ, ನಾಮಿನೇಷನ್ ಕಡೆಯ ದಿನಾಂಕ 26ರಂದು ಇರುತ್ತದೆ. ಹಾಗೂ ನಾಮಿನೇಷನ್ ಪರಿಶೀಲನೆ 21ರಂದು , ಅಭ್ಯರ್ಥಿಗಳ ನಾಮಪತ್ರ ವಾಪಸತಿಗೆ 24ರಂದು ನಿಗದಿಪಡಿಸಲಾಗಿದೆ ‌ ಮತದಾನ ಮೇ ಹತ್ತರಂದು. ಫಲಿತಾಂಶ ಮೇ 13 ರಂದು ಇರುತ್ತದೆ. ಎಂದು ತಿಳಿಸಿದರು. ನಮ್ಮ ಹ.ಬೊ. ಹಳ್ಳಿಯಲ್ಲಿ ಸರಿಸುಮಾರು 2,25,395, ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಈಗಾಗಲೇ ಎನ್‌ಸಿಸಿ ತಂಡ, ಮೂರು ತಂಡಗಳು ಹ.ಬೊ. ಹಳ್ಳಿ, ಮರಿಯಮ್ಮನಹಳ್ಳಿ, ಕೊಟ್ಟೂರು, ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಕಾರ್ಯಪ್ರತರಾಗಿದ್ದಾರೆ. ಏನಾದರೂ ತಪ್ಪು ಮಾಹಿತಿ ಕಂಡು ಬಂದರೆ ಚುನಾವಣಾ ನೀತಿ ಸಂಹಿತೆ ಕಾಯ್ದೆ ಪ್ರಕಾರ ಸೂಕ್ತ ಕ್ರಮ ವಹಿಸಲಿದ್ದಾರೆ. 13ನೇ ತಾರೀಖಿನಿಂದ ನಾಮಿನೇಷನ್ ಪ್ರಕ್ರಿಯೆ ಶುರುವಾಗುತ್ತೆ, 20ನೇ ತಾರೀಕು ಕೊನೆಯ ದಿನಾಂಕ, 21, 24 ರಂದು ಉಮೇದು ವಾರಕೆಯನ್ನು ಹಿಂಪಡೆಯುವುದು ‌ ಎಲ್ಲಾ ಸಾರ್ವಜನಿಕ ರಜಾ ದಿನಗಳಲ್ಲಿ, ಹಾಗೂ ಎರಡನೇ ಶನಿವಾರ ಸರಕಾರಿ ರಜಾ ದಿನಗಳಲ್ಲಿ ನಾಮಪತ್ರ ಸ್ವೀಕಾರ ಮಾಡುವುದಿಲ್ಲ. ಬೆಳಗ್ಗೆ 11-00 ರಿಂದ 3-00 ಗಂಟೆಯವರೆಗೆ ನಾಮಪತ್ರ ಸ್ವೀಕಾರ ಮಾಡಲಾಗುತ್ತೆ. ಮುಖ್ಯವಾಗಿ ನಾವು ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ದಾಟಿದಂತ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮತ ,ಹ.ಬೊ. ಹಳ್ಳಿ ಮತಕ್ಷೇತ್ರದಲ್ಲಿ ಸರಿಸುಮಾರು, 7,095 ಜನ ಈ ಭಾಗದಲ್ಲಿ ಇದ್ದಾರೆ. ಇವರಿಗೆ ನೂತನವಾಗಿ ಪೋಸ್ಟಲ್ ಬ್ಯಾನರ್ಸ್, ಮುಖಾಂತರ ಅವರ ಮನೆಗೆ ತೆರಳಿ ಗುಪ್ತವಾಗಿ, ಮತದಾನ ಮಾಡಿಸಲಾಗುತ್ತದೆ ಎಂದರು.ಹ.