;

ಗುಡೇಕೋಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ…!!!

ಗುಡೇಕೋಟೆ ಪೊಲೀಸರ ಕಾರ್ಯಾಚರಣೆ;,,,, ಕೂಡ್ಲಿಗಿ. ತಾಲೂಕಿನ ಗುಡೇಕೋಟೆಯಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಕೆ.ತಿಪ್ಪೇಸ್ವಾಮಿ ಎಂಬುವರ ಮನೆಯ ಬೇಗ ಮುರಿದು ಕಳ್ಳತನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ್ಲಿಗಿ ಸಿಪಿಐ ನೇತೃತ್ವದ ಗುಡೆಕೋಟೆ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿ ಕಳ್ಳತನವಾಗಿದ್ದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಗುಡೆಕೋಟೆ ಗ್ರಾಮದ ನಿವಾಸಿ ಹಾಗೂ ಕಬ್ಬಿಣದ ಗಾಡ್ರೆಜ್ ಮಾಡುತ್ತಿದ್ದ ಸದ್ದಾಂ ಹುಸೇನ್ ಎನ್ನುವವರು ಮನೆಗಳ್ಳತನ ಮಾಡಿದ ಆರೋಪಿಯಾಗಿದ್ದು, ಆತನಿಂದ 5.17 ಲಕ್ಷ ರೂ, ಮೌಲ್ಯದ ಬಂಗಾರ 2. ಬ್ರಾಸ್ಲೈಟ್, 2. ಕೊರಳ ಚೈನ್, ಒಂದು ಉಂಗುರ ಸೇರಿ ಇತರೆ ವಸ್ತುಗಳನ್ನು ಜಪ್ತೀ ಮಾಡಲಾಗಿದೆ ಎಂದು ವಿಜಯನಗರ ಎಸ್ಪಿ ಬಿ.ಎಲ್. ಹರಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಡೆಕೋಟೆಯಲ್ಲಿ ನಡೆದ ಮನೆಯ ಕಳ್ಳತನಕ್ಕೆ ಸಂಬಂಧಿಸಿ ಡಿವೈಎಸ್ಪಿ ಹರೀಶ್ ಮಾರ್ಗದರ್ಶನದಲ್ಲಿ ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ನೇತೃತ್ವದಲ್ಲಿ ಗುಡೆಕೋಟೆ ಠಾಣೆ ಪಿಎಸ್ಐ ಮಾಲಿಕ್ ಸಾಬ್ ಕರಾರಿ, ಪೇದೆಗಳಾದ ಪೂಜಾರಹಳ್ಳಿ ಗುರುಸ್ವಾಮಿ, ರಾಘವೇಂದ್ರ, ಚೈತನ್ಯ, ಬಸವರಾಜ ತಂಡದವರು ಆರೋಪಿಯನ್ನು ಬಂಧಿಸಿ, ಕಳ್ಳತನವಾಗಿದ್ದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಗುಡೆಕೋಟೆ ಪೊಲೀಸರ ಕಾರ್ಯಕ್ಕೆ ವಿಜಯನಗರ ಜಿಲ್ಲಾ ಎಸ್ಪಿ ಶ್ರೀ ಹರಿಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;