ನೂತನ ಅಧ್ಯಕ್ಷರಿಗೆ ಕೆಪಿಸಿಸಿ ಸದಸ್ಯರಿಂದ ಸನ್ಮಾನ.. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೋಕಿಕೆರೆ ಶ್ರೀಮತಿ ದುರ್ಗಮ್ಮ ದುರ್ಗಪ್ಪ ಇವರ ಮನೆಗೆ ತೆರಳಿ ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ರವರು ಸನ್ಮಾನ ಮಾಡಿ ಅವರನ್ನು ಉದ್ದೇಶಿಸಿ ನೀವು ಲೋಕಿಕೆರೆ ಗ್ರಾಮದಿಂದ ಜುಮ್ಮುವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ ಮತ್ತು ಸಾಮಾನ್ಯ ಜನರ ಕುಂದು ಕೊರತೆ ಚರ್ಚಿಸಿ ಒಳ್ಳೆ ಒಳ್ಳೆ ಅಭಿವೃದ್ಧಿ ಕೆಲಸವನ್ನು ಮಾಡಿ ನಿಮ್ಮ ಹೆಸರು ಮತ್ತು ಗ್ರಾಮ ಪಂಚಾಯಿತಿ ಹೆಸರು ತರುವಂತೆ ಕೆಲಸ ಮಾಡುತ್ತಾ ಹೋಗಿ ಇಂದು ಮಾತನಾಡಿ ಮತ್ತು ಅಲ್ಲಿನ ಗ್ರಾಮದ ಜನರು ಹಾಗೂ ಮುಖಂಡರುಗಳನ್ನು ಭೇಟಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ ರವರು ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ರವರನ್ನು ಉದ್ದೇಶಿಸಿ ನೀವು ನಮ್ಮ ಮನೆಗೆ ಬಂದು ಶುಭ ಕೋರಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅರ್ಪಿಸಿ ಸನ್ಮಾನ ಮಾಡಿದರು ಈ ವೇಳೆ ಕೆಪಿಸಿಸಿ ಸದಸ್ಯರಾದ ಲೋಕೇಶ್ ವಿ ನಾಯಕ ಹಾಗೂ ಅವರ ಆಪ್ತ ಸಹಾಯಕರಾದ ಕಾಟ ಮಲ್ಲಿ ಕೊಟ್ರೇಶ್ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಮಂಜುನಾಥ್ ಹಾಗೂ ದಲಿತ ಕಾಲೋನಿಯ ಮುಖಂಡರು ಲೋಕಿಕೆರೆ ಗ್ರಾಮದ ಮುಖಂಡರು ಅಲ್ಲಿನ ವಾರ್ಡಿನ ಸದಸ್ಯರುಗಳು ಈ ಸಂದರ್ಭದಲ್ಲಿ ಇದ್ದರು .
ವರದಿ ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು, ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
