ಕೂಡ್ಲಿಗಿ:ಬಾಲೆ ಹರಣಿಯ ಮೋದಿಯ ಮೇಲಿನ ವಿಶಿಷ್ಟ ಪ್ರೀತಿ, ಹೀಗೊಬ್ಬ ಅಧುನಿಕ ಶಬರಿ.!?- ವಿಜಯನಗರ ಜಿಲ್ಲೆ ಕೂಡ್ಲಿಗಿ , ನರೇಂದ್ರ ಮೋದಿ ನಮ್ಮ ಮನೆಗೆ ಬಂದು ಪಾಯಸ ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು ಅದೇ ನನ್ನಾಸೆ..ಎಂದು ಮೂರು ವರ್ಷದ ಬಾಲೆ ಹೇಳುತ್ತಿರುವುದನ್ನು ಕೇಳಿದರೆ..!? ಎಂಥವರೂ ಕೂಡ ಅಚ್ಚರಿ ಪಡುವ ಸಂಗತಿಯಾಗಿದೆ. ಕಾರಣ ಅವಳಿಗೆ ನರೇಂದ್ರ ಮೋದಿ ಯಾವ ಪಕ್ಷ ಯಾವ ಜಾತಿ ಗೊತ್ತಿಲ್ಲ, ಆತ ಬಾರತದ ಪ್ರಧಾನಿ ಅಂತಾನು ತಿಳಿದಿಲ್ಲ ಆದ್ರೆ ಆತ ಅವಳಿಗೆ ಇಷ್ಟವಂತೆ ತುಂಬಾನೆ ಇಷ್ಟವಂತೆ. ಬಾಲೆ ಹರಣಿಯ ಮನೆಯಲ್ಲಿ ಟಿವಿ ಕೂಡ ಇಲ್ಲ, ಆದ್ರೆ ನರೇಂದ್ರ ಮೋದಿ ಪರಿಚಯ ಹೇಗಾಯ್ತು..!? ತನ್ನ ಹಳೆಯ ಸ್ನೇಹಿತನೇನೋ ಅನ್ನೋ ರೀತಿಯಲ್ಲಿ, ನರೇಂದ್ರ ಮೋದಿ ಬಗ್ಗೆ ವಿಚಾರ ಮಾಡುತ್ತಾಳೆ ಆತಿಥ್ಯ ಸ್ವೀಕರಿಸುವಂತೆ ತಮ್ಮ ಮನೆಗೆ ಆಹ್ವಾನಿಸುತ್ತಾಳೆ ಈ ಮೂರು ವರ್ಷದ ಪೋರಿ. ನರೇಂದ್ರ ಗೊತ್ತಾ.. ಅವನು ನಮ್ಮ ಮನಗೆ ಊಟಕ್ಕೆ ಬರಬೇಕು ಅಷ್ಟೇ…ಅದೇ ನರೇಂದ್ರ ಮೋದಿ ಅವನೇ ನಮ್ಮ ಮನೆಗೆ ಬಂದು ಪಾಯಸಾ…ಅನ್ನ ಸಾರು ಉಂಡು ಟೀ ಕುಡಿದು ಹೋಗಬೇಕು..ಅಷ್ಟೇ ..ಅದು ನನ್ನಿಷ್ಟ.. ಅವನು ಬಂದೇ ಬರುತ್ತಾನೆ ಅದು ಅವನಿಷ್ಟ ಎನ್ನುತ್ತಾಳೆ ಹರಣಿ. ದಿನಕ್ಕೊಮ್ಮೆಯಾದರೂ ಮೋದಿ ಬಗ್ಗೆ ತನ್ನ ತಾಯಿ ರೇಣುಕಮ್ಮಳೊಂದಿಗೆ ವಿಚಾರಿಸುತ್ತಿರುತ್ತಾಳೆ, ಆಕೆ ತನ್ನ ಸ್ನೇಹಿತರೊಂದಿಗೆ ಆಟ ಆಡುವಾಗ ಕೂಡ ಸ್ನೇಹಿತರಲ್ಲಿ ಯಾರಾದರೂ ಒಬ್ಬ ಹುಡುಗನಿಗೆ ನರೇಂದ್ರ ಮೋದಿ ಹೆಸರನ್ನಿಡುತ್ತಾಳೆ. ಇದನ್ನ ಕಂಡ ನೆರೆ ಹೊರೆಯವರು ಬೆರಗಾಗಿದ್ದಾರೆ, ಆಟ ಆಡುವಾಗಲೂ ಕೂಡ ನರೇಂದ್ರ ಮೋದಿ ಯ ಬಗ್ಗೆ ಗುನುಗುಡುವ ಈ ಬಾಲೆ. ಅವನು ತುಂಬಾ ಒಳ್ಳೆಯವನು ಅದಕ್ಕೇ ನನಗಿಷ್ಟ ಅವನು ತುಂಬಾ ಗೊತ್ತು ನನಗೆ. ನಾನು ಅವನು ಎಲ್ಲರೂ ಆಟ ಆಡೀವಿ ಈಗ ಬರುವಲ್ಲ ಅಷ್ಟೇ.. ಅವನು ಒಳ್ಳೆವನು ಅದಕ್ಕೇ ಇಷ್ಟ ತುಂಬಾ ಇಷ್ಟ ನನಗೆ ಅನ್ನುತ್ತಾಳೆ ಮೂರರ ಪೋರಿ ಹರಣಿ. ಬಾಲೆ ಹರಣಿಯ ತಂದೆ ಎರೆಡು ವರ್ಷದ ಹಿದೆಯಷ್ಟೇ, ಕೋವಿಡ್ ನಲ್ಲಿ ನಿಧನರಾಗಿದ್ದಾರೆ. ತಾಯಿ ರೇಣುಕಾ ಹಾಗೂ ಇವಳ ಸಹೋದರ ಬಾಲಕ ವಿನಾಯಕ ಸೇರಿದಂತೆ, ಮೂರೇ ಮೂರು ಜನರಿರುವ ಪುಟ್ಟ ಬಡ ಕುಟುಂಬದಲ್ಲಿ ಜೀವಿಸುವ ಈ ಬಾಲೆಗೆ ನರೇಂದ್ರ ಮೋದಿ ಹೇಗೆ ಸ್ನೇಹಿತನಾದ ತಿಳಿಯದಾಗಿದೆ. ರಾಜಕೀಯ ಪಕ್ಷ ಜಾತಿ ಎನೇನು ತಿಳಿಯದ ಈ ಬಾಲೆಯ ಮೇಲೆ, ನರೇಂದ್ರ ಮೋದಿ ಹೇಗೆ ಪ್ರಭಾವ ಬೀರಲು ಸಾಧ್ಯ.!? ಇವಳ ಮನೆಯಲ್ಲಿ ಟಿವಿ ಕೂಡ ಯಾನರೈಡ್ ಮೊಬೈಲ್ ಕೂಡ ಇದೆಲ್ಲಾ ಹೇಗೆ ಸಾಧ್ಯ ತಿಳಿಯಲಾಗುತ್ತಿಲ್ಲ. ಅಷ್ಟೇನು ಓದಿರದ ತಾಯಿ ರೇಣುಕಾ ಹಾಗೂ ಸಹೋದರ ಬಾಲಕ ವಿನಾಯಕ ನಿಗೆ ಕೂಡ ನರೇಂದ್ರ ಮೋದಿ ಬಗ್ಗೆ ಅಷ್ಟೇನು ತಿಳಿದಿಲ್ಲ. ಹೀಗಿದ್ದ ಮೇಲೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಂತೆ ,ಈ ಬಾಲೆ ತಿಳಿದಿದ್ದಾರು ಹೇಗೆ ಇವಳಿಗೆ ಅವರ ಬಗ್ಗೆ ಏಕೀ ಪ್ರೀತಿ ವಾತ್ಸಲ್ಯ ಒಂದೂ ತಿಳಿಯದಾಗಿದೆ. ದಿನಕ್ಕೊಮ್ಮೆಯಾದರೂ ಮೊದಿಯನ್ನು ನೆನೆಪಸಿಕೊಳ್ಳುವ ಬಾಲೆ ಹರಣಿ, ಪ್ರತಿ ಬಾರಿಯೂ ಕೂಡ ತನ್ನ ಮನೆಗೆ ಊಟಕ್ಕಾಗಿ ಆಹ್ವಾನಿಸುತ್ತಾಳೆ. ಇದು ಎಂಥಹವರನ್ನೂ ನಿಬ್ಬೆರಗಾಗಿಸುತ್ತೆ. ರಾಮಾಯಣದಲ್ಲಿ ಶಬರಿ ಮಾತೆ ಶ್ರೀರಾಮನ ಆತಿಥ್ಯಕ್ಕಾಗಿ ತಪಸ್ಸು ಮಾಡಿದ್ದಳಂತೆ, ಹಾಗೆಯೇ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 2ನೇ ವಾರ್ಡ್ ನಲ್ಲಿ.

