;

ಶ್ರೀ ಕೋಡಿಬಸವೇಶ್ವರ ಕಲ್ಯಾಣೋತ್ಸವ. ಹಾಗೂ ರಥೋತ್ಸವ…!!!

.ಶ್ರೀ ಕೋಡಿಬಸವೇಶ್ವರ ಕಲ್ಯಾಣೋತ್ಸವ. ಹಾಗೂ ರಥೋತ್ಸವ.


ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು .ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಶ್ರೀ ಕೂಡಿ ಬಸವೇಶ್ವರ ಕಲ್ಯಾಣೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ. ಸೋಮವಾರದಿಂದಲೇ.ದಿನಾಂಕ10.4.2023ರಂದು ಪ್ರಾರಂಭವಾಗಿದ್ದು ವರ್ಷ ವರ್ಷವೂ ಸಹ ಈ ಶ್ರೀ ಕೋಡಿಬಸವೇಶ್ವರ ಕಲ್ಯಾಣೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುವುದು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಎನ್ನುವ ನುಡಿಯಂತೆ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಯಾವಾಗಲೂ ಧರ್ಮದ ಕಾರ್ಯಗಳು ನಡೆಯುತ್ತಾ ಬಂದಿದೆ ಒಂದು ವರ್ಷವು ಸಹ ಎಡಬಿಡದೆ ಧಾರ್ಮಿಕ ಕ್ಷೇತ್ರದಲ್ಲಿ ಸನಾತನವಾಗಿ ಆಚರಣೆ ಮಾಡುತ್ತ ಬರುತ್ತಾರೆ ಈ ಊರಿನಲ್ಲಿ ಯಾವಾಗಲೂ ಹಬ್ಬವೊ ಹಬ್ಬ ಈ ಊರಿನ ಇತಿಹಾಸ ತುಂಬಾನೇ ಇದೆ ವರ್ಷದಲ್ಲಿಮೂರು ನಾಲ್ಕು ಜಾತ್ರೆಗಳ ಮಾಡುತ್ತಾರೆ.ರೈತಪಿ ಕುಟುಂಬದವರು ಕಾಯಕ ಮಾಡುತ್ತಾ ಶ್ರೀಗಳ ಕೃಪೆಯಿಂದ ಶ್ರೀಮದ್ ಉಜ್ಜಯಿನಿ ಸ ಧ್ಧರ್ಮ ಸಿಂಹಾಸನದೀಶ್ವರರು ಶ್ರೀ ಶ್ರೀ ಶ್ರೀ.1008 ಜಗದ್ಗುರು ಸಿದ್ದಲಿಂಗ ರಾಜ ದೇಶಿ ಕೇಂದ್ರ ಶಿವಚಾಯ೯ ಭಗವತ್ಪಾದಂಗಳವರ ಕೃಪ ಆಶೀರ್ವಾದದೊಂದಿಗೆ ಶ್ರೀಗಳು ಈ ಗ್ರಾಮಕ್ಕೆ ಕಾರ್ಯಕ್ರಮ ಉದ್ದೇಶಿಸಿ ಆಶೀರ್ವಚನ ನೀಡುವರು ಅವರ ಆಶೀರ್ವಚನ ಶ್ರೀರಕ್ಷೆ ಎಂದು ಸ್ವೀಕರಿಸಿ ಧಮ೯ ಜ್ಯೋತಿಯನ್ನು ಬೆಳಗುತ್ತಾರೆ ಇಂದಿನ ವರ್ಷಗಳಿಂದ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ರಥೋತ್ಸವ ಸಾಮೂಹಿಕ ವಿವಾಹವನ್ನು ಮಾಡುತ್ತಾ ಬಂದಿದ್ದಾರೆ ಹಾಗೆ ಕೋವಿಡ್ ಉಲ್ಲಂಘನೆ ಒಳಗಾಗಿ ಸಾಮೂಹಿಕ ವಿವಾಹವನ್ನು ರದ್ದುಪಡಿಸಲಾಗಿದೆ ಅದಾದ ನಂತರ ರಥೋತ್ಸವ ಕಲ್ಯಾಣೋತ್ಸವ ಮಾಡುತ್ತಾ ಶ್ರೀ ಕೊಡಿ ಬಸವೇಶ್ವರ ದೇವಸ್ಥಾನ ನೂತನವಾಗಿ ನಿರ್ಮಿಸಿದರು. ಅದಾದ ನಂತರ ಊರವರೆಗಿನ ದೇವಸ್ಥಾನ ನಿರ್ಮಾಣ ಹಂತದಲ್ಲಿದೆ ಪ್ರತಿಯೊಬ್ಬರೂ ಭಾಗಿಯಾಗಿ ಜಾತಿ ಭೇದವೆನ್ನದೆ ಭಾವೈಕ್ಯತೆಯಿಂದ ಕೂಡಿ ಮಾಡುತ್ತಾರೆಶ್ರೀ ಕೋಡಿ ಬಸವೇಶ್ವರ ರಥೋತ್ಸವದ ಪಠಹಾರಾಜುಸಂತೋಷ ಕುಮಾರ್ ಐ ವೈ ಇವರು ಒಂಬತ್ತನೇ ವರ್ಷ ಪಟ ಹರಾಜು ಅವರೇ ತೆಗೆದುಕೊಂಡಿದ್ದಾರೆ ಸೋಮವಾರ ರಾತ್ರಿಯಿಂದಲೇ ಶ್ರೀ ಕೂಡಿ ಬಸವೇಶ್ವರ ಕಲ್ಯಾಣೋತ್ಸವ ಪ್ರಾರಂಭವಾದ ನಂತರ ಕೌದ್ಯರ ಮನೆತನದರಿಂದ ಶ್ರೀ ನೀಲಾಂಬಿಕೆಯನ್ನು ದೇವಸ್ಥಾನಕ್ಕೆ ವಾದ್ಯಗಳೊಂದಿಗೆ ಕರೆತರುವುದು .ಬಣಕಾರ್ ಮನೆಯಿಂದ ಹಸಿರು ಹಾಲುಗಂಬ. ಕುಂಬಾರ ಮನೆಯಿಂದ ಮಡಿಕೆ. ಬಡಿಗ್ಯಾರ ಮನೆಯಿಂದ ಬಾಸಿಂಗ .ಗೌಡರ ಮನೆಯಿಂದ ಕಳಶ .ಆಚಾರ್ಯ ಮನೆಯಿಂದ ಕಾಲುಂರ ಕಡಗ ತಾಳಿ ಶ್ರೀ ಕೋಡಿಬಸವೇಶ್ವರನ ಕಲ್ಯಾಣೋತ್ಸವಕ್ಕೆ.

