17-12-2022 ರಂದು ಹಗರಿಬೊಮ್ಮನಹಳ್ಳಿ ಎನ್ ಸಿ ಪಿ ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ವತಿಯಿಂದ ತಾಲೂಕು ಕಚೇರಿ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ಜರುಗಿತು ಅಂದಾಜು ಎರಡು ಸಾವಿರಕ್ಕೂ ಹೆಚ್ಚು ಜನಸಾಗರವೇ ಸೇರಿತ್ತು. ಡೊಳ್ಳು ಕುಣಿತ ಮೂಲಕವೇ ಹಗರಿಬೊಮ್ಮನಹಳ್ಳಿಯ ಬಸವೇಶ್ವರ ವೃತ್ತದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆಯನ್ನು ಮಾಡುವ ಸಂದರ್ಭದಲ್ಲಿ ಎನ್ ಸಿ ಪಿ ರಾಜ್ಯದ್ಯಕ್ಷರು ಆರ್ ಹರೀಶ್, ಏನ್ ಸಿ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಟಿ ಮಂಜುನಾಥ್ ಸಮಾಜ ಸೇವಕರು ತರುಣ್ ಚೌಧರಿ ಹಗರಿಬೊಮ್ಮನಹಳ್ಳಿ ಎಂಸಿಪಿ ಎಂಎಲ್ಎ ಅಭ್ಯರ್ಥಿ ಪ್ರಸನ್ನ ಕೆ ಹಾಗೂ ಎನ್ ಸಿ ಪಿ ರಾಜ್ಯ ಉಪಾಧ್ಯಕ್ಷರು ಪ್ರದೀಪ್ ಇನ್ನು ಅನೇಕ ಗಣ್ಯರು ಉಪಸ್ಥಿತಿಯಲ್ಲಿದ್ದರು ಮೆರವಣಿಗೆ ಮೂಲಕ ಹಗರಿಬೊಮ್ಮನಹಳ್ಳಿಯ ಶಿವಯೋತಿನಗರದಲ್ಲಿರುವ ಕಚೇರಿಯನ್ನು ತಲುಪಿದರು. ಕಾರ್ಯಕರ್ತರನ್ನು ಉದ್ದೇಶಿಸಿ ರಾಜ್ಯಾಧ್ಯಕ್ಷರು ಆರ್ ಹರೀಶ್ ಹಗರಿಬೊಮ್ಮನಹಳ್ಳಿ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಅಭ್ಯರ್ಥಿಯಾದ ಕೆ ಪ್ರಸನ್ನ ಇವರನ್ನು ಬೆಂಬಲಿಸಿ ಆಶೀರ್ವದಿಸಿ ಜಯಭೇರಿಯನ್ನು ತಂದು ಕೊಡಬೇಕೆಂದು ಜನತೆಯಲ್ಲಿ ಮನವಿ ಮಾಡಿದರು ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಂಎಲ್ಎ ಅಭ್ಯರ್ಥಿ ಕೆ ಪ್ರಸನ್ನ ಅವರು ವೀಕ್ಷಿಸಿದ ಕೆಲವು ಹಳ್ಳಿಗಳ ಪರಿಸ್ಥಿತಿಗಳನ್ನು ನೆನಪಿಸಿಕೊಂಡರು ಹಾಗೂ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೊರತೆಗಳನ್ನು ಮನ ಗಂಡು ಈ ಕ್ಷೇತ್ರದ ಅಭಿವೃದ್ಧಿಗಾಗಿ ಮನೆ ಮಗನಂತೆ ದುಡಿಯುವುದಾಗಿ ದೃಢಸಂಕಲ್ಪ ಮಾಡಿದರು.ಈ ಜನಸಮುವನ್ನು ನೋಡಿ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ಜನತೆ ಹೊಸ ಅಭ್ಯರ್ಥಿಯ ಹುಡುಕಾಟದಲ್ಲಿ ಜನತೆಯ
ಕಾತುರತೆ ಎತ್ತಿ ತೋರುತ್ತಿತ್ತು ಬದಲಾವಣೆಯ ಗಾಳಿ ಎಲ್ಲೆಡೆ ಕಾಣುತ್ತಿತ್ತು ಹಾಗೂ ಟಿಕ್ ಟಿಕ್ ಗಡಿಯಾರ ಬರಲಿದೆ ಎನ್. ಸಿ.ಪಿ.ರಾಜ್ಯಾಧ್ಯಕ್ಷ ಕೆ.ಹರೀಶ್ ಹೇಳಿಕೆ.
