ಕರ್ನಾಟಕ ರೈತ ಸಂಘ(AIKKS)ಸಿಂಧನೂರ ಸಮಿತಿಭೂ ಮಂಜೂರಾತಿ ಕೊಡದಿದ್ದರೆ ಚುನಾವಣೆ ಬಹಿಷ್ಕಾರಕ್ಕೆ ಜನರ ಎಚ್ಚರಿಕೆ.
ಮಸ್ಕಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುವ ರೈತರಿಗೆ ಭೂ ಮಂಜಾರಾತಿ ಕೊಡದೆ ಇರುವುದು ಅತ್ಯಂತ ನೋವಿನ ಸಂಗತಿ.
ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರರ ಕಛೇರಿ ಮುಂದುಗಡೆ ಅನೇಕ ಸುತ್ತಿನ ಹೋರಾಟ ನಡೆಸಲಾಗಿದೆ.

ಇಂದು ಸುಮಾರು ರೈತರು ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಇವರ ಮನೆ ಮುಂದೆ ಹೋಗಿ ತೀವ್ರ ಒತ್ತಡ ಹಾಕಿ, ಭೂ ಮಂಜಾರಾತಿ ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವ ತೀರ್ಮಾನ ತಿಳಿಸಿದರು.
40-50 ವರ್ಷಗಳಿಂದ ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುವ ರತ್ನಾಪುರ ಹಟ್ಟಿ,ಬೊಮ್ಮನಾಳ, ಗಂಟೇರ ಹಟ್ಟಿ, ಇತರೆ ಗ್ರಾಮಗಳ ರೈತರು ಭಾಗವಹಿಸಿದ್ದರು.
ಭೂ ಮಂಜೂರಾತಿ ವಿಷಯಕ್ಕೆ ಸಂಬಂಧಿಸಿ ನಾಳೆ ಮಸ್ಕಿ ತಹಸೀಲ್ದಾರರ ಕಛೇರಿಯಲ್ಲಿ ನಡೆಯುವ ಭೂ ಮಂಜಾರಾತಿ ಸಭೆಯಲ್ಲಿ ಭೂ ಮಂಜಾರಾತಿ ಕಾರ್ಯ ಅಂತಿಮಗೊಳಿಸಲೆಬೇಕು.
ಅಕ್ರಮ ಸಕ್ರಮ ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರಾಯಚೂರ ಜಿಲ್ಲೆಯ ರೈತರು, ರಾಜ್ಯದ ಎಲ್ಲಾ ಜಿಲ್ಲೆಗಳ, ಶಾಸಕರಿಗೆ ಒತ್ತಾಯಿಸಬೇಕು.
ಏಕೆಂದರೆ ಚುನಾವಣೆಯ ನಂತರ ಕಾಯ್ದೆಗಳು ಬದಲಾವಣೆಯಾದರೆ, ಭೂಮಿಯ ಹಕ್ಕುಗಳಿಂದ ವಂಚಿತರಾಗಬೇಗುತ್ತದೆ.ಡಿ.ಹೆಚ್.ಪೂಜಾರ
ರಾಜ್ಯಾಧ್ಯಕ್ಷರು,
ಶಾಸಕರಿಗೆ ಭೂಮಿ ಕೊಡದಿದ್ದರೆ ಗ್ರಾಮಗಳಲ್ಲಿ ರೈತರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಸಿಂಧನೂರ ರೈತ ಸಂಘದ ಉಪಾಧ್ಯಕ್ಷ
ಚಿಟ್ಟಿಬಾಬು, ಮಸ್ಕಿ ತಾ.ಉಪಾಧ್ಯಕ್ಷ ಮಹ್ಮದ್ ಪಾಷ
ಯಮನೂರಪ್ಪ, ಛತ್ರಗೌಡ, ಗಿಡ್ಡಪ್ಪ, ಇತರ ರೈತರು ಭಾಗವಹಿಸಿದ್ದರು…

ವರದಿ. ಉಮೇಶ್, ಎಚ್, ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