ಕಾರಣೀಭೂತರಾಗಿರ್ತಕ್ಕಂತ ಶ್ರೀ ಉಜ್ಜಿನಿ ಮಠದ ವೀರಯ್ಯ ಸ್ವಾಮಿ ಆಶೀರ್ವಾದದೊಂದಿಗೆ ಬ್ರಹ್ಮಿ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಪಂಚ ಕಳಸವನೆಟ್ಟು ನೀಲಾಂಬಿಕೆಯನ್ನು ಗುಡಿಯ ತುಂಬಿಸುತ್ತಾರೆ ನಂತರ ಶ್ರೀ ಕೂಡಿ ಬಸವೇಶ್ವರ ಸ್ವಾಮಿ ಶ್ರೀ ನೀಲಾಂಬಿಕೆ ತಾಯಿಯನ್ನು ಊರವರೆಗಿನ ದೇವಸ್ಥಾನದವರೆಗೂ ಮೆರವಣಿಗೆ ಮುಖಾಂತರ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಿದರು ಸಾಯಂಕಾಲ 5:00 ಗಂಟೆಗೆ ರಥೋತ್ಸವ ಕಾರ್ಯಕ್ರಮ ಜರುಗಿತು ರಥಕ್ಕೆ ಹೂವಿನ ಹಾರ ಹಾಕಿ ಶೃಂಗರಿಸಿದರು ಶ್ರೀ ಕೋಡಿ ಬಸವೇಶ್ವರ ಉತ್ಸವಮೂರ್ತಿಯನ್ನು ರಥಕ್ಕೆ ಮೂರು ಪ್ರದಕ್ಷಿಣೆ ಹಾಕಿ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಬಂದಿದ್ದ ಭಕ್ತರು ಬಾಳೆಹಣ್ಣು ಉತ್ತಿತ್ತಿ ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು ಈ ಸಂದರ್ಭದಲ್ಲಿ ಊರಿನ ದೈವದರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಪೊಲೀಸ್ ಇಲಾಖೆ ಭಾಗವಹಿಸಿದರು ಶಾಂತಿಯಿಂದ ರಥ ಮುಂದಕ್ಕೆ ಸಾಗಿತು ಶ್ರೀ ಕೋಡಿಬಸವೇಶ್ವರ ಮಹಾರಾಜ್ ಗು ಜೈ ಎಂದು ಘೋಷಣೆ ಹಾಕಿ ರಥವನ್ನು ಪಾದುಗಟ್ಟೆ ಹತ್ತಿರ ಎಳೆದರೂ…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;