;

ಬಣವಿಕಲ್ಲು ಗ್ರಾಮ ಲೆಕ್ಕಾಧಿಕಾರಿ ಅಂಬುಜಾಕ್ಷಿ ಇವರನ್ನು ವರ್ಗಾವಣೆ ಮಾಡಲು ಮನವಿ ಸಲ್ಲಿಸಿದ ಗ್ರಾಮದವರು!!!!

ಬಣವಿಕಲ್ಲು ಗ್ರಾಮ ಲೆಕ್ಕಾಧಿಕಾರಿ ಅಂಬುಜಾಕ್ಷಿ ಇವರನ್ನು ವರ್ಗಾವಣೆ ಮಾಡಲು ಮನವಿ ಸಲ್ಲಿಸಿದ ಗ್ರಾಮದವರು!!!! ಕೂಡ್ಲಿಗಿ: ದಿನಾಂಕ 9-1-23 ಸೋಮವಾರದಂದು ತಾಲೂಕಿನ ಬಣವಿಕಲ್ಲು ಗ್ರಾಮ ಲೆಕ್ಕಾಧಿಕಾರಿಯನ್ನು ವರ್ಗಾವಣೆ ಮಾಡಲು ಕೂಡ್ಲಿಗಿ ಮಾನ್ಯ ತಹಸೀಲ್ದಾರರ ಮೂಲಕ ವಿಜಯನಗರ ಜಿಲ್ಲಾಧಿಕಾರಿ ಹಾಗೂ ಮಾನ್ಯ ಸಹಾಯಕ ಆಯುಕ್ತರಿಗೆ ಗ್ರಾಮ ಲೆಕ್ಕಾಧಿಕಾರಿ ಅಂಬುಜಾಕ್ಷಿ ಇವರನ್ನು ಬಣವಿಕಲ್ಲು ಕಂದಾಯ ಗ್ರಾಮಕ್ಕೆ ಸೇರಿದ ಹಳ್ಳಿಗಳಿಂದ ಬಂದ ನಾಗರಿಕರು ಒಪ್ಪಿ ಇವರನ್ನು ಬೇರೆಡೆಗೆ ವರ್ಗಾಯಿಸುವುದಕ್ಕೆ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ 2022 ಫೆಬ್ರವರಿ ಎಂದು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಇವರನ್ನು ವರ್ಗಾವಣೆ ಮಾಡಲು ಒತ್ತಾಯಿಸಿದ್ದೇವೆ, ಆದರೂ ಸಹ ಖಾಯಂ ವರ್ಗಾವಣೆ ಮಾಡದೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿ ಶ್ರೀ ಹರೀಶ್ ಅವರನ್ನು ನೇಮಿಸಿರುತ್ತಾರೆ ಅದಕ್ಕಾಗಿ ಅವರು ನಮಗೆ ಖಾಯಂ ಗ್ರಾಮ ಲೆಕ್ಕಾಧಿಕಾರಿಯಾಗಿ ನಿಯೋಜನೆ ಮಾಡಬೇಕೆಂದು ಮಾನ್ಯ ತಹಸೀಲ್ದಾರರಿಗೆ ಕೇಳಿಕೊಳ್ಳುತ್ತೇವೆ, ಯಾವುದೇ ಕಾರಣಕ್ಕೂ ಅಂಬುಜಾಕ್ಷಿಯವರನ್ನು ಬಣವಿಕಲ್ಲು ಗ್ರಾಮ ಲೆಕ್ಕಾಧಿಕಾರಿಯಾಗಿ ನಿಯೋಜನೆ ಮಾಡಬಾರದು ಎಂದು ತಮ್ಮಲ್ಲಿ ವಿನಂತಿಸುತ್ತೇವೆ. ಇದೇ ಸಂದರ್ಭದಲ್ಲಿ ಬಣವಿಕಲ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಆರ್. ವೀರಣ್ಣ, ಜಿ.ಓಬಣ್ಣ, ಮತ್ತು ಗ್ರಾಮದ ಮುಖಂಡರುಗಳಾದ ಬಿ.ಎಸ್.ಶರಣಪ್ಪ, ಕಾಮಶೆಟ್ಟಿ ಬಸವರಾಜ್, ಕೆ. ಅಲ್ಲಾಭಕ್ಷಿ,ಬಿ.ಎಸ್.ಪ್ರಶಾಂತ್ ಗೌಡ, ಕಾಮಶೆಟ್ಟಿ ನಾಗರಾಜ್, ಎಸ್.ಆನಂದ್, ಕಾಮಶೆಟ್ಟಿ ಬಸವರಾಜ್, ಎಚ್. ಆನಂದ್, ಮಲ್ಲಿಕಾರ್ಜುನ, ಪಿ .ದುರ್ಗೇಶ್, ಡಿ. ಮಂಜುನಾಥ್, ಡಿ. ಸಿದ್ದೇಶ್, ಮಾರಪ್ಪ, ಬಿ .ಎಂ. ಉಮಾಶಂಕರ, ಪೂಜಾರಿ ದುರ್ಗೇಶ್, ಆರ್ ಪರಮೇಶ್ವರಪ್ಪ, ಜಿ. ಚೌಡೇಶ್, ಬಿ.ಎಸ್ .ರವಿಕುಮಾರ್, ಎಸ್. ಸ್ವಾಮಿ, ಜಿ .ಬಸವರಾಜ ಇತರರು ಗ್ರಾಮದಹಲವಾರು ಗ್ರಾಮಸ್ಥರು ಇದ್ದರು.

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;