ಹ.ಬೊ.ಹಳ್ಳಿ. ಪಟ್ಟಣದಲ್ಲಿ ನಡೆದ ಎನ್. ಸಿ .ಪಿ.ಪಕ್ಷದ, ವತಿಯಿಂದ, ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ಗೆ ಮಾಲೇಹಾಕಿ ನಂತರ ಮೆರವಣಿಗೆ ಮೂಲಕ ಶಿವಾಜ್ಯೊತಿ ನಗರದಲ್ಲಿ ಎನ್ ಸಿ.ಪಿ. ಯ ಪಕ್ಷದ ನೂತನ ಕಛೇರಿ ಉದ್ಘಾಟನೆ ಮಾಡಲಾಯಿತು. ಹಾಗೂ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ. ಹ.ಬೊ.ಹಳ್ಳಿ ವಿಧಾನ ಸಭೆ ಯ ನಿಯೋಜಿತ ಅಭ್ಯರ್ಥಿ ಯಾದ, ಕೆ ಪ್ರಸನ್ನ. ಈ ನಮ್ಮಪಕ್ಷ ಬಂದರೆ ಬಡವರ ಅಭಿವ್ರುದ್ದಿಗಾಗಿ,ಸಾರ್ವಜನಿಕರ ಕುಂದು ಕೊರೆತೆಗಳನ್ನು ನಿವಾರಿಸುತ್ತೇವೆ .ಈ ಕ್ಷೇತ್ರದಲ್ಲಿ ಆಗಬೇಕಾದಂತ ಕೆಲಸ ಅದು ಕುಡಿಯುವ ನೀರು, ಇರಬಹುದು, ರಸ್ತೆ ಆಗಿರಬಹುದು, ವಸತಿ ಹೀನರಿಗೆ ವಸತಿ ಕಲ್ಪಿಸಿಕೊಡಲಾಗುವುದು, ಕೆಲವು ಗ್ರಾಮಗಳಲ್ಲಿ ಶಿಕ್ಷಣದ ವ್ಯವಸ್ಥೆ ಸರಿಪಡಿಸುವುದು , ಮತ್ತು ಈಗಾಗಲೇ ನಾನು ಸುಮಾರು 50 ಹಳ್ಳಿಗೆ ಹೋಗಿ ವೀಕ್ಷಿಸಿದಾಗ ಅಲ್ಲಿನ ಸಾರ್ವಜನಿಕರ ಮೂಲಸೌಕರ್ಯಗಳ ಬಗ್ಗೆ ಸರಿಯಾದ ಮಾಹಿತಿ ತೆಗೆದು ಕೊಂಡಿದ್ದೇನೆ .ಸಾರ್ವಜನಿಕರಿಗೆ ನಮ್ಮ ಪಕ್ಷ ನಿಮ್ಮೆಲ್ಲರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದರೆ ಹಳ್ಳಿಗಳ ಸಮಸ್ಯೆಯನ್ನು ಬಗೆಹರಿಸಲು ಬದ್ಧನಾಗಿರುತ್ತೇನೆ. ನಮ್ಮ ಪಕ್ಷದ ಹೈಕಮಾಂಡಿನ ತೀರ್ಮಾನದಂತೆ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಸಲಹೆದಂತೆ ಅವರು ನಮ್ಮ ಬೆನ್ನ ಹಿಂದೆಯೇ ಇದ್ದು ನಿಮ್ಮ ಸಮಸ್ಯೆಗಳಿಗೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ಹಾಗೂ ಪ್ರತಿಯೊಂದು ಹಳ್ಳಿಹಳ್ಳಿ ಗೂ ಪಾದಯಾತ್ರೆ ಯನ್ನು ಕೈಗೊಳ್ಳಲಿದ್ದೇವೆ ಈಗಾಗಲೇ ನೀವು ಈ ಹಿಂದೆ ಇರುವ ಸರ್ಕಾರವನ್ನು ನೋಡಿದ್ದೀರಾ ಇನ್ನು ಮುಂದೆ ನೀವೆಲ್ಲ ಮತದಾರರು ನಮ್ಮ ಪಕ್ಷಕ್ಕೆ ಮತ ಹಾಕಿ ನಿಮ್ಮಗಳ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ ಎಂದರು.

