;

ಹಂಪಾಸಾಗರ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕಾ ತೆಪ್ಪೋತ್ಸವ ಜಾತ್ರೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು…!!!

ವಿಜಯನಗರ ಜಿಲ್ಲಾ ಹಗರಿ ಬೊಮ್ಮನಹಳ್ಳಿ ತಾಲೂಕು ಹಂಪಾಸಾಗರ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕಾ ತೆಪ್ಪೋತ್ಸವ ಜಾತ್ರೆ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಾಧ್ಯಮದೊಂದಿಗೆ ಮಾತನಾಡಿದ ರಾಮಣ್ಣ ಬೀಡಿ ಕೊಟ್ರೇಶಪ್ಪನವರು ಹಬ್ಬದ ವೈಶಿಷ್ಟತೆ. ಈ ರೀತಿ ತಿಳಿಸಿದರು 1883 ರಲ್ಲಿ ಕಿತ್ತೂರ್ ರಾಣಿ ಚೆನ್ನಮ್ಮ ಆಸ್ಥಾನಕೆ ಮುತ್ತಿಗೆ ಹಾಕಿ ಸಾಮ್ರಾಜ್ಯದಲ್ಲಿದ್ದಂತ ಮುತ್ತು ರತ್ನ ಅವಳ ಬೆಳ್ಳಿ ಬಂಗಾರ ನಾ ಗ ನಾಣ್ಯಗಳನ್ನು ಒಂಟೆ ಕುದುರೆ ಆನೆಗಳ ಮೇಲೆ ಏರಿ ಸಾಗಿಸುತ್ತಿರುವುದು ಅಚಾನಕ್ಕಾಗಿ ಒಂದು ಕುದುರೆ ಒಂದು ಒಂಟೆ ಹಂಪಸಾಗರ ಗ್ರಾಮಕ್ಕೆ ಸರ್ರಾರ್ ಮನೆತನದವರ ಮನೆ ಮುಂದೆ ಬಂದು ನಿಂತಿರುತ್ತವೆ ಇದನ್ನು ಕಂಡ ಸರಾರು ಮನೆತನದವರು ಬೆಳ್ಳಿ ಬಂಗಾರ ನಾಣ್ಯಗಳನ್ನು ಇಳಿಸಿಕೊಂಡು ಒಂಟಿ ಆನೆಗಳನ್ನು ಓಡಿಸಿರುತ್ತಾರೆ ಈ ವಿಷಯ ಬ್ರಿಟಿಷ್ ಅಧಿಕಾರಿಗಳಿಗೆ ಗೊತ್ತಾಗಿ ಹಂಪಸಾಗರ ಗ್ರಾಮವನ್ನು ಮುತ್ತಿಗೆ ಹಾಕಲು ಬರುತ್ತಿರುತ್ತಾರೆ ಇದನ್ನು ಕಂಡ ಸರಾರು ಮನೆತನದವರು ಹೊಳೆಯ ಪಕ್ಕದಲ್ಲಿದ್ದ ಗಂಗಾಂಬಿಕ ದೇವಿಯನ್ನು ಈ ಕಷ್ಟದಿಂದ ಪಾರು ಮಾಡಮ್ಮ ಎಂದು ಬೇಡಿಕೊಂಡಿರುತ್ತಾರೆ ಪಾರು ಮಾಡಿದರೆ ವರ್ಷವೂ ಜಾತ್ರೆ ಮಾಡುವುದಾಗಿ ತಿಳಿಸಿರುತ್ತಾರೆ . ಬ್ರಿಟಿಷ್ ಸೈನ್ಯವು ಹಂಪಾಸಾಗರ ಗ್ರಾಮದ ಕಡೆಗೆ ಹೊಳೆಯನು ದಾಟುವಾಗ ಹೊಳೆಯು ಉಕ್ಕಿಯರೆದು ಬ್ರಿಟಿ ಸೈನ್ಯವು ಅಧಿಕಾರಿಗಳು ಕೊಚ್ಚಿ ಹೋಗಿರುತ್ತಾರೆ. ಇದನ್ನು ನೋಡಿದ ಸರ್ರಾರ್ ಮನೆತನದವರು. ಕಷ್ಟದಿಂದ ಪಾರು ಮಾಡಿದ ಗಂಗಾಂಬಿಕ ದೇವಿಯ ಜಾತ್ರೆಯನ್ನು ಪ್ರತಿ ವರ್ಷವೂ ನಡೆಸಿಕೊಂಡು ಬಂದಿರುತ್ತಾರೆ ಎಂದು ಗಂಗಾಂಬಿಕ ದೇವಿಯ ಪವಾಡದ ಬಗ್ಗೆ ಹಿರಿಯರಾದ ರಾಮಣ್ಣನವರು ಮಾಧ್ಯಮದವರಿಗೆ ತಿಳಿಸಿರುತ್ತಾರೆ. ಬಿಡಿ ಕೊಟ್ರೇಶಪ್ಪ ರಾಮಣ್ಣ ಮಂಜುನಾಥ್ ಹೊಳಗುಂದಿ ವೀರಭದ್ರಪ್ಪ ಬಡಿಗೇರ್ ಈರಣ್ಣ ಬಡಿಗೇರ್ ಕರಡಿ ನಾಗರಾಜ್ ಮತ್ತು ಯುವಕರಾದ ಕಿರಣ್ ಕುಮಾರ್ ಬಡಿಗೇರ್ ವೀರೇಶ್ ಬಡಿಗೇರ್ ಕಲ್ಲೇಶ್ ಬಡಿಗೇರ್ ಹಂಪಾಸಾಗರ ಯುವಕರ ಬಳಗ ಯುವಕರ ಮತ್ತು ಗಂಗಾಂಬಿಕ ದೇವಿ ಭಕ್ತಾದಿಗಳು ಊರಿನ ಗ್ರಾಮಸ್ಥರು ಭಾಗವಹಿಸಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;