;

ಡಾ.ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ೧೮ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ…!!!

ಡಾ.ರಾಧಾಕೃಷ್ಣನ್ ಪ್ರಾಥಮಿಕ ಶಾಲೆಯ ೧೮ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ.

ಮಹಾಲಿಂಗಪುರ: ಸ್ಥಳೀಯ ಡಾ.ರಾಧಾಕೃಷ್ಣನ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಸತತ ೧೭ವರ್ಷಗಳಿಂದ ಶಿಕ್ಷಣ ಸೇವೆ ನೀಡುತ್ತಾ ಬಂದಿದ್ದು ಬಡ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ಶಾಲಾ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ ನೀಡಿ ಆಟೋಪಚಾರದಲ್ಲಿ ಜಿಲ್ಲಾ ಮಟ್ಟದ ಹೆಸರು ಮಾಡಿ ವಿಧ್ಯಾರ್ಥಿಗಳ ಕೌಶಲ್ಯ ಮತ್ತು ಪ್ರತಿಭೆ ಪ್ರೋತ್ಸಾಹಕ್ಕಾಗಿ ಈ ವರ್ಷ ೧೮ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ೨೦೨೨-೨೩ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ‘ ಚಿನ್ನರ ಕಲರವ ‘ ವಿಶೇಷ ಕಾರ್ಯಕ್ರಮ ಫೆಬ್ರವರಿ ೧೮ರಂದು ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಶಾಲಾ ಸಂಸ್ಥಾಪಕರು, ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರೂ ಆದ ನಿವೃತ್ತ ಪ್ರಾಚಾರ್ಯ ಎಸ್ ಎಂ. ಉಳ್ಳೇಗಡ್ಡಿ ವಹಿಸಲಿದ್ದಾರೆ.ಈ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ. ಸ್ವಾಗತ ಮತ್ತು ಪರಿಚಯ, ಮಾಲಾರ್ಪಣೆ, ವಾರ್ಷಿಕ ವರದಿ ವಾಚನ, ಕಿರು ಪಾತ್ರಾಭಿನಯ, ಗಣ್ಯರಿಗೆ ಸನ್ಮಾನ, ಸಾಧಕ ಮಕ್ಕಳಿಗೆ ಪ್ರಶಸ್ತಿ ವಿತರಣೆ ನಂತರ ಮುಖ್ಯ ಅತಿಥಿಗಳ ಭಾಷಣ ನಡೆಯಲಿದ್ದು ಸಂಸ್ಥೆಯ ಅಧ್ಯಕ್ಷರಿಂದ ಸಮಾರೋಪ ಭಾಷಣ ಅಲ್ಲದೆ ಗಣ್ಯರಿಗೆ ಸವಿ ನೆನಪಿನ ಕಾಣಿಕೆ ವಿತರಣೆ ಮಾಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷೆ ಎಂ ಎಸ್.ಉಳ್ಳೇಗಡ್ಡಿ, ಕಾರ್ಯದರ್ಶಿ ಶಶಿಧರ್ ಉಳ್ಳೇಗಡ್ಡಿ ಮಾಹಿತಿ ನೀಡಿದ್ದಾರೆ.
ಮುಖ್ಯ ಅತಿಥಿಗಳಾಗಿ, ಪುರಸಭಾ ಅಧ್ಯಕ್ಷರ ಬಸವರಾಜ ಹಿಟ್ಟಿನಮಠ, ಜಂಟಿ ನಿರ್ದೇಶಕರು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರ ಕಚೇರಿ ಧಾರವಾಡ ಗಜಾನನ ಮನ್ನಿಕೇರಿ, ಸಂಸ್ಥೆಯ ಸಲಹಾ ಸಮಿತಿ ಸದಸ್ಯೆ ಸಂಜನಾ ಬಸವರಾಜ. ಹಿಟ್ಟಿನಮಠ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ್, ಜಾವೇದ್ ಭಾಗವಾನ, ಜಿಲ್ಲಾ ಕಾನಿಪ ಸದಸ್ಯ ಎಸ್ ಎಸ್.ಈಶ್ವರಪ್ಪಗೋಳ, ಉಪಾಧ್ಯಕ್ಷ ಗ್ರಾಪಂ ಢವಳೇಶ್ವರ ಲಕ್ಷ್ಮಣ ಪಟ್ಟಣಶೆಟ್ಟಿ, ಭೂಮಾಪಕ ಶಿವಕುಮಾರ ಕುಳ್ಳೋಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ಎಂ. ಮುಲ್ಲಾ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಎನ್.ಬ್ಯಾಳಿ, ಪಿಕೆಪಿಎಸ್ ವಿಷ್ಣುಗೌಡ ಪಾಟೀಲ್, ಗಣ್ಯ ವ್ಯಾಪಾರಸ್ತರು ಸಿದ್ದು ಕಾಖಂಡಿಕಿ, ಸಲಹಾ ಸಮಿತಿ ಸದಸ್ಯ ಮಹಾಲಿಂಗ ಗೋಕಾವಿ ಮತ್ತು ಸಿದ್ದು ಹೂಗಾರ, ನ್ಯಾ. ಪ್ರಶಾಂತ ಕಜಗಲ್, ಪ್ರಶಾಂತ ಕಡೆಮನಿ, ಇಜಾಜ್ ಯಾದವಾಡ ಇನ್ನೂ ಅನೇಕರು ಆಗಮಿಸಲಿದ್ದಾರೆ.

ವರದಿ‌.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;