;

ಶ್ರೀ ಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ನಾಯಕತ್ವದಲ್ಲಿ ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ…!!!

ಶ್ರೀ ಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರ ನಾಯಕತ್ವದಲ್ಲಿ ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ………

ಹರಪನಹಳ್ಳಿ:- ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ದುರಾಡಳಿತಕ್ಕೆ ಬೇಸತ್ತು ಇಂದು ಜೆಡಿಎಸ್ ಮತ್ತು ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ನಮ್ಮ ಪಕ್ಷದ ಬಾವುಟ ಹಿಡಿದು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಶ್ರೀ ಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ನಿಟ್ಟೂರು ಗ್ರಾಮದ ಅಲವರು ಕಾರ್ಯಕರ್ತರು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡ ಸೋಮಪ್ಪ ಬಣಕಾರ್, ನಾಗಪ್ಪ ಗೌಡ್ರು, ಬಸವಂತಪ್ಪ ಮಾಜ್ಜಿಗೆರಿ,ಮಾತನಾಡಿದರು.

ರಾಜ್ಯಮತ್ತು ಕೇಂದ್ರ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಈಡೇರಲಿಲ್ಲ ಪ್ರಧಾನಿ ನರೇಂದ್ರ ಮೋದಿಯವರು ಹೊರದೇಶದಲ್ಲಿ ಕಪ್ಪು ಹಣವನ್ನು ತಂದು ಜನ್ ಧನ್ ಖಾತೆಗೆ 15 ಲಕ್ಷ ರೂ ಹಾಕುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದು ಇದುವರೆಗೂ ನಯಪೈಸೆ ಹಾಕಿಲ್ಲ ಯುವಕರಿಗೆ ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಸೃಷ್ಟಿಸುತ್ತೇವೆ ಎಂದು ನಂಬಿಸಿ ಯುವಕರನ್ನು ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು .

ಬಿಜೆಪಿಯಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದ್ದು ಬರೀ ಶಾಸಕರನ್ನು ಖರೀದಿ ಮಾಡುವ ಬ್ರೋಕರ್ ಗಳನ್ನು ಹುಟ್ಟು ಹಾಕುವ ಕೆಲಸ ಮಾಡುತ್ತಿದೆ ಶಾಸಕ ಜಿ ಕರುಣಾಕರ ರೆಡ್ಡಿ ಅವರು ಕರೋನಾ ಸಮಯದಲ್ಲಿ ಜನರ ಬಳಿ ಬರದೆ, ಬಳ್ಳಾರಿ ನಿವಾಸದಲ್ಲಿ ಇದ್ದುಕೊಂಡು ಜನರಿಗೆ ಕಣ್ಣು ಒರೆಸುವ ತಂತ್ರ ಮಾಡುತ್ತಾ ಕಾಲರಣ ಮಾಡಿದ್ದಾರೆ. ಗೋದೆಪ್ಪ, ನಾಗಪ್ಪ ರೇಣುಕಮ್ಮ, ಶಾಂತಮ್ಮ, ಜಯಮ್ಮ ಇಂತಹ ಶಾಸಕರು ನಮ್ಮ ತಾಲೂಕುಗೆ ಹರಪನಹಳ್ಳಿಯ ಜನತೆಗೆ ಬೇಕಾ? ಎಂದು ಕಿಡಿಕಾರಿದ್ದಾರೆ.

ಹಾಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಈ ಕ್ಷೇತ್ರದಲ್ಲಿ ಹೊರಗಿನವರೆಗೆ ಶಾಸಕರಾಗುತ್ತಿದ್ದಾರೆ . ಈ ಬಾರಿ ಶ್ರೀ ಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ರವರು ಮಾತನಾಡಿ ತಾಲೂಕಿನ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಹೊರಗಿನವರಿಗೆ ತಕ್ಕ ಪಾಠ ಕಲಿಸಿ ಸ್ಥಳೀಯ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡು ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಬಂದಿದ್ದೇನೆ.

ಆದರೆ ಬಿಜೆಪಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಮತ್ತು ಶಾಸಕ ಕರ್ಣಾಕರ ರೆಡ್ಡಿ ಅವರ ದುರಾಡಳಿತಕ್ಕೆ ಬೇಸತ್ತು ಸ್ಥಳೀಯರಾದ ಶ್ರೀ ಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಕರೋನ ಸಮಯದಲ್ಲಿ ಮಾಡಿದ ಜನ ಸೇವೆಯನ್ನು ಮೆಚ್ಚಿ ಇಂದು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರ ಜೊತೆಗೆ ಹಲವು ಮುಖಂಡರನ್ನು ಕರೆತಂದಿದ್ದೇನೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲುಸುವುದೇ ನಮ್ಮ ಗುರಿ
ಎಂದು ಸೋಮಪ್ಪ ಬಣಕಾರ್ ಹೇಳಿದರು.

ಈ ಸಂದರ್ಭದಲ್ಲಿ ಬಸವರಾಜ ಮತ್ತೂರು, ಶಿವರಾಜ್,ಸೋಮಪ್ಪ ಬಣಕಾರ್, ನಾಗಪ್ಪ ಗೌಡ್ರು, ಬಸವಂತಪ್ಪ ಮಾಜ್ಜಿಗೆರಿ ಗೋದೆಪ್ಪ, ನಾಗಪ್ಪ ರೇಣುಕಮ್ಮ, ಶಾಂತಮ್ಮ, ಜಯಮ್ಮ ಅಲವಾರು ಕಾಂಗ್ರೆಸ್ ಮುಖಂಡರು ಇದ್ದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend