ಇಟ್ಟಿಗಿಯಲ್ಲಿ ರೋಜ್ ಗಾರ್ ದಿವಸ ಆಚರಣೆ.

ಇಟ್ಟಿಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದಿನಾಂಕ22/12/2022ರಂದು ಇಟ್ಟಿಗಿ ಗ್ರಾಮದ ಕುಂಚೂರು ಕೊಟ್ರೇಶಪ್ಪನ ಹೊಲದ ಚೆಕ್ ಡ್ಯಾಮ್ ಉತ್ತರ ಭಾಗದಲ್ಲಿ ಹೂಳೆತ್ತುವ ಕಾಮಗಾರಿಯ ಸ್ಥಳದಲ್ಲಿ ರೋಜಾಗಾರ್ ದಿವಸ್ ಆಚರಣೆಯನ್ನು 79 ವರ್ಷದ ಹಿರಿಯ ಕೂಲಿ ಕಾರ್ಮಿಕರಾದ ಡಿ. ಪರಮೇಶಪ್ಪ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಹೆಸರುಗಳಿಂದಾಗುವ ಸಮಸ್ಯೆ, ಮತ್ತು NMMS ಹಾಜರಾತಿ ಕುರಿತು ಕ್ಲರ್ಕ್ ಕಂ ಡಿ ಇ ಒ ರಾದ ಪ್ರಕಾಶ್ ರವರು ಮಾತಾಡಿದರು, ಬಿ ಎಫ್ ಟಿ ಕೊಟ್ರೇಶ್ ರವರು ಹೆಣ್ಣು ಮಕ್ಕಳಿಗೆ, ಗರ್ಭಿಣಿ ಹೆಣ್ಣು ಮಕ್ಕಳಿಗಿರುವ ಅಳತೆ ವಿನಾಯ್ತಿ ಬಗ್ಗೆ ಹೇಳಿದರು,ಜಿ ಕೆ ಎಂ ಶಾಂತಮ್ಮ ರವರು ಮಹಿಳೆಯರು ಅತೀ ಹೆಚ್ಚಿನ ಪ್ರಮಾಣದಲ್ಲಿ ಕೆಲ್ಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು ಎಲ್ಲಾ ಕಾಯಕ ಮಿತ್ರ ರು ಎಲ್ಲಾ ಕೂಲಿಕಾರ್ಮಿಕರು ಹಾಜರಿದ್ದರು…
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
