;

ಹೂಡೇಂ : ದೂರದೃಷ್ಟಿ ಯೋಜನೆ ನಕ್ಷೆ ಜಾಗೃತಿ…!!!

ಹೂಡೇಂ : ದೂರದೃಷ್ಟಿ ಯೋಜನೆ ನಕ್ಷೆ ಜಾಗೃತಿ.
ಹೂಡೆಂ: ಬಡತನ ಮುಕ್ತ ಸಮಾಜ ಹಾಗೂ ನೈಸರ್ಗಿಕ ಸಂಪನ್ಮೂಲಕ ಸದ್ಬಳಕೆ ಕುರಿತು ಗ್ರಾಮೀಣ ದೂರದೃಷ್ಟಿ ಯೋಜನೆ ಕುರಿತು ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು. ಸಂಪನ್ಮೂಲ ನಕ್ಷೆ ಹಾಗೂ ಮಾರ್ಗಗಳ ಕುರಿತು ರಂಗೋಲಿಯಲ್ಲಿ ಬಿಡಿಸಿ ಜನರಿಗೆ ಮಾಹಿತಿ ನೀಡಲಾಯಿತು. ಬಡತನ ಮುಕ್ತ ಮತ್ತು ಜೀವನೋಪಾಯ ಕೌಶಲ್ಯ ಅಭಿವೃದ್ಧಿ, ಉದ್ಯೋಗ ಖಾತರಿ ಯೋಜನೆಯ ಬಗ್ಗೆ, ಗ್ರಾಮದಲ್ಲಿ ಆರೋಗ್ಯ ಯೋಜನೆ ಗುರಿ ನಿಗದಿಪಡಿಸುವಿಕೆ, ಶಿಕ್ಷಣ ವಲಯ, ಮಹಿಳಾ ಸ್ನೇಹಿ ಹಾಗೂ ಮಕ್ಕಳ ಸ್ನೇಹಿ ಗ್ರಾಪಂ ಯೋಜನೆ, ಜಲ ಸಮೃದ್ಧಿ ಗ್ರಾಮ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ನಿರ್ವಹಣೆಯಲ್ಲಿ ಸ್ವತ್ಛತೆ ಮತ್ತು ಹಸಿರು ಗ್ರಾಮ, ಸಾಮಾಜಿಕವಾಗಿ ಸುರಕ್ಷಿತವಾಗಿ ಗ್ರಾಮದ ವಿಷಯಗಳ ಬಗ್ಗೆ ಇತರೆ ಕೆಲಸಗಳನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕವಾಗಿ ಯೋಜನೆ
ತಯಾರಿಸಬೇಕಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಬಾಯಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕರಿಬಸಮ್ಮ ದುರುಗಪ್ಪ, ಕಾರ್ಯದರ್ಶಿ ತಿಪ್ಪೇರುದ್ರಪ್ಪ, ಬಿಲ್ ಕಲೆಕ್ಟರ್ ಮಂಜಣ್ಣ, ಗ್ರಾ.ಪಂ ಸಿಬ್ಬಂದಿಗಳಾದ ದಕ್ಷಿಣಿಮೂರ್ತಿ, ನೆರೆಗಾ ಮೇಟಿ ನಾಗರಾಜ್, ಸೇರಿದಂತೆ ಗ್ರಾಮ ಪಂಚಾಯತಿಯ ಸದಸ್ಯರು ಸಾರ್ವಜನಿಕರು ಇದ್ದರು…

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;