ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ, ಜುಮ್ಮೋಬನಹಳ್ಳಿ, ಕಾಯಕನಹಳ್ಳಿ, ಕುಮತಿ ತಮ್ಮಯ್ಯನ ಗುಡ್ಡ, ಹುಡೆಂ, ಪೂಜಾರಹಳ್ಳಿ, ಲೋಕಿಕೆರೆ, ಗ್ರಾಮಗಳ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಯಿತು.
ನಂತರ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಜಿ ಕುಮಾರ ಗೌಡ, ಮಾತನಾಡಿ ಮುಂದೆ ಬರುವ ಚುನಾವಣೆಯಲ್ಲಿ , ನಮ್ಮ ಕಾಂಗ್ರೆಸ್ ಸರ್ಕಾರ ಬಂದರೆ,ಪ್ರತಿ ಮನೆ ಮನೆಗೆ,200 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆಯ ಕುಟುಂಬದ ಜವಾಬ್ದಾರಿ ಮಹಿಳೆಗೆ ಪ್ರತಿ ತಿಂಗಳು, 2000ರೂ ಹಣ ತಮ್ಮ ಬ್ಯಾಂಕ್ ಖಾತೆಗೆ, ಮತ್ತು ಪ್ರತಿಯೊಬ್ಬ ವ್ಯಕ್ತಿಗೆ 10 ಅಕ್ಕಿ, ಉಚಿತ ಅಕ್ಕಿ ನೀಡಲಾಗುವುದು, ಈ 3 ರೂ, ಯೋಜನೆಗಳ ಗ್ಯಾರಂಟಿ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು,
ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಸಿ,ಎ, ನಮ್ಮ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್, ಅಧ್ಯಕ್ಷರು p ಈಗಾಗಲೇ 3 ಯೋಜನೆಗಳ ಬಗ್ಗೆ ತಿಳಿಸಿ, ಗ್ಯಾರೆಂಟಿ ಕಾರ್ಡ್ ವಿತರಣೆ ಮಾಡಲಾಗಿದೆ ಈ ಯೋಜನೆಗಳು ಪ್ರತಿಯೊಬ್ಬ ಮಹಿಳೆಯರಿಗೂ ಪ್ರತಿಯೊಬ್ಬ ವ್ಯಕ್ತಿಗೂ, ಸಿಗಬೇಕೆಂದರೆ, ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮತ ನೀಡಿ ಎಂದು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಆಕಾಂಕ್ಷಿಯಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ಮಾತನಾಡಿ 3 ಯೋಜನೆಗಳ ಕಾಂಗ್ರೆಸ್ ಪಕ್ಷದಿಂದ ನೀಡಿರುವ ಗ್ಯಾರಂಟಿ ಕಾರ್ಡ್ ಜಾರಿಗೆ ಬರಬೇಕೆಂದರೆ ಜನರು ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ಗೆ ಮತ ನೀಡಬೇಕು ಹಾಗೂ ನಮ್ಮ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ನಿಷ್ಠೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಬೇಕು, ನಮ್ಮ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಧಾನ ರಾಜ ಕಾರ್ಯದರ್ಶಿ ಸಿ ಅರುಣ್ ಕುಮಾರ್ ಮತ್ತು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅದ್ಯಕ್ಷರು *ಕೆ ಜಿ ಕುಮಾರ್ ಗೌಡ್ರು* ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಿರೇಕುಂಬಳಗುಂಟೆ ಮನೊಜ್ ಕುಮಾರ್ ಹಾಗು ಹುಡೇಂ ಜಿಲ್ಲಾ ಪಂಚಾಯತ್ ಅಕಾಂಷಿ G ಓಬಣ್ಣ ಜುಮ್ಮೊಬನಳ್ಳಿ ಮುಖಂಡರಾದ ಟಿ ಪಿ ಮಹಂತೇಶ್ k n ರಾಘವೇಂದ್ರ ನಡುಲಟ್ಟಿ ಕ್ಯಾತಯ್ಯ ಕುಮುತಿ ಪೆದ್ದ ಮಲ್ಲಯ್ಯ ಹುಡೇಂ ರವಿ. ವೀರೇಶ್ ಭಾಬು ಪುಜಾರಳ್ಳಿ ಬಾಗ್ಯಮ್ಮ ಓಬಣ್ಣ ಗೋವರ್ಧನ ಪಾಲಕ್ಷ ಕಾತ್ರಿಕಟ್ಟೆ ವೆಂಕಟೇಶ್ ನಾಯ್ಕ ಪಿ ತಾಂಡಾ ಮಂಜಣ್ಣ ತಿಪ್ಪೆಳ್ಲಿ ಮಾಳಳ್ಳಿ ಗೋಕರ್ಣ ಅರುಣ್ ಕುಮಾರ್ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸುವ ಮೂಲಕ ಪಕ್ಷ ಸಂಘಟಿಸಿದರು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
