ಅ.3 ರಂದು ಕಾಂಗ್ರೆಸ್ ನಿಂದ ‘ನವ ಸಿಂಧನೂರು ನವ ಸಂಕಲ್ಪ ಯಾತ್ರೆ ‘- ಬಸನಗೌಡ ಬಾದರ್ಲಿ…!!!

ಅ.3 ರಂದು ಕಾಂಗ್ರೆಸ್ ನಿಂದ ‘ನವ ಸಿಂಧನೂರು ನವ ಸಂಕಲ್ಪ ಯಾತ್ರೆ ‘- ಬಸನಗೌಡ ಬಾದರ್ಲಿ.

ಸಿಂಧನೂರು . ಕಾಂಗ್ರೇಸ್ ಪಕ್ಷದ ವತಿಯಿಂದ ನಗರದ ಬಸ್ ನಿಲ್ದಾಣದ ಹತ್ತಿರ ಇರುವ ಅಂಬಾದೇವಿ ದೇವಸ್ಥಾನ ದಿಂದ ಸೋಮಲಾಪುರದ ಅಂಬಾಮಠದವರೆಗೆ ಅಕ್ಟೋಬರ್ 3 ವಿಜಯದಶಮಿ ದಿವಸದಂದು ಆರು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ‘ನವ ಸಿಂಧನೂರು ನವ ಸಂಕಲ್ಪ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಬಸನಗೌಡ ಬಾದರ್ಲಿ ತಿಳಿಸಿದರು.

ಅವರು ಇಂದು ನಗರದ ತಮ್ಮ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸದಾ ರೈತರ, ಬಡವರ, ದಿನದಲಿತ,ಮಹಿಳೆಯ, ಯುವಕರ, ಅಲ್ಪಸಂಖ್ಯಾತರ ಪರವಾಗಿ, ಹೋರಾಟ,ಹಾಗೂ ಪಾದಯಾತ್ರೆ ಮಾಡಿಕೊಂಡು ಬಂದಿದೆ. ಆದರೆ ತಾಲೂಕಿನ ಸಮಸ್ತ ಜನತೆಯ ಒಳಿತೆಗಾಗಿ ಅಕ್ಟೋಬರ್ 3 ರಂದು ವಿನೂತನವಾಗಿ ‘ ನವ ಸಿಂಧನೂರು ನವ ಸಂಕಲ್ಪ’ ಪಾದಯಾತ್ರೆಯನ್ನು ರೈತರು ಬೆಳೆದ ಬೆಳೆಗೆ ಬೆಂಬಲಬೆಲೆ, ಸಕಾಲ ವೇಳೆಯಲ್ಲಿ ಸಿಗಬೇಕಾದ ರಾಸಾಯನಿಕ ಗೊಬ್ಬರ, ಯುವಕರಿಗೆ ಉದ್ಯೋಗ, ಮಹಿಳೆಯರ ಸಿಗಬೇಕಾದ ಸೌಲಭ್ಯ , ಹಾಗೂ ಸಿಂಧನೂರನ್ನು ಜಿಲ್ಲೆಯನ್ನಾಗಿ ಮಾಡಲು ಒತ್ತಾಯ, ಇನ್ನಿತರ ಆರು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದು, ನಂತರದ ದಿನಗಳಲ್ಲಿ ಗ್ರಾಮಗಳಿಗೆ ತೆರಳಿ ಜನರ ಸಂಕಷ್ಟಗಳನ್ನು ಕೇಳಿ ಸ್ಪಂದಿಸುವ ಕೆಲಸ ಮಾಡುತ್ತೇವೆ.ಕಾಶ್ಮಿರದಿಂದ ಕನ್ಯಾಕುಮಾರಿ ವರೆಗೆ ಭಾರತ ಜೋಡೊಯಾತ್ರೆಯು ಅಕ್ಟೋಬರ 22 ರಂದು ರಾಯಚೂರು ಜಿಲ್ಲೆಗೆ ಆಗಮಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧೀಜಿ ಯವರೊಂದಿಗೆ ಹೆಜ್ಜೆ ಹಾಕುವ ಮೂಖಾಂತರ ದೇಶದ ಏಕತೆಯನ್ನು ಕಾಪಾಡೋಣ, ಈ ಒಂದು ