ತಾಯಕನಹಳ್ಳಿ ಗ್ರಾಮಸ್ಥರಿಂದ ನಿವೇಶನಕ್ಕಾಗಿ ಮನವಿಸರ್ಕಾರಿ ಅನಾದೀನ ಜಮೀನಿನಲ್ಲಿ ನಿವೇಶನ ಹಂಚುವಂತೆ ಗ್ರಾಮಸ್ಥರ ಪ್ರತಿಭಟನೆ
ಕಾನ ಹೊಸಹಳ್ಳಿ: ಹೂಡೇಂ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ತಾಯಕನಹಳ್ಳಿ ಗ್ರಾಮದ ಪ್ರೌಢಶಾಲೆಯ ಪಕ್ಕದಲ್ಲಿ ಇರುವ ಸರ್ವೇ ನಂಬರ್ 206 ವಿಸ್ತೀರ್ಣ 2 ಎಕರೆ 40 ಗುಂಟೆ ಉಳ್ಳ ಜಮೀನು ಅನಾಧೀನ ಇದ್ದು ಈ ಜಮೀನಿ ನಲ್ಲಿ ವಸತಿ ರಹಿತರಾದ ನಮಗೆ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಿ ಕೊಡುವಂತೆ ತಾಯಕನಹಳ್ಳಿ ಗ್ರಾಮದ ನಿವೇಶನ ರಹಿತರು ಈ ಸಂಬಂಧಪಟ್ಟ ತಹಸಿಲ್ದಾರರಿಗೂ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನಡುವಲಹಟ್ಟಿ ಸಣ್ಣ ಬೋರಯ್ಯನವರು ಮಾತನಾಡಿ ನಿವೇಶನಗಳಿಗೆ ಸಂಬಂಧಿಸಿದಂತೆ ಸುಮಾರು ಬಾರಿ ಈ ಭಾಗದ ಸಂಸದರಾದ ದೇವೇಂದ್ರಪ್ಪನವರಿಗೂ, ಮಾನ್ಯ ಜಿಲ್ಲಾಧಿಕಾರಿಗಳಿಗೂ, ತಾಲೂಕು ತಹಲ್ದಾರರಿಗೂ ಲಿಖಿತ ರೂಪದಲ್ಲಿ ಅರ್ಜಿ ಕೊಟ್ಟು ತಾಯಕನಹಳ್ಳಿ ಹಾಗೂ ನಡುವಲಹಟ್ಟಿ ಗ್ರಾಮದ ಗ್ರಾಮಸ್ಥರು ಖುದ್ದಾಗಿ ಭೇಟಿಯಾಗಿ ಇಲ್ಲಿ ಇರುವ ಅನಾಧೀನ ಜಮೀನಿನಲ್ಲಿ ವಸತಿ ರೈತರಿಗೆ ಜಾಗ ದೊರಕಿಸಿ ಕೊಟ್ಟು ಆಶ್ರಯ ಯೋಜನೆ ಅಡಿಯಲ್ಲಿ ಮನೆ ಗಳನ್ನು ನಿರ್ಮಿಸಿ ಕೊಡುವಂತೆ ನಾವುಗಳು ಕೇಳಿಕೊಂಡಿರುತ್ತೇವೆ. ಆದರೂ ಸಹ ನಮಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ತಾಲೂಕು ಅಧಿಕಾರಿಗಳು ಮೌನ:
ತಹಶೀಲ್ದಾರ್ ಟಿ ಜಗದೀಶ್ ರವರು ತಾಯಕನಹಳ್ಳಿ ಗ್ರಾಮಕ್ಕೆ ಭೇಟಿಕೊಟ್ಟು ಈ ಜಮೀನನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸದೆ ಮನೆಗಳನ್ನು ಕಟ್ಟಿಕೊಳ್ಳಲು ಇದು ಯೋಗ್ಯವಾದ ಜಮೀನು ಅಲ್ಲ ಎಂದು ಹೇಳಿದರು, ಆದರೆ ಈ ಅನಾದೀನ ಜಮೀನಿನ ಪಕ್ಕದಲ್ಲಿ ಪ್ರೌಢಶಾಲೆಯನ್ನು ಕಟ್ಟಿರಲಾಗಿರುತ್ತದೆ ಪ್ರೌಢ ಶಾಲೆಗೆ ಮಾತ್ರ ಕಟ್ಟಿಕೊಳ್ಳಲು ಯೋಗ್ಯವಾದ ಸ್ಥಳ ಆದರೆ ಗ್ರಾಮಸ್ಥರಿಗೆ ನಿರ್ಗತಿಕರಿಗೆ ಇಲ್ಲಿ ಮನೆ ಕಟ್ಟಿಕೊಳ್ಳಲು ಯೋಗ್ಯವಾದ ಸ್ಥಳವಲ್ಲವೇನು ಎಂಬುದು ನಮಗೆ ಪ್ರಶ್ನೆಯಾಗಿ ಉಳಿದಿದೆ. ಮಾನ್ಯ ತಹಶೀಲ್ದಾರರೇ ಈ ರೀತಿ ಹೇಳಬೇಕಾದರೆ ನಾವು ಯಾರ ಮೊರೆ ಹೋಗಬೇಕು ಎಂದು ಹೇಳಿ ಮಾನ್ಯ ಜಿಲ್ಲಾಧಿಕಾರಿಗಳು ಈ ಗ್ರಾಮಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲಿಸಿ ವಸತಿ ರಹಿತರಾದ ನಮಗೆ ಈ ಜಮೀನಿನಲ್ಲಿ ಜಾಗ ದೊರಕಿಸಿಕೊಟ್ಟು ಯಾವುದಾದರೂ ಯೋಜನೆ ಅಡಿಯಲ್ಲಿ ಗುಂಪು ಮನೆಗಳ ನಿರ್ಮಾಣ ಮಾಡಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಬೇಕಾಗಿ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ll ಕರಿಬಸಮ್ಮ ದುರುಗಪ್ಪ ಮಾತನಾಡಿ ಸಂಬಂಧಪಟ್ಟ ಅಧಿಕಾರಿಗಳು ನಿರ್ಗತಿಕರಿಗೆ ಹಾಗೂ ವಸತಿ ರಹಿತರಿಗೆ ಜಾಗ ಮಂಜೂರು ಮಾಡಿ ಕೊಟ್ಟು ಮನೆಗಳನ್ನು ನಿರ್ಮಿಸಲು ಅನುಮತಿ ನೀಡಬೇಕಾಗಿ ಕೇಳಿಕೊಂಡರು. ಈ ಸಂದರ್ಭದಲ್ಲಿ ನಡುವಲಹಟ್ಟಿ ಗ್ರಾಮದ ಬುಲ್ಲಡು ಓಬಯ್ಯ, ಕಾವಲು ಮಲ್ಲಯ್ಯ ಬೋರಯ್ಯ ಯುವರಾಜ, ಹೊನ್ನೂರಮ್ಮ, ದೊಡ್ಡಯ್ಯ, ಕುಮಾರ, ಕೃಷ್ಣಪ್ಪ, ಎಲ್ಲಕ್ಕ, ಹುಚ್ಚಂಗಿ ಸೇರಿದಂತೆ ನಡುವಲ್ಲಟ್ಟಿ ಹಾಗೂ ತಾಯಕನಹಳ್ಳಿ ಗ್ರಾಮದವರು ಇತರರು ಇದ್ದರು.

ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ:
ಹಲವು ಬಾರಿ ನಿವೇಶನ ಕಲ್ಪಿಸಿ ಕೊಡುವಂತೆ ಮನವಿ ಮಾಡಿದರೂ ಯಾವುದೆ ಪ್ರಯೋಜನವವಾಗಿಲ್ಲ. ಇನ್ ನಡುವಲಹಟ್ಟಿ ಗ್ರಾಮ ಠಾಣೆಗೆ ಸೇರಿಲ್ಲ, ಗ್ರಾಮಸ್ಥರು ಸರಕಾರಿ ಕಚೇರಿಗೆ ಅಲೆದಾಡುತ್ತಿದ್ದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ಭರವಸೆಗೆ ಸೀಮಿತವಾಗಿದ್ದಾರೆ. ಆದರಿಂದ ಈ ಬಾರಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮಸ್ಥರಿಗೆ ಯಾವುದೇ ಸರ್ಕಾರಿ
ಜಾಗವೇ ಇಲ್ಲ. ಹೀಗಾಗಿ ಗೋಮಾಳ ಜಮೀನಿನಲ್ಲಿ ನಿವೇಶನ ಇಲ್ಲದವರಿಗೆ ಆಶ್ರಯ ಯೋಜನೆಯಡಿ ನಿವೇಶನ ನೀಡುವಂತೆ ಕಳೆದ ವರ್ಷಗಳಿಂದ ಅರ್ಜಿ ಹಾಕುತ್ತಿದ್ದಾರೆ. ಆದರೆ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಿದೆ.ಹೂಡೇಂ ಗ್ರಾ.ಪಂ ಅಧ್ಯಕ್ಷೆ ಕರಿಬಸಮ್ಮ ದುರುಗಪ್ಪ.

ವರದಿ : ಸಿ ಅರುಣ್ ಕುಮಾರ್ ಜುಮ್ಮೋವನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