ಬಾಡಿಗೆ ಮನೆಯಲ್ಲಿರುವ ಚಿಕ್ಕ ಬಡ ಕುಟುಂಬದ ಸದಸ್ಯೆ ಮೂರು ವರ್ಷದ ಬಾಲೆ ಹರಣಿ(9008937428), ಪ್ರಧಾನಿ ನರೇಂದ್ರ ಮೋದಿಯವರಿಗೆ ಆತಿಥ್ಯ ನೀಡಲೆಂದು ಆಧುನಿಕ ಶಬರಿಯಾಗಿ ಕಾದಿದ್ದಾಳೆ. ಜಾತಿಯಲ್ಲಿ ವೀರಶೈವ ಲಿಂಗಾಯತರಾಗಿರುವ ಈ ಬಾಲೆ, ಜಾತಿ ತಾರತಮ್ಯತೆ ಅರಿತಿಲ್ಲ. ನರೇಂದ್ರ ಮೋದಿ ಯಾವ ಸಮಾಜದವರು, ಯಾವ ಕುಲದವರು ತಿಳಿದಿಲ್ಲ ಅಷ್ಟೇ ಏಕೆ ಜಾತಿ ಧರ್ಮಗಳ ತಿಳುವಳಿಕೆನೇ ಇಲ್ಲ. ಹಿಂದೂ ,ಮುಸ್ಲೀಂ, ಕ್ರೈಸ್ತ ಧರ್ಮಗಳ ಪರಿಚಯವಿಲ್ಲ, ಪಕ್ಷ ಎಂದರೇನು ಎಂಬ ಪರಿಜ್ಞಾನ ವಿಲ್ಲ ಆದ್ರೆ ನರೇಂದ್ರ ಮೋದಿ ಗೊತ್ತು, ಅವನು ತುಂಬಾ ಒಳ್ಳೆನು ನನಗೆ ಎಲ್ಲಾನು ಗೊತ್ತು ಅನ್ನುತ್ತಾಳೆ.. ಬಾಲೆ ಹರಣಿ. ಹೀಗೆ ಕಳೆದ ಹಲವು ತಿಂಗಳು ಗಳಿಂದಲೂ ಹೀಗೆಯೇ, ದಿನದಲ್ಲಿ ಹಲವು ಬಾರಿ ಮೋದಿಯನ್ನ ನೆನಪಿಸಿಕೊಳ್ಳೋತ್ತಾಳೆ ಬಾಲೆ ಹರಣಿ. ರಾಜಕೀಯದ ಸೋಂಕು ಜಾತಿ ಧರ್ಮಗಳ ಸಂಕೋಲೆ, ಪಾತಗಳ ಪರಿಪಾಟ ಅರಿವಿಲ್ಲದ ಮೂರರ ಬಾಲೆಗೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಗೆ ಪ್ರಭಾವ ಬೀರಲು ಸಾಧ್ಯ.!?, ಈ ಬಾಲೆಯ ಚಿಕ್ಕ ಕುಟುಂಬಕ್ಕೆ ರಾಜಕೀಯ ಧರ್ಮ ಸಂಕೋಲೆಗಳ ಸೋಂಕೆ ಇಲ್ಲ. ಆದ್ರೂ ಹರಣಿ ನರೇಂದ್ರ ಮೋದಿಯ ಬಗ್ಗೆ ಮಮತೆ ಪ್ರೀತಿ ವಾತ್ಸಲ್ಯ ಸ್ನೇಹತ್ವ ಬೀರುತ್ತಾಳೆ, ನರೇಂದ್ರ ಮೋದಿ ನಮ್ಮನೆಗೆ ಬಂದೆ ಬರುತ್ತಾನೆ. ನಾನು ಅವನಲ್ಲಿರುವ ಜಾಗಕ್ಕೆ ಹೋಗಲ್ಲ ಅವನೇ ನಮ್ಮನೆಗೆ ಬರಬೇಕು, ಯಾಕೆಂದ್ರೆ ಅವನು ತುಂಬಾ ಒಳ್ಳೇನು ಬಂದೆ ಬರುತ್ತಾನೆ.

