ಮೊರಾರ್ಜಿ ಶಾಲೆಗೆ ಲ್ಯಾಬ್ ಉಪಕರಣಗಳ ಕೊಡುಗೆ
ಬಳ್ಳಾರಿ,: ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯ ಭೈರದೇವನಹಳ್ಳಿ ಗ್ರಾಮದ ಮೊರಾರ್ಜಿ ಶಾಲೆಗೆ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಅವರು ರೂ.2ಲಕ್ಷ ಮೌಲ್ಯದ ವಿಜ್ಞಾನ ಪ್ರಯೋಗಾಲಯದ ಪರಿಕರಗಳನ್ನು ಶುಕ್ರವಾರ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನೀಡುವ ಶಾಲೆಯ ಪರಿಸರ ಮತ್ತು ವಿದ್ಯಾರ್ಥಿಗಳ ಕಲಿಕೆ, ಶೈಕ್ಷಣಿಕ ಪ್ರಗತಿಗೆ ನೀಡುವ ಸೇವೆ ತುಂಬಾ ಸಹಕಾರಿಯಾಗಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಕೀನಾ ಅವರು ಮಾತನಾಡಿ, ಸರ್ಕಾರದೊಂದಿಗೆ ಸಮಾಜವು ಕೈಜೋಡಿಸುವ ಮೂಲಕ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೊರಾರ್ಜಿ ಶಾಲೆಯ ಪ್ರಾಂಶುಪಾಲರಾದ ಅನುಸೂಯ, ಕೊಪ್ಪಳ ರಾಜ್ಯ ಲೆಕ್ಕಪರಿಶೋಧನಾಧಿಕಾರಿ ಕೃಷ್ಣಮೂರ್ತಿ, ಬಿಡಿ ಹಳ್ಳಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಾಂಶುಪಾಲ ಪ್ರಸಾದ್, ನಿಲಯಪಾಲಕ ರಾಮಕೋಟಿರಡ್ಡಿ ಸೇರಿದಂತೆ ಇತರರು ಇದ್ದರು…

ವರದಿ. ವಿರೇಶ್ ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
