;

ಸ್ನೇಹ ಸಂಸ್ಥೆಯು Thought Works India ಸಹಯೋಗದೊಂದಿಗೆ ಮಾರಬ ಗ್ರಾಮದಲ್ಲಿ ಉಚಿತ ಹೊಲಿಗೆ ತರಬೇತಿ ಕೇಂದ್ರ…!!!

ಸ್ನೇಹ ಸಂಸ್ಥೆಯು Thought Works India ಸಹಯೋಗದೊಂದಿಗೆ ಮಾರಬ ಗ್ರಾಮದಲ್ಲಿ ಉಚಿತವಾಗಿ 6ತಿಂಗಳವರೆಗೆ ಹೊಲಿಗೆ ಮತ್ತು ಫ್ಯಾಶನ್ ಡಿಸೈನ್ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಮಾಡಲಾಯಿತು

ಕಾರ್ಯಕ್ರಮದಲ್ಲಿ ಸ್ನೇಹ ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಟಿ ರಾಮಾಂಜನೇಯ ಸರ್ ರವರು ಪ್ರಾಸ್ತಾನಿಕವಾಗಿ ಮಾತನಾಡುತ್ತಾ ಕಾರ್ಯಕ್ರಮದ ಮುಖ್ಯ ಉದ್ದೇಶ ಶಾಲೆ ಬಿಟ್ಟ ದಲಿತ ಮತ್ತು ದಮನೀತ ಮಕ್ಕಳಿಗೆ ಆರು ತಿಂಗಳ ಉಚಿತ ತರಬೇತಿಯನ್ನು ಪಡೆದುಕೊಂಡು ಸಾವಲಂಬಿಗಳಾಗಿ ಜೀವನ್ ನಡೆಸಲು ಸಹಾಯವಾಗುತ್ತದೆ. ವೃತ್ತಿ ತರಬೇತಿಯನ್ನು ಪಡೆದುಕೊಂಡವರಿಗೆ ಹೆಚ್ಚು ಅವಕಾಶಗಳು ಸಿಗುತ್ತವೆ. ಇದೇ ತರ ಈಗಾಗಲೇ ನಮ್ಮ ಸ್ನೇಹ ಸಂಸ್ಥೆ ಕಡೆಯಿಂದ ಕೊಪ್ಪಳ ತಾಲೂಕಿನಲ್ಲಿ 2 ಕೇಂದ್ರ, ಗಂಗಾವತಿ ತಾಲೂಕಿನಲ್ಲಿ 2 ಕೇಂದ್ರ, ಹೊಸಪೇಟೆ ತಾಲೂಕಿನಲ್ಲಿ 2 ಕೇಂದ್ರ ಹಾಗೂ ಕೂಡ್ಲಿಗಿ ತಾಲೂಕಿನಲ್ಲಿ 2 ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಇದುವರೆಗೂ 800ಮಕ್ಕಳು ತರಬೇತಿಯನ್ನು ಪಡೆದುಕೊಂಡಿದ್ದಾರೆ ಇದರಲ್ಲಿ 75% ಮಕ್ಕಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಹೀಗಾಗಿ ನೀವು ಸಹ ಇದರ ಸದುಪಯೋಗ ಪಡೆದುಕೊಂಡು ಹೋಗಿ. ನಿಮ್ಮ ಊರಿನಲ್ಲಿ ಕೇಂದ್ರ ಸ್ಥಾಪನೆ ಮಾಡವುದರ ಹಿಂದೆ ಹಲವಾರು ಜನರ ಪರಿಶ್ರಮವಿದೆ ಹೀಗಾಗಿ ಇದರ ಸದುಪಯೋಗವನ್ನು ಪಡಿಸಿಕೊಳ್ಳಿ ಎಂದು ಮಾತನಾಡಿದರು.
ಸ್ನೇಹ ಸಂಸ್ಥೆಯ ಸಹ ನಿರ್ದೇಶಕರಾದ ಶ್ರೀಮತಿ ಕೆಪಿ ಜಯ ಅವರು ಮಾತನಾಡಿ ಇಂಥ ಅವಕಾಶಗಳು ಹೆಣ್ಣು ಮಕ್ಕಳಿಗೆ ಸಿಗುವುದು ಕಡಿಮೆ ನೀವು ಕಲಿಯಲು ಬೇರೆ ಊರಿಗೆ ಹೋಗಬೇಕಾಗುತ್ತದೆ ಆದರೆ ನಾವು ನಿಮ್ಮ ಊರಲ್ಲಿನೇ ಇಂಥ ಅವಕಾಶವನ್ನು ತಂದಿದ್ದೇವೆ ಇದನ್ನು ಸದುಪಯೋಗಪಡಿಸಿಕೊಂಡು ಹೋಗಿ ಎಂದು ತಿಳಿಸಿದರು
