ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ!!!!! ಕೂಡ್ಲಿಗಿ, ದಿ.23.12.22 ಶುಕ್ರವಾರ ತಾಲೂಕಿನ ಕೂಡ್ಲಿಗಿಯಲ್ಲಿ. ಜಿಲ್ಲಾ ಪಂಚಾಯತ್ ವಿಜಯನಗರ, ತಾಲೂಕು ಪಂಚಾಯತ್ ಕೂಡ್ಲಿಗಿ ಕೃಷಿ ಇಲಾಖೆ, ಆತ್ಮ ಯೋಜನೆ ಹಾಗೂ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ ಕೂಡ್ಲಿಗಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೂಡ್ಲಿಗಿ ತಾಲೂಕು ಕೃಷಿ ಇಲಾಖೆ ವತಿಯಿಂದ ರೈತ ದಿನಾಚರಣೆ ನಡೆಯಿತು. ಈ ಕಾರ್ಯಕ್ರಮವನ್ನು ವೇದಿಕೆ ಮೇಲಿನ ಗಣ್ಯರು ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶ್ರೀ ರೇಣುಕಾ ದುರುಗೇಶ್ ಸೇರಿ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪ್ರಾರ್ಥನ ಗೀತೆ ಹಾಡಿದ ರೈತ ಕೂಡ್ಲಿಗಿ ಕಾಟೇರ್ ಶೇಷಪ್ಪ ನಡೆಸಿಕೊಟ್ಟರು, ಸ್ವಾಗತ ಭಾಷಣವನ್ನು ಬಿ.ನೀಲಾನಾಯ್ಕ ತಾಲೂಕು ಕೃಷಿ ಅಧಿಕಾರಿ ಸಹಾಯಕ ನಿರ್ದೇಶಕರು ನೆರವೇರಿಸಿದರು. ಪ್ರಸ್ತಾವಿಕ ನುಡಿಯನ್ನು ಸುನಿಲ್ ಕುಮಾರ್ ಎಂ.ಟಿ. ಸಹಾಯಕ ಕೃಷಿ ನಿರ್ದೇಶಕರು ಕೂಡ್ಲಿಗಿ ಇವರು ಮಾತನಾಡಿ ರೈತರು ಕೃಷಿ ಇಲಾಖೆಯಲ್ಲಿ ರೈತರಿಗೆ ದೊರಕುವ ಬಗ್ಗೆ ಚರ್ಚಿಸಿ ರೈತರು ತಮ್ಮ ಕೃಷಿ ಚಟುವಟಿಕೆಯನ್ನು ಬಹಳ ಉತ್ಸಾಹದಿಂದ ಪಾಲ್ಗೊಂಡು ತಮ್ಮ ತಮ್ಮ ಜಮೀನುಗಳಲ್ಲಿ ಹೊಸ ಪದ್ದತಿಯ ತಳಿಗಳನ್ನು ನಿಮ್ಮ ಜಮೀನುಗಳಿಗೆ ಅಳವಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸಬ್ಸಿಡಿ ಸಾಲ ಸೌಲಭ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ ಎಂದು ಹೇಳಿದರು. ಇನ್ನೂ ಸಂಪನ್ಮೂಲ ವ್ಯಕ್ತಿಗಳಾದ ಜಂಗಮ ಸೋವೇನಹಳ್ಳಿ ರೈತರದ ಗೌಡ್ರು ನಾಗರಾಜ್ ರವರು ರೈತರು ತಮ್ಮ ಹೊಲಗಳಲ್ಲಿ ಕೀಟಗಳನ್ನು ಓಡಿಸುವುದಕ್ಕೆ ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿಕೊಳ್ಳಿ ಇದರಿಂದ ನೀವು ಬೆಳೆದಂಥ ಬೆಳೆಗಳು ಸಮೃದ್ಧಿಯಾಗಿ ಬೆಳೆ ಬರುತ್ತದೆ ಎಂದು ಹೇಳಿದರು. ರೈತರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ದೇವರಮನಿ ಮಹೇಶ್ ರವರು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಏನೇನು ಸೌಲಭ್ಯಗಳು ಸಿಗುತ್ತವೆ ಎಂದು ತಿಳಿದುಕೊಳ್ಳಬೇಕು, ಯಾವ ಯಾವ ಇಲಾಖೆಯಲ್ಲಿ ಸರ್ಕಾರದಿಂದ ಅನುದಾನಗಳು ಎಷ್ಟು ಬಂದಿದೆಯನ್ನು ತಿಳಿದುಕೊಂಡು ನಂತರ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಅಧಿಕಾರಿಗಳನ್ನು ಭೇಟಿ ಮಾಡಿ ನಿಮ್ಮ ಹೊಲಗಳಿಗೆ ಯಾವ ಯಾವ ಬೆಳೆಗಳನ್ನು ಹೇಗೆ ಬೆಳೆಯಬೇಕೆಂದು ಅವರಿಂದ ಮಾಹಿತಿ ತೆಗೆದುಕೊಳ್ಳಿ ಹಾಗೂ ಅಧಿಕಾರಿಗಳ ಜೊತೆಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಿ ಎಂದು ಹೇಳಿದರು.

ಇನ್ನೋರ್ವ ರೈತ ಮುಖಂಡರಾದ ಬಸವರಾಜ್ ಕಕ್ಕುಪ್ಪಿ ಇವರು ಮಾತನಾಡಿ ನಾವು ಮೊದಲು ನಮ್ಮ ಹೊಲದಲ್ಲಿ ಯಾವ ಬೆಳೆಯನ್ನು ಹೇಗೆ ಬೆಳೆಯಬೇಕೆಂದು ಅಧಿಕಾರಿಗಳ ಸಂಪರ್ಕದ ಮೂಲಕ ತಿಳಿದು ಅವರಿಂದ ಮಾಹಿತಿ ತೆಗೆದುಕೊಂಡು ತಮ್ಮ ಜಮೀನುಗಳಲ್ಲಿ ಹೊಸ ಹೊಸ ಪದ್ದತಿಯ ಬೆಳೆಗಳಾದ ಡ್ರ್ಯಾಗನ್ ಫ್ರೂಟ್, ರಾಮ ಫಲ, ಇಂತಹಹುಳನ್ನು ಬೆಳೆದು ಆದಾಯ ಗಳಿಸಿ ಎಂದು ತಿಳಿಸಿದರು. ಕೂಡ್ಲಿಗಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಣವಿಕಲ್ಲು ಎರ್ರಿಸ್ವಾಮಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರೇಣುಕಾ ದುರ್ಗೇಶ್, ರೈತ ಮುಖಂಡರುಗಳಾದ ದೇವರಮನಿ ಮಹೇಶ್, ಬಸವರಾಜ ಕಕ್ಕುಪ್ಪಿ, ರೇಷ್ಮೆ ಬೆಳೆಗಾರರು ಹಾಗೂ ಬಿಜೆಪಿ ಪಕ್ಷದ ರೈತ ಮೋರ್ಚ ತಾಲೂಕು ಉಪಾಧ್ಯಕ್ಷ ಆರ್. ವೀರಣ್ಣ ಬಣವಿಕಲ್ಲು, ಚಿಕ್ಕಜೋಗಿಹಳ್ಳಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಡಿ.ಟಿ.ಹನುಮಂತಪ್ಪ, ಶಿವಪುರ ರೈತ ಉತ್ಪಾದಕ ಅಧ್ಯಕ್ಷರು, ಹಾಗೂ ಕೂಡ್ಲಿಗಿ ತಾಲೂಕು ರೈತ ಸಂಘದ ಅಧ್ಯಕ್ಷ ಬೊಪ್ಪಲಾಪುರ ಚೆನ್ನಬಸಪ್ಪ, ತಾಲೂಕಿನ ರೈತರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