ನಂತರ ಎನ್.ಸಿ.ಪಿ. ಯು ರಾಜ್ಯಾಧ್ಯಕ್ಷರಾದ, ಕೆ ಹರೀಶ್ ಮಾತನಾಡಿ, ಇವತ್ತು ಈಗಾಗಲೇ ಈ ಹಗರಿಬೊಮ್ಮನಹಳ್ಳಿಯ ವಿಧಾನಸಭಾ ಕ್ಷೇತ್ರದ “ನ್ಯಾಷನ ಲಿಸ್ಟ್ ಕಾಂಗ್ರೆಸ್ ಪಕ್ಷದ” ಅಭ್ಯರ್ಥಿಯಾದ, ಕೆ ಪ್ರಸನ್ನ ರವರು ಈ ತಾಲೂಕಿನಲ್ಲಿ ನಮ್ಮ ಪಕ್ಷದ ಕಚೇರಿಯ ಉದ್ಘಾಟನೆ ಮಾಡಿದ್ದಾರೆ, ಇದು ಒಳ್ಳೆಯ ಕೆಲಸ ಯಾಕೆಂದರೆ ಇವತ್ತು ಈ ಪಕ್ಷವು ಬೆಳಕಿಗೆ ಬರಬೇಕಾದರೆ, ನಮ್ಮ ರಾಷ್ಟ್ರೀಯ ನಾಯಕರು ಆದ ಶ್ರೀ ಶರತ್ ಪವರ್ ಈ ಪಕ್ಷವನ್ನು ಕಟ್ಟಿ ಬೆಳೆಸಿದಂತವರು ಈ ಪಕ್ಷ ಗಡಿಯಾರದ ಚಿನ್ಹೆ ಮೇಲೆ ಇವತ್ತು ಈ ಪಕ್ಷ ನಡೆಯುತ್ತಿದೆ.ಆ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಇತಿಹಾಸ ಇದೆಯೋ ಅಷ್ಟೇ ಇತಿಹಾಸ ಈ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ಇದೆ ಈಇತಿಹಾಸ , ಈ ನಮ್ಮ ಪಕ್ಷ ಕರ್ನಾಟಕದಲ್ಲಿರಲಿಲ್ಲ ಆದರೆ ಬೇರೆ ಎಲ್ಲ ರಾಜ್ಯಗಳಲ್ಲೂ ಇದೆ. ಆವತ್ತು ಶ್ರೀಮತಿ ಇಂದಿರಾ ಗಾಂಧಿಗೆ ತೊಡೆ ತಟ್ಟಿ ನಿಂತಿರುವಂತ ಪಕ್ಷ ಇದು ಇವತ್ತಿಗೂ ಮೊದಲನೆಯ ಬಾರಿ 2023ರ ಚುನಾವಣೆಗೆ ನ್ಯಾಷನ ಲಿಸ್ಟ್ ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಇದ್ದೇವೆ ಪ್ರತಿ ಕ್ಷೇತ್ರದಲ್ಲೂ ಈ ಬಾರಿ 30 ರಿಂದ40 , ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಹಾಗಾಗಿ ಇವತ್ತು ಮೂವತ್ತರಿಂದ 40 ವರ್ಷದವರೆಗೆ ರಾಜಕೀಯ ಮಾಡಿದವರಿದ್ದಾರೆ. ಇದುವರೆಗೂ ತಾಲೂಕುಗಳಲ್ಲಿ ಯಾವ ಅಭಿವೃದ್ಧಿಗಳು ಸಹ ಆಗಿರುವುದಿಲ್ಲ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಆಗಬೇಕಾಗಿತ್ತು ಆದರೆ ಹಿಂದುಳಿದ ಜನಾಂಗ, ಹಿಂದುಳಿದ ತಾಲೂಕು ಅಂತ ಹೇಳ್ತಿದ್ದಾರೆ. ನಿಜವಾಗಲೂ ಯಾವುದೇ ತಾಲೂಕುಗಳು ಹಿಂದುಳಿದ ತಾಲೂಕು ಅಲ್ಲ ಹಿಂದುಳಿದ ಜನಾಂಗ ಅಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ನಮ್ಮ ಪಕ್ಷ ಈ ಹ.