ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಸನಾತನ ಧರ್ಮ ಜಾಗೃತಿ ಸಮಾರಂಭ
ಧರ್ಮ ಪರಂಪರೆ, ದೇಶದ ಹೆಮ್ಮೆಯ ಪ್ರತೀಕ.
ಕೂಡ್ಲಿಗಿ: ಧರ್ಮಕ್ಕೆ ದಕ್ಕೆ ತರುವಂತ ಕೆಲಸವನ್ನು ಮಾಡಬೇಡಿ. ಬದಲಿಗೆ, ಧರ್ಮ ಪರಂಪರೆಯನ್ನು ಕಾಪಾಡಿ ಎಂದು ಶ್ರೀ ಹಿಮವತ್ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಉಪದೇಶಿಸಿದರು. ಪಟ್ಟಣದ ಚಂದ್ರಶೇಖರ್ ಅಜಾದ್ ರಂಗಮಂದಿರದಲ್ಲಿ ಶ್ರೀಕೇದಾರ ಜಗದ್ಗುರುಗಳವರ ಉತ್ಸವ ಸಮಿತಿ ಹಾಗು ಶ್ರೀ ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ, ಭಾನುವರ ಸಂಜೆ ಏರ್ಪಡಿಸಿದ ಸನಾತನ ಧರ್ಮಜಾಗೃತಿ ಸಮಾರಂಭದಲ್ಲಿ ಧಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಸತ್ಯವಾದದು ಆಚಾರ.

ಸತ್ಯದ ಹಾದಿಯಲ್ಲಿ ನಡೆಯಬೇಕಾದದು ಮನುಷ್ಯನ ಕರ್ತವ್ಯವಾಗಿದೆ ಎಂದರು. ಸಂಸ್ಕೃತಿ, ಆಚಾರ, ವಿಚಾರಗಳು ನಮ್ಮ ಪರಂಪರೆಯಿಂದ ಬಂದ ಬಳುವಳಿಗಳಾಗಿವೆ. ಪಂಚ ಪೀಠಗಳು ಪೂರ್ವದಿಂದಲೂ ಇವೆ. ಸನಾತನವಾಗಿ ಬಂದ ಧರ್ಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ಶ್ರದ್ಧೆ,ನಿಷ್ಠೆ,ನಿಯಮಗಳನ್ನು ಅನುಸರಿಸಿ ಏಕಾಗ್ರತೆಯಿಂದ ಧ್ಯಾನವನ್ನು ಮಾಡಿ, ಜಂಜಡಗಳ ಮಧ್ಯ ಮನಸ್ಸನ್ನು ಕೇಂದ್ರಿಕರಿಸಿ ಶಾಂತ ಚಿತ್ತದಿಂದರಬೇಕು ಎಂದರು. ಮನುಷ್ಯನಿಗೆ ಸಾವು ನಿಶ್ಚಿತ. ಇದನ್ನರಿತು ಮುಕ್ತಿಗೆ ಮನಸ್ಸು ತೆರೆದುಕೊಳ್ಳಬೇಕು ಎಂದರು. ಜಗಲೂರು ತಾಲೂಕಿನ ಕಣ್ವಕುಪ್ಪೆ ಗವಿಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಶಿವಶಾಂತಲಿಂಗ ಶಿವಾಚಾರ್ಯರು ಪ್ರವಚನದಲ್ಲಿ ಭಸ್ಮ,ಲಿಂಗ, ರುದ್ರಾಕ್ಷಿಗಳನ್ನು ಧರಿಸಿಕೊಳ್ಳಬೇಕು. ನಿತ್ಯವೂ ಲಿಂಗಪೂಜೆಯನ್ನು ಮಾಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಮಾಡುವ ಕೆಲಸಗಳು ಪರಿಪೂರ್ಣವಾಗುತ್ತದೆ. ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದರು. ಸಾವು ಮನುಷ್ಯನಿಗೆ ಸಹಜ, ಸತ್ತಾಗ ಭಸ್ಮ, ರುದ್ರಾಕ್ಷಿ, ಲಿಂಗಗಳು ಮಾತ್ರ ಹಿಂದೆ ಬರುತ್ತವೆ.

ಆದ್ದರಿಂದ ನೀವೆಲ್ಲರೂ, ಲಿಂಗ ಧರಿಸಬೇಕೆಂದರು. ಸಭೆಯಲ್ಲಿ ಹಿರೇಮಠದ ಚಿದಾನಂದ ಸ್ವಾಮಿ,ಆರಾಧ್ಯಮಠದ ಬಸವರಾಜಯ್ಯ,ಕೋಗಳಿ ಮಂಜುನಾಥ,ಕೊಟ್ರಪ್ಪಗಳ ನಾಗರಾಜ್, ಜಿ. ಸುನೀಲ್‌ಗೌಡ,ಪೇಟೆ ತುಪ್ಪಳ್ಳಿ ಮೂಗಣ್ಣ, ಬಣಕಾರ ಕೊಟ್ರೇಶ್, ಗುಳಿಗಿ ವೀರಭದ್ರಪ್ಪ, ಗುಳಿಗಿ ವೀರೇಂದ್ರ, ಕುಪ್ಪಿನಕೇರಿ ಕೊಟ್ರಯ್ಯ, ಮಠಪತಿ ಮಂಜುನಾಥ ಸೇರಿದಂತೆ ಅನೇಕರಿದ್ದರು. ಮುನ್ನ ಕೇದಾರನಾಥ ರಾಜಗುರುವರ್ಯ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ನಂತರ ಸನಾತನ ಧರ್ಮಜಾಗೃತಿ ಸಮಾರಂಭದ ಸ್ಥಳ ಚಂದ್ರಶೇಖರ್ ಆಜಾದ್ ರಂಗಮಂದಿರದಲ್ಲಿ ಸಂಪನ್ನವಾಯಿತು…

ವರದಿ.ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
