ಕೋಲಾರದ ಸೋದರಿ
ನವನ್ಯಾಯಾಧೀಶೆ ಗಾಯತ್ರಿ ಹಾಗೂ ಚಾಮರಾಜನಗರದ ಸಹೋದರ ನ್ಯಾಯಾಧೀಶ ಶಂಕರ್ ಅವರಿಗೆ ಅಭನಂದನೆ..
ಹರಪನಹಳ್ಳಿ:- ಭ್ರಷ್ಟಾಚಾರಿ ಬಂಡವಾಳಶಾಹಿ ಜನವಿರೋಧಿ ರಾಜಕೀಯ ವ್ಯವಸ್ಥೆಯು ನ್ಯಾಯಾಂಗವನ್ನೂ ಅದರ ಸ್ವಾತಂತ್ರ್ಯವನ್ನೂ ಕಸಿದು ಅಲ್ಲಿಯೂ ಜಾತಿ ಧರ್ಮ ಭ್ರಷ್ಟಾಚಾರದ ವಾಸನೆಯನ್ನು ಹಬ್ಬಿಸುತ್ತಿರುವುದರಿಂದ ಜನಸಾಮಾನ್ಯರು ಆತಂಕದಲ್ಲಿರುವ ಈ ಸಂದರ್ಭದಲ್ಲಿ ಕೋಲಾರದ ಸೋದರಿ ಗಾಯತ್ರಿಯವರು ಹಾಗು ಚಾಮರಾಜನಗರದ ಸೋದರ ಶಂಕರ್ ಇವರುಗಳು ಬಡತನವನ್ನು ಮೆಟ್ಟಿ ನಿಂತು ಬಾಬಾಸಾಹೇಬರನ್ನೇ ಸ್ಫೂರ್ತಿಯನ್ನಾಗಿಸಿಕೊಂಡು ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆದು ಗೆದ್ದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯ
ಈ ಭೀಮಬೆಳಕಿನ ಕುಡಿಗಳಿಂದ ಒಂದಷ್ಟು ಭರವಸೆ ಮೂಡಿದೆ. ಅಭಿನಂದನೆಗಳು ಸೋದರಿ-ಸೋದರರೇ
ಹೊಸ ಭಾಷ್ಯ ಬರೆಯಿರಿ. ಸಂವಿಧಾನದ ಪುಟ ಪುಟಗಳಿಂದ ಇನ್ನಷ್ಟು ಚೈತನ್ಯ ಪಡೆದು ಅಸಹಾಯಕರಿಗೆ ನ್ಯಾಯದಾನ ಮಾಡಿ ಹೈಕೋರ್ಟ್ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬೆಳೆಯಿರಿ ದೇಶವನ್ನು ಉಳಿಸಿರಿ..
ಜೈಭೀಮ್ ನಮೋ ಬುದ್ಧಾಯ
ಹರಪನಹಳ್ಳಿ ತಾಲ್ಲಕಿನ ಛಲವಾದಿ ಮಹಾಸಭ ಗಟಕದ ಅದ್ಯಕ್ಷರು/ಪ್ರಧಾನ ಕಾರ್ಯದರ್ಶಿ ಪ್ರತಾಪ್ ಛಲವಾದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