ಬೊ. ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕೆ .ಪ್ರಸನ್ನ ಅವರನ್ನು ಕಣಕ್ಕಿಳಿಸಲಾಗಿದೆ ದಯವಿಟ್ಟು ಈ ಕ್ಷೇತ್ರದ ಮತ ಬಾಂಧವರು, ಇವರನ್ನು ಆಶೀರ್ವದಿಸಿ, ಜಯ ಶೀಲರನ್ನಾಗಿನ್ನಾಗಿ ಮಾಡಿ, ತಮ್ಮ ಸೇವೆಗೆ ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಲು ಅವಕಾಶ ಕೊಡಬೇಕು. ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ಹಣದ ಆಸೆಗೆ ಬೆಲೆಯಾಗಬೇಡಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ ಒಂದಿಲ್ಲ ಒಂದು ದಿನ ಈ ಕ್ಷೇತ್ರಕ್ಕೆ ಟಿಕ್ ಟಿಕ್ ಟಿಕ್ ಗಡಿಯಾರ ದ ಕಾಲ ಬಂದೇ ಬರುತ್ತದೆ. ಎಂದು ತಿಳಿಸಿದರು. ನಂತರ ಚಿಲಗೋಡು ಗ್ರಾಮದ ಯುವ ಕಾರ್ಯಕರ್ತರಿಂದ ರಾಜ್ಯಾಧ್ಯಕ್ಷರಿಗೆ ಹಾಗೂ ವಿಧಾನಸಭಾ ಅಭ್ಯರ್ಥಿ ಗೆ ಸನ್ಮಾನ ಮಾಡಲಾಯಿತು. ಈ ವೇಳೆಯಲ್ಲಿ ಶ್ರೀ ಪ್ರದೀಪ ಎನ್ ಸಿ .ಪಿ. ರಾಜ್ಯ ಉಪಾಧ್ಯಕ್ಷರು. ತರುಣ್ ಚೌದರಿ, ಆಕೃತಿ ಬಿಲ್ಡರ್ಸ್, ಶಿವಕುಮಾರ್ ಶಿಂದೆ, ನಗರ ಉಪಾಧ್ಯಕ್ಷರು ಎನ್.ಸಿ.ಪಿ. ತಾಲೂಕು ಅಧ್ಯಕ್ಷರಾದ ಮಂಜುನಾಥ ಹ.ಬೊ. ಹಳ್ಳಿ.ಯಲಬುರ್ಗಾ, ಮಂಜುನಾಥ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಸಿ.ಪಿ. ಕಿಶನ್ ,ಎನ್.ಸಿ.ಪಿ. ಮುಖಂಡರು. ಶಿವಕುಮಾರ್ ಎನ್ ಸಿ ಪಿ ಮುಖಂಡರು ಬೆಂಗಳೂರು. ವಕೀಲರಾದಂತ ಗಂಗಮ್ಮ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
