;

ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ,..!!!

ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿ, ನ್ಯಾ. ಅನುಪಮಾ ಡಿ.
ಹ.ಬೊ.ಹಳ್ಳಿ.ತಾಲೂಕು ಕಾನೂನು ಸೇವೆಗಳ ಸಮಿತಿ,ಹಾಗೂ ತಾಲೂಕು ಆಡಳಿತ ಇವರ ಸಹಯೋಗದೊಂದಿಗೆ “ರಾಷ್ಟ್ರೀಯ ಮತದಾರರ ದಿನಾಚರಣೆ” ಹಾಗೂ ಪ್ರತಿಜ್ಞಾ ವಿಧಿ ಭೋಧನೆ ಕಾರ್ಯಕ್ರಮವು ಪಟ್ಟಣದ ಜಿ.ವಿ.ಪಿ.ಪಿ. ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಇದರ ಉದ್ಘಾಟನೆಯನ್ನು ಶ್ರೀಮತಿ ಅನುಪಮಾ ಡಿ. ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು , ತಾಲೂಕು ಕಾನೂನು ಸೇವೆಗಳ ಸಮಿತಿ, ಉದ್ಘಾಟಿಸಿ ನಂತರ ಮಾತನಾಡಿ, ಸವಿಂದನಾತ್ಮಕವಾಗಿ ಎಲ್ಲರಿಗೂ ಮತದಾನ ಹಕ್ಕು ಇರುತ್ತದೆ, ಅದರಲ್ಲಿ 18 ತುಂಬಿದ ವಯಸ್ಸಿನ ಎಲ್ಲರೂ ಮತದಾನ ಮಾಡುವ ಹಕ್ಕು ಇದೆ. ಎಲ್ಲರೂ ವಿವೇಚನಾತ್ಮಕವಾಗಿ, ಜಾಗೃತಿಯಾಗಿ, ಯಾವುದೇ ಆಮಿಷಕ್ಕೆ, ಒಳಗಾಗದೆ, ನಿಮ್ಮ ಮತವನ್ನು ಮಾರಿಕೊಳ್ಳದೆ ಧೈರ್ಯವಾಗಿ ಮತ ದಾನ ಮಾಡಿ, ನೀವು ವಿದ್ಯಾರ್ಥಿಗಳು ಮುಂದಿನ ದೊಡ್ಡ ಪ್ರಜೆಗಳಾಗಿ, ಒಳ್ಳೊಳ್ಳೆ ಉದ್ಯೋಗಾವಕಾಶವನ್ನು ಪಡೆದುಕೊಳ್ಳಿ, ಯಾವುದೇ ರೀತಿಯಿಂದ, ಮೊಬೈಲ್ಗಳಿಗೆ ಬಲಿಯಾಗಬೇಡಿ, ಚೆನ್ನಾಗಿ ಓದಿ, ಒಳ್ಳೆ ಅಂಕಗಳನ್ನು ಪಡೆದುಕೊಳ್ಳಿ, ಒಳ್ಳೆ ಪುಸ್ತಕಗಳನ್ನು ಓದಿ, ಒಳ್ಳೆ ವಿದ್ಯಾವಂತರಾಗಿ ಬಾಳಿ, ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ, ಶ್ರೀ ಶ್ರೀ ಕಾರ್ತಿಕ್. ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನಂದನಾಧಿಕಾರಿಗಳು ಹ.ಬೊ. ಹಳ್ಳಿ. ಮಾತನಾಡಿ, ಪ್ರಾರ್ಥನೆ, ವಾರುಣಿ, ನಿರೂಪಣೆ ಮತ್ತು ಸ್ವಾಗತ ಭಾಷಣ ಡಾ. ಸತೀಶ್ ಪಾಟೀಲ್ ಪ್ರಾಧ್ಯಾಪಕರು, ಮತದಾರರ ಪ್ರತಿಜ್ಞಾವಿಧಿ ಬೋಧನೆಯನ್ನು ಶ್ರೀನಿವಾಸ್ ಎಂ. ವಕೀಲರು. ವಂದನಾರ್ಪಣೆ ಸಿ ಕೊಟ್ರೇಶ, ದೈಹಿಕ ಶಿಕ್ಷಣ ಪರಿವೀಕ್ಷಕರು, ಪ್ರಾಸ್ತಾವಿಕ ಭಾಷಣವನ್ನು ಶ್ರೀ ಪರಮೇಶ್ವರ ಜಿ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ್ ಪಂಚಾಯತ್, ಹ.ಬೊ. ಹಳ್ಳಿ. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆಯಲ್ಲಿ, ಶ್ರೀ ಆನಂದ್ ಎಂ ಸಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶ್ರೀಮತಿ ನಾಗರತ್ನ, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು , ಶ್ರೀ ಬಸಪ್ಪ. ಅಧ್ಯಕ್ಷರು, ವಕೀಲರ ಸಂಘ, ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲೂಕ ಆಡಳಿತ, ಸಿಬ್ಬಂದಿ ವರ್ಗದವರು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ, ಶ್ರೀ ವೆಂಕಟೇಶ್, ಹಾಗೂ ಸಿಬ್ಬಂದಿ ವರ್ಗ, ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;