;

ಸಕಾಲ ಹಾಗೂ ಐ.ಪಿ.ಜಿ.ಆರ್.ಎಸ್ ಪ್ರಗತಿ ಪರಿಶೀಲನಾ ಸಭ ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಿ : ಎಂ.ಸುಂದರೇಶ ಬಾಬು…!!!

ಸಕಾಲ ಹಾಗೂ ಐ.ಪಿ.ಜಿ.ಆರ್.ಎಸ್ ಪ್ರಗತಿ ಪರಿಶೀಲನಾ ಸಭ ತ್ವರಿತ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಿ : ಎಂ.ಸುಂದರೇಶ ಬಾಬು
ಕೊಪ್ಪಳ : ಸಕಾಲ ಯೋಜನೆಯಡಿ ವಿವಿಧ ಇಲಾಖೆಗಳಲ್ಲಿ ಸ್ವೀಕರಿಸುವ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಹಾಗೂ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಕಾಲ ಹಾಗೂ ಐ.ಪಿ.ಜಿ.ಆರ್.ಎಸ್. ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸೆಂಬರ್ 26 ರಂದು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಸಕಾಲ ಅಡಿ ವಿವಿಧ ಇಲಾಖೆಗಳು, ನಿಗಮ, ಸಂಸ್ಥೆಗಳು ಸೇರಿದಂತೆ ಒಟ್ಟು 45 ಕಚೇರಿಗಳು ಸಾರ್ವಜನಿಕರಿಗೆ ಹಲವು ಬಗೆಯ ಸೇವೆಗಳನ್ನು ಒದಗಿಸುತ್ತವೆ. ಪ್ರತಿಯೊಂದು ಇಲಾಖೆಯ ಒಪ್ಪಿಗೆ ಹಾಗೂ ಕಾರ್ಯನಿರ್ವಹಣೆಯ ಅವಧಿಯನುಸಾರ ಪ್ರತಿ ಅರ್ಜಿ ವಿಲೇವಾರಿಗೂ ನಿರ್ದಿಷ್ಟ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ವಿಲೇವಾರಿಗೆ ಹಾಗೂ ಅರ್ಜಿ ತಿರಸ್ಕಾರಕ್ಕೆ ಸಂಬಂಧಿಸಿದಂತೆ ಕೊನೆಯ ದಿನಾಂಕದವರೆಗೆ ಕಾಯುವ ಬದಲಿಗೆ ತ್ವರಿತವಾಗಿ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಸಕಾಲದಡಿ ಈ ಭಾರಿ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಾಕಿ ಉಳಿದಿರುತ್ತವೆ. ಇದೇ ರೀತಿಯಲ್ಲಿ ಯಾವುದೇ ಬಾಕಿ ಪ್ರಕರಣಗಳು ಉಳಿಯದಂತೆ ಪ್ರತಿ ಮಾಹೆಯಲ್ಲಿಯೂ ಸಹ ತ್ವರಿತಗತಿಯಲ್ಲಿ ಅರ್ಜಿ ವಿಲೇವಾರಿಯಾಗಬೇಕು. ಒಂದು ವೇಳೆ ತಮ್ಮ ಕಚೇರಿಗೆ ಸಂಬಂಧಿಸದ ಅರ್ಜಿಗಳು ಬಂದರೆ, ಅದನ್ನು ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡಿ ಈ ಕುರಿತಂತೆ ಮಾಹಿತಿ ನಮೂದಿಸಬೇಕು ಎಂದರು.
ಸಕಾಲದಂತೆಯೇ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕಾಗಿ ಐ.ಪಿ.ಜಿ.ಆರ್.ಎಸ್. ತಂತ್ರಾಂಶವನ್ನು ಸರ್ಕಾರ ಜಾರಿಗೊಳಿಸಿದೆ.

ಇದು ನೇರವಾಗಿ ಮುಖ್ಯಮಂತ್ರಿಗಳ ಡ್ಯಾಶ್ಬೋರ್ಡ್ನಲ್ಲಿ ಕಾರ್ಯನಿರ್ವಹಿಸುವುದರಿಂದ ಜಿಲ್ಲೆಯಲ್ಲಿ ಸ್ವೀಕೃತವಾಗುವ ಅರ್ಜಿಗಳು, ಅವುಗಳ ವಿಲೇವಾರಿ ಕುರಿತ ಮಾಹಿತಿಯು ಮುಖ್ಯಮಂತ್ರಿಗಳ ಗಮನಕ್ಕೆ ಬರುತ್ತದೆ. ಆದ್ದರಿಂದ ಇದರಲ್ಲಿ ಸ್ವೀಕೃತವಾಗುವ ಎಲ್ಲ ಅರ್ಜಿಗಳಿಗೆ ಸೂಕ್ತ ಹಿಂಬರಹದೊಂದಿಗೆ ಅರ್ಜಿಯನ್ನು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಿ. ಸಕಾಲದಂತೆ ಇಲ್ಲಿಯೂ ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕಾಗುವುದರಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ ಅವರು ಮಾತನಾಡಿ, ನವೆಂಬರ್ ಮಾಹೆಯಲ್ಲಿ 58,266 ಒಟ್ಟು ಅರ್ಜಿಗಳು ಸ್ವೀಕೃತಿಯಾಗಿದ್ದು, ಈಗಾಗಲೇ 62,5012 ಅರ್ಜಿಗಳು ವಿಲೇವಾರಿಯಾಗಿವೆ. ಇದರಲ್ಲಿ 2804 ಅರ್ಜಿಗಳು ವಿಳಂಭವಾಗಿ ವಿಲೇವಾರಿಯಾದರೆ, 3621 ಅರ್ಜಿಗಳು ತಿರಸ್ಕೃತ ಗೊಂಡಿರುತ್ತವೆ. ಬಾಕಿ ಉಳಿದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ನವೆಂಬರ್ ಮಾಹೆಯಲ್ಲಿ ಜಿಲ್ಲೆಯು ಶ್ರೇಯಾಂಕ ಪಡೆದಿರುತ್ತದೆ. ಅದರಂತೆಯೇ ಪ್ರತಿ ಮಾಹೆಯಲ್ಲಿ ಅರ್ಜಿ ವಿಲೇವಾಡಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ಸಮೀರ್ ಮುಲ್ಲಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯಾರಾಣಿ, ಸಕಾಲ ಸಮಾಲೋಕ ವಿಶ್ವನಾಥ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು..

ವರದಿ. ಸಂಗೀತ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend