;

ಸಂಭ್ರಮದಿಂದ ಆಚರಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ…!!!

ಸಂಭ್ರಮದಿಂದ ಆಚರಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ವ್ಯಾಪ್ತಿಯ ಕೆ ಕೆ ಹಟ್ಟಿಯಲ್ಲಿ, ಕನ್ನಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಸಡಗರ ಸಂಭ್ರಮದಿಂದ,ಆಚರಿಸಿ ಅಲ್ಲಿನ ಯುವಕರು ಅಭಿಮಾನಿಗಳು ಸಂಭ್ರಮಿಸಿದರು.

ನಂತರ ಕೆಪಿಸಿಸಿ ಸದಸ್ಯರಾದ ಶ್ರೀ ಲೋಕೇಶ್, ವಿ, ನಾಯಕ ರವರ ಪರವಾಗಿ ಆಪ್ತ ಸಹಾಯಕರಾದ ಕಾಟಮಲ್ಲಿ ಕೊಟ್ರೇಶ್ ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಚಿಕ್ಕ ವಯಸ್ಸಿಗೆ ನಮ್ಮ ಕರ್ನಾಟಕ ರಾಜ್ಯಾದ್ಯಂತ ಹಾಗೂ ಅಕ್ಕ ಪಕ್ಕ ರಾಜ್ಯಗಳಲ್ಲಿ ಅತಿ ದೊಡ್ಡ ಹೆಸರುಗಳಿಸಿ ಸಾಕಷ್ಟು ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ, ಅನಾಥ ಮಕ್ಕಳಿಗಾಗಿ ಉಚಿತ ಅನಾಥಾಶ್ರಮಗಳನ್ನು ನಿರ್ಮಿಸಿ, ಆಶ್ರಮದಲ್ಲಿರುವ ಅನಾಥ ಮಕ್ಕಳಿಗೆ ಉಚಿತ ಊಟ ವಸತಿಗಳನ್ನು ನಿರ್ಮಿಸಿ, ಮತ್ತು ಸಾಕಷ್ಟು ಗೋಶಾಲೆಗಳನ್ನು ಕಟ್ಟಿಸಿ, ಇನ್ನೂ ಅನೇಕ ಇಷ್ಟೆಲ್ಲ ಉಚಿತ ಸೇವೆಗಳನ್ನು ನಿರ್ಮಿಸಿರುವ, ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರವರನ್ನು ಅಗಲಿಕೆಯನ್ನು ಕಂಡು ಕುಂಭನಾದ ನಷ್ಟ ಉಂಟಾಗಿದೆ, ಅವರಂತೆ ನಾವು ನೀವು ಅಭಿಮಾನಿಗಳು ನಮ್ಮಗಳ ಕೈಲಾದಷ್ಟು ಸಮಾಜ ಸೇವೆಯೊಂದಿಗೆ ಕೈಜೋಡಿಸೋಣ, ಎಂದು ತಿಳಿಸಿದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾಧ್ಯಕ್ಷರಾದ ದುರ್ಗಾದಾಸ್ ನಾಯಕ್ ರವರು ನಮ್ಮ ಕೂಡ್ಲಿಗಿ ವಿಧಾನಸಭಾ ಕ್ಷೇತ್ರವು ಅತಿ ಹಿಂದುಳಿದ ಕ್ಷೇತ್ರವಾಗಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ, ಕಾಂಗ್ರೆಸ್ ಪಕ್ಷದಿಂದ ಲೋಕೇಶ್ ವಿ ನಾಯಕ ರವರಿಗೆ ಕಾಂಗ್ರೆಸ್ ಪಕ್ಷದಿಂದ, ಟಿಕೆಟ್ ನೀಡುವ ಸಾಧ್ಯತೆಯಿದ್ದು, ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ, ಅವರನ್ನು ಬೆಂಬಲಿಸಿ, ಅತಿ ಹೆಚ್ಚಿನ ಸಂಖ್ಯೆಯಲ್ಲಿ, ಅವರಿಗೆ ಮತ ಚಲಾಯಿಸಿ ನಮ್ಮ ಕೂಡ್ಲಿಗಿ ಕ್ಷೇತ್ರಕ್ಕೆ ಮುಂದಿನ ಶಾಸಕರನ್ನಾಗಿ ಆಯ್ಕೆ ಮಾಡಿದರೆ, ಅತಿ ಹಿಂದುಳಿದಿರುವ ಕೂಡ್ಲಿಗಿ ಕ್ಷೇತ್ರವನ್ನು ಅಭಿವೃದ್ಧಿಯನ್ನಾಗಿ ನಿರ್ಮಿಸಲು ಮತ್ತು ವಲಸೆ ಹೋಗುವಂತಹ ಜನರ ಸಮಸ್ಯೆಗಳಿಗೆ ಅತಿ ಮುಖ್ಯವಾಗಿ ರೈತರ ಸಮಸ್ಯೆಗಳನ್ನು ಸಹ ಲೋಕೇಶ್ ನಾಯಕ್ ರವರು ಅನಿಸಿದ್ದು ನಿರುದ್ಯೋಗಿಗಳ ಸಮಸ್ಯೆಗಳನ್ನು ಆಲಿಸಿರುವುದರಿಂದ, ಅವರು ಮುಂದೆ ಶಾಸಕರಾದರೆ ನಮ್ಮ ಕೂಡ್ಲಿಗಿ ಕ್ಷೇತ್ರದ ಎಲ್ಲಾ ಸಮಸ್ಯೆ ನೀಗಿಸುತ್ತಾರೆ ಎಂದು, ತಿಳಿಸಿ, ಕ್ಷೇತ್ರದ ಜನ ಲೋಕೇಶ್ ರವರಿಗೆ ಬೆಂಬಲಿಸಿ, ಮತ ನೀಡಬೇಕೆಂದು, ಹೇಳಿದರು.

ಈ ಜನ್ಮದಿನ ಸಂಭ್ರಮದಲ್ಲಿ ಪ. ಪಂ. ಸದಸ್ಯ ಕೊತ್ಲೇಶ್,ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ್, ಲಕ್ಷ್ಮಣ ಆಚಾರಿ, ಶಿವರಾಜ್, ಹನುಮಂತ, ಯಲ್ಲೆಶ್, ಗಜ, ವೆಂಕಟೇಶ್, ಹಾಗೂ ಊರಿನ ಮುಖಂಡರು ಮತ್ತು ಯುವಕರು ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಇದ್ದರು…

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;