ಬೊ. ಹಳ್ಳಿ ಕ್ಷೇತ್ರದಲ್ಲಿ ಒಟ್ಟು, 2,25,395, ಮತದಾರರ ಸಂಖ್ಯೆ ಇದೆ. ಅದರಲ್ಲಿ ಪುರುಷ ಮತದಾರ, 1,12,518, ಮಹಿಳಾ ಮತದಾರರು, 1,12,855, ಹಾಗೂ ಇನ್ನ 22 ಮತದಾನಗಳಿದ್ದಾರೆ ಎಂದರು. ಕ್ಷೇತ್ರದಲ್ಲಿ ಗರಗ, ನಾಗಲಾಪುರ, ಮರಿಯಮ್ಮನಹಳ್ಳಿ, ಹರಾಳು, ದಸಮಾಪುರ, ನಾಲ್ಕು ಕಡೆಗಳಲ್ಲಿ ಕಟ್ಟು ನಿಟ್ಟಿನ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. 23 ಸೆಕ್ಟರ್ ಆಫೀಸರ್,35 ಎನ್‌ಸಿ ಟೀಮ್,5 ಜನ ಮಾಸ್ಟರ್ ಟ್ರೈನಿಸ್, ಒಳಗೊಂಡಂತೆ ಅನೇಕ ಅಧಿಕಾರಿಗಳು ಚುನಾವಣೆ ಕೆಲಸ ನಿರ್ವಹಿಸಲಿದ್ದಾರೆ. ಈ ಬಾರಿ ಬಿಸಿಲು ಹೆಚ್ಚಾಗಿರುವುದರಿಂದ, ಮತಗಟ್ಟೆಗಳಲ್ಲಿ ಕುಡಿಯುವ ನೀರು, ಮತದಾರರು ಕುಳಿತುಕೊಳ್ಳಲು ಹಾಸನದ ವ್ಯವಸ್ಥೆ, ಅವಶ್ಯವಿದ್ದಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗುವುದು ಎಂದರು. ಸಹಾಯಕ ಚುನಾವಣೆ ಅಧಿಕಾರಿಗಳಾದ, ತಹಸಿಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿ ಮಾತನಾಡಿ, ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವೀಪ್ ಚಟುವಟಿಕೆ ಅಡಿಯಲ್ಲಿ ಮತಗಟ್ಟೆ ಜಾಗೃತಿ, ಪಂಜಿನ ಮೆರವಣಿಗೆ, ಮತದಾರರನ್ನು ಆಕರ್ಷಿಸಲ ವರ್ಣ ಕಲೆ, ಚಿತ್ರಣ, ಬೈಕ್ ರ್ಯಾಲಿ, ಹಮ್ಮಿಕೊಂಡಿದೆ. ಎಂದರು. ನಾಮಪತ್ರ ಸಲ್ಲಿಸಲು ಇಚ್ಚಿಸುವವರು ನಮೂನೆಗಳನ್ನು ಪಡೆಯಬಹುದಾಗಿದೆ. ಅಭ್ಯರ್ಥಿಯ ನಾಮಪತ್ರದೊಂದಿಗೆ ನಿಗದಿತ ನಮೂನೆ 26 ರಲ್ಲಿ ಪ್ರಮಾಣ ಪತ್ರ ಹಾಗೂ ಬೇಬಾಕಿ, ಬಗ್ಗೆ ಹೆಚ್ಚುವರಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದರು. ಈ ವೇಳೆಯಲ್ಲಿ, ಎನ್‌ಸಿಸಿ ನೋಡಲ್ ಅಧಿಕಾರಿ, ತಾಲೂಕು ಪಂಚಾಯಿತಿಯ ಇ, ಓ ಪರಮೇಶ್ವರಪ್ಪ, ಬಿಪಿ ನೋಡಲ್ ಅಧಿಕಾರಿ, ಕಿರಣ್ ಕುಮಾರ್, ಏ ಓ, ಇವಿಎಂ ನೋಡಲ್ ಅಧಿಕಾರಿ, ಶಶಿಕುಮಾರ್, ಉಪಸ್ಥಿತರಿದ್ದರು.

ವರದಿ, ಧನಂಜಯ್ ಹಗರಿಬೊಮ್ಮನಹಳ್ಳಿ .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;