ಗ್ರಾಮ ಪಂಚಾಯತಿಯ ಉಪ ಅಧ್ಯಕ್ಷರಾದ ಶ್ರೀಮತಿ ದುರುಗಮ್ಮ ಇವರು ಮಾತನಾಡಿ ಹೊಲಿಗೆ ತರಬೇತಿ ಕೇಂದ್ರವನ್ನು ನಮ್ಮ ಊರಿಗೆ ಹಾಕಿದ್ದಕ್ಕಾಗಿ ತುಂಬಾ ಸಂತೋಷವಾಗಿದೆ. ಸ್ನೇಹ ಸಂಸ್ಥೆಗೆ ವಯಕ್ತಿಕವಾಗಿ ಧನ್ಯವಾದಗಳು ಹೇಳುತ್ತೇನೆ. ಹೆಣ್ಣು ಮಕ್ಕಳಿಗೆ ಇದು ಒಂದು ಒಳ್ಳೆಯ ಅವಕಾಶ ಹೀಗಾಗಿ ನೀವು ಎಲ್ಲರೂ ತಪ್ಪದೇ ಬಂದು ಚೆನ್ನಾಗಿ ಕಲಿತುಕೊಳ್ಳಿ ಎಂದು ತಿಳಿಸಿದರು
ಸಹಕಾರ ಸೊಸೈಟಿಯ ಸದಸ್ಯರಾದ ಶ್ರೀಯುತ ವೀರಣ್ಣ ಇವರು ಮಾತನಾಡಿ ಹಳ್ಳಿಯಲ್ಲಿ ಹುಡುಗಿಯರಿಗೆ ಬೇರೆ ಕಡೆ ಹೋಗಿ ಕಲಿಯಲು ಆಗುವುದಿಲ್ಲ ಹಾಗಾಗಿ ಸ್ನೇಹ ಸಂಸ್ಥೆಯವರು ನಮ್ಮ ಊರಿಗೆ ಒಂದು ಸುವರ್ಣ ಅವಕಾಶವನ್ನು ಕೊಟ್ಟಿದ್ದಾರೆ ಇದು ಒಂದು ಉತ್ತಮವಾದ ಕೆಲಸ ಹಾಗಿದೆ ಇದನ್ನು ಬಳಸಿಕೊಂಡು ಯಶಸ್ವಿಗೊಳಿಸಿ ಎಂದು ತಿಳಿಸಿದರು
ಶಾಲೆಯ ಮುಖ್ಯ ಗುರುಗಳಾದ ಶ್ರೀಯುತ ಜಯರಾಮ ಇವರು ಮಾತನಾಡಿ ತರಬೇತಿಯು ತುಂಬಾ ಉತ್ತಮವಾಗಿದೆ ಇದನ್ನು ಬಳಸಿಕೊಂಡು ಯುವತಿಯರು ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಪ್ರಾರ್ಥನೆ:- ಕರಿಬಸಮ್ಮ
ಸ್ವಾಗತ :- ಕೆ.ಮಂಜುಳಾ
ನಿರೂಪಣೆ:-H. ಗೀತಾ
ವಂದನಾರ್ಪಣೆ :-ಆರ್ ಜೆ ಮಹಾದೇವಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ
ಗ್ರಾಮ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಶ್ರೀಯುತ ಶರಣಪ್ಪ , ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಯುತ ಉಮಾಪತಿ, ಮುಕ್ತ ಒಕ್ಕೂಟದ ಕಾರ್ಯದರ್ಶಿಗಳಾದ ಶ್ರೀಮತಿ ಅಡವೆಮ್ಮ, ಶಾಲೆಯ ಸಹಶಿಕ್ಷಕರಾದ ಶ್ರೀಯುತ ಕೊಟ್ರೇಶ, ಸ್ನೇಹ ಸಂಸ್ಥೆಯ ಸಿಬ್ಬಂದಿಗಳಾದ ಹೆಚ್.ಚಿನ್ನಪ್ರಮ್ಮ,
ಅಸ್ಲಾಂ, ಹಾಗೂ ತರಬೇತಿ ಪಡೆಯಲು ಆಯ್ಕೆಯಾದ ಒಟ್ಟು ಮಕ್ಕಳು 30 ಹಾಜರಾಗಿದ್ದರು..

ವರದಿಗಾರರು :- ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;