ಸಾರ್ವಜನಿಕವಾಗಿ ರಾಮ ನವಮಿ ಆಚರಣೆ

ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ, ಹಿಂದೂ ಸಂಘಟನೆಗಳ ಒಕ್ಕೂಟ ವತಿಯಿಂದ ಶ್ರೀ ರಾಮನವಮಿ ಮತ್ತು ಹನುಮ ಜಯಂತಿ ಆಚರಿಸಲಾಯಿತು. ಹತ್ತು ಹಲವಾರು ಹಿಂದೂ ಕಾರ್ಯಕರ್ತರು ಪ್ರಭು ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪವೃಷ್ಟಿಗೊಳಿಸಿ ಪರಸ್ಪರ ಶುಭಾಶಯ ಕೋರಿ ಸಂತಸಪಟ್ಟರು. ಬಿಸಿಲಿನ ಬೆಗೆಯಲ್ಲಿ ಸಂಚರಿಸುತ್ತಿರುವ ಸಾರ್ವಜನಿಕರಿಗೆ ತಂಪಾದ ಪಾನಕ ಹಂಚಲಾಯಿತು.
ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಪೂಜೆ ನೆರವೇರಿಸಿದರು. ಜಿಪಂ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಈರಪ್ಪ ದಿನ್ನಿಮನಿ, ಜಿ. ಎಸ್. ಗೊಂಬಿ, ಪ್ರಹ್ಲಾದ ಸಣ್ಣಕ್ಕಿ,ಪ್ರಕಾಶ ಜೀರಗಾಳ,ಚನ್ನಬಸು ಹುರಕಡ್ಲಿ, ಶಂಕರಗೌಡ ಪಾಟೀಲ, ಸಚಿನ ಕಲಮಡಿ, ನಂದೇಶ ಲಾತೂರ,ರಾಘು ಗರಗಟ್ಟಿ, ಮಹಾಲಿಂಗ ಕಲಾಲ,ಗುರುಪಾದ ಅಂಬಿ, ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ, ಬೈರೇಶ ಆದ್ದೆಪ್ಪನವರ, ರಾಜೇಂದ್ರ ನಾವಿ,ಕೃಷ್ಣ ಕಳ್ಳಿಮನಿ,ಯಲ್ಲಪ್ಪ ಬನ್ನೆನ್ನವರ,ಸಚಿನ ವಂದಾಲ, ಈರಪ್ಪ ಹುಣಸ್ಯಾಳ, ಉದಯ ಪವಾರ,ಚನ್ನು ಆದ್ದೇಪನ್ನವರ,ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
