ಸಿಂಧನೂರು ಕಾರುಣ್ಯ ಸಂಸ್ಥೆಯಿಂದ ಮುಕ್ಕುಂದಾ ಪ್ರೌಢಶಾಲೆಯಲ್ಲಿ ಹಿರಿಯ ನಾಗರಿಕ ಸೇವಾ ತಿಳುವಳಿಕಾ ಅಭಿಯಾನ…
ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ವತಿಯಿಂದ ತಾಲೂಕಿನ ಮುಕ್ಕುಂದಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಸಹಯೋಗದಲ್ಲಿ ” ಹಿರಿಯ ನಾಗರಿಕ ಸೇವಾ ತಿಳುವಳಿಕಾ ಅಭಿಯಾನ ಅರಿವು ಮತ್ತು ನೆರವು ” ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ವೀರೇಶ ದಮ್ಮೂರು ಅವರನ್ನು ಕಾರುಣ್ಯ ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರುಣ್ಯ ಆಶ್ರಮಕ್ಕೆ ಸಹಾಯ ಮಾಡಿ ಮಾನವೀಯತೆ ಮೆರೆದರು ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ನಾವು ನಮ್ಮ ಕಾರುಣ್ಯ ಆಶ್ರಮದ ವತಿಯಿಂದ ಸುಮಾರು ಆರು ತಿಂಗಳಗಳಿಂದ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಹಿರಿಯ ನಾಗರಿಕರ ಸೇವೆಯ ಬಗ್ಗೆ ಮತ್ತು ಅವರನ್ನು ಕಡೆಗಣಿಸಿದಂತಹ ಸಂದರ್ಭದಲ್ಲಿ ಕಾನೂನಾತ್ಮಕ ಕಾಯ್ದೆಗಳನ್ನು ವಿವರಿಸುವುದರ ಮೂಲಕ ನಮ್ಮ ದೇಶದ ಸಂಸ್ಕೃತಿಯಲ್ಲಿ ವೃದ್ಧಾಶ್ರಮಗಳೆ ಇರಬಾರದು ಎನ್ನುವ ಸಂಕಲ್ಪವನ್ನು ಹೊಂದಿರುವ ನಮ್ಮ ದೇಶದಲ್ಲಿ ಇಂದಿನ ದಿನ ಇಂತಹ ಆಶ್ರಮಗಳು ಅನಿವಾರ್ಯತೆಗಾಗಿ ಹುಟ್ಟಿಕೊಂಡು ನಿಜವಾದ ಅನಾಥ ಜೀವಿಗಳಿಗೋಸ್ಕರ ಸೇವೆಗೈಯ್ಯುತ್ತೀವೆ ಈ ಕಾರುಣ್ಯ ಆಶ್ರಮದ ಸೇವೆ ನಿರಂತರ ಜೋಳಿಗೆಯಿಂದ ಸಾಗುತ್ತಿದೆ.

ತಾವುಗಳೆಲ್ಲ ತಮ್ಮ ಮನೆಯಲ್ಲಿರುವ ಹಿರಿಯ ವೃದ್ಧ ಜೀವಿಗಳು ಹಾಗೂ ತಮ್ಮ ತಂದೆ ತಾಯಿಗಳನ್ನು ಮುಂದಿನ ದಿನಮಾನಗಳಲ್ಲಿ ಪ್ರೀತಿ ಗೌರವ ವಿಶ್ವಾಸದಿಂದ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಮೂಲಕ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಹೊಳಿಯಪ್ಪ. ಸಹ ಶಿಕ್ಷಕರುಗಳಾದ ಮರ್ದಾನಲಿ.ಜಾವೇದ್ ಭಾಷಾ. ವಿಜಯಕುಮಾರ.ಪರಶುರಾಮಪ್ಪ. ಶಾನ್ ತುಮ್ಮಿನಕಟ್ಟಿ ವೆಂಕನಗೌಡ ಅಬ್ಬಾಸಲಿ. ಕಾರುಣ್ಯ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ ಕರಿಯಪ್ಪ ಹರ್ಷವರ್ಧನ. ಮತ್ತಿನ್ನೀತರರು ಭಾಗವಹಿಸಿದ್ದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