ನಾನು ಅಲ್ಲಿಗೆ ಹೋಗಲ್ಲ , ಅವನಿಗೆ ಅಮ್ಮನಿಗೆ ಹೇಳಿ ಉಗ್ಗಿ ಅನ್ನ ಸಾರು ಊಟಕ್ಕೆ ಮಾಡಿಸುತ್ತೀನಿ, ಆ ಮೇಲೆ ಅಮ್ಮಳಿಗೆ ಹೇಳಿ ಟೀ ಮಾಡಿಸಿ ಕೊಡುತ್ತೇನೆ ಅದನ್ನು ಕುಡಿದು ಅವನು ಮನಗೆ ಅವನು ಹೋಗಬೇಕು ಅಷ್ಟೇ.. ಅದು ನನ್ನಿಷ್ಟ. ಅವನು ನಮ್ಮನೆಗೆ ಯಾವಾಗಾದ್ರೂ ಬಂದೇ ಬರುತ್ತಾನೆ ನಮ್ಮನೆಗಾ ಉಣ್ಣುತ್ತಾನೆ ಅದು ಅವನಿಷ್ಟ.. ಅಷ್ಟೇ… ಅಂತಾ ಸ್ಪಷ್ಟವಾಗಿ ಭಾರೀ ಆತ್ಮ ವಿಶ್ವಾದೊಂದಿಗೆ ಹೇಳುತ್ತಾಳೆ ಬಾಲೆ ಹರಣಿ.ಆನತಿ ಅಂತರದಲ್ಲಿರುವ ಅಂಗನ ವಾಡಿ ಶಾಲೆಗೆ ತೆರಳುವ ಬಾಲೆ ಹರಣಿ, ಶಾಲೆಯ ಮಕ್ಕಳಲ್ಲಿ ಕೂಡ ನರೇಂದ್ರ ಮೋದಿಯನ್ನ ಕಾಣುತ್ತಾಳಂತೆ. ಆಟವಾಡುವಾಗ ತನಗಿಷ್ಟವಾದ ಬಾಲಕನೋರ್ವನಿಗೆ, ನರೇಂದ್ರ ಮೋದಿ ಹೆರನ್ನಿಟ್ಟು ಕರೆಯುವ ರೂಡಿ ಮಾಡಿಕೊಂಡಿದ್ದಾಳಂತೆ. ಮೋದಿ ಭಾವಚಿತ್ರವನ್ನು ನೋಡಿದರೆ ಸಾಕು ಪುಳಕಿತಳಾಗುವ ಈ ಬಾಲೆ ಕ್ಷಣ ಹೊತ್ತು, ಭಾವ ಪರವಶಳಾಗುತ್ತಾಳೆ ಕೆಲ ಕ್ಷಣ ವಿಚಲಿತಳಾಗಿ ಗಂಬೀರವಾಗುತ್ತಾಳೆ. ಕೆಲ ಹೊತ್ತಾದ ನಂತರ ಯತಾಸ್ಥಿತಿ ಬರುತ್ತಾಳೆ ಬಾಲೆ ಹರಣಿ. ಓದು ಆಟ ಪಾಠ ಪ್ರತಿಯೊಂದರಲ್ಲಿ ಸಹಜವಾಗಿಯೇ ಚಟುವಟಿಕೆಯಿಂದಿರುವ ಹರಣಿ, ಮೋದಿಯ ಮೋಡಿಗೆ ಹೇಗೆ ಪ್ರಭಾವಿತಳಾಗಲು ಸಾಧ್ಯ ಅದೇ ಒಂದು ವಿಸ್ಮಯವಾಗಿದೆ ಪ್ರೇಶ್ನೆಯಾಗಿ ಉಳಿದಿದೆ. ದೇಶ ವಿದೇಶಗಳಲ್ಲಿ ತಮ್ಮದೇ ಆದ ಪ್ರಭಾವವನ್ನು ಬೀರಿರುವ ಪ್ರಧಾನಿ ನರೇಂದ್ರ ಮೋದಿಯವರು, ಏನೂ ಅರಿಯದ ಬಾಲೆಯ ಮೇಲೆ ಹೇಗೆ ಪ್ರಭಾವ ಬೀರಲು ಸಾಧ್ಯ..!? ಅವಳು ಅವರಿಗಾಗಿ ಕಾದಿದ್ದು ಅವರು ತನನ್ನಲ್ಲಿಗೇ ಬಂದು, ಅವಳು ನೀಡುವ ಆತಿಥ್ಯ ಸ್ವೀಕರಿಸಲೇ ಬೇಕೆಂಬ ವಿಚಾರ ಮೂಡಿದ್ದಾದರೂ ಹೇಗೆ.. ಎಂಬ ಯಕ್ಷ ಪ್ರೆಶ್ನೆ ಎಂಥವರಿಗೂ ಮೂಡದೇ ಇರದು. ರಾಮಾಯಣದಲ್ಲಿ ರಾಮನಿಗಾಗಿ ಶಬರಿ ಮಾತೆ ಕಾದಿದ್ದಳು, ರಾಮ ಬಂದೇ.. ಬರುತ್ತಾನೆ… ಎಂದು. ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬಾಲೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗಾಗಿ ಕಾದು ಕುಳಿತಿದ್ದಾಳೆ..ಹಲವು ತಿಂಗಳು ಗಳಿಂದ ನರೇಂದ್ರ ಮೋದಿ ಬಂದೇ.. ಬರುತ್ತಾನೆ… ಎಂದು..

ವರದಿ. ವೃಷಬೇಂದ್ರಿ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
