ಬಂಗಾರು ಹನುಮಂತ ಅಭಿಮಾನಿ ಬಳಗದಿಂದ ಮಾ,10ರಂದು ಉಚಿತ ಸಾಮೂಹಿಕ ವಿವಾಹ
ಕೂಡ್ಲಿಗಿ: ಬಂಗಾರು ಹನುಮಂತ ಅಭಿಮಾನಿ ಬಳಗದಿಂದ ಮಾರ್ಚ್ 10ರಂದು ಕೂಡ್ಲಿಗಿಯಲ್ಲಿ 500 ಜೋಡಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತಿಯುಳ್ಳವರು ಜನವರಿ 25ರೊಳಗೆ ಜೋಡಿಗಳ ಹೆಸರು ನೊಂದಾಯಿಸುವಂತೆ ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾದ ಕೋಶಾಧ್ಯಕ್ಷ ಬಂಗಾರು ಹನುಮಂತು ತಿಳಿಸಿದ್ದಾರೆ. ಈಗಾಗಲೇ ಎರಡು ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿದ್ದು, ಈ ಬಾರಿ 500 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಕೂಡ್ಲಿಗಿಯಲ್ಲಿ ಹಮ್ಮಿಕೊಂಡಿದ್ದು ಸರಳ ವಿವಾಹ ಮಾಡಿಕೊಳ್ಳುವುದರ ಮೂಲಕ ನಮ್ಮ ರೈತರು ಹೆಚ್ಚು ಸಾಲ ಮಾಡಿಕೊಂಡು ಮದುವೆ ಮಾಡಿ ಸಾಲ ತೀರಿಸಲು ಕಷ್ಟವಾಗುತ್ತದೆ ಎಂದು ಗಂಡು ಹೆಣ್ಣಿನ ಮನಸ್ಸು ಹೃದಯ ಕಾರ್ಯ ಮಾಡಬೇಕೆಂಬ ಉದ್ದೇಶದಿಂದ ಅದ್ದೂರಿಯಾಗಿ ಈ ಬಾರಿ 500 ಸಾಮೂಹಿಕ ವಿವಾಹ ಮಾಡಲು ಮುಂದಾಗಿದ್ದಾರೆ. ನೊಂದಾಯಿಸುವರು ದೂರವಾಣಿ ಸಂಖ್ಯೆ 9980647076 ಗೆ ಕರೆಮಾಡಿ ಹೆಸರು ನೋಂದಾಯಿಸುವಂತೆ ಕೋರಿದ್ದಾರೆ. ಹಾಗೆ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.

ವರದಿಗಾರರು : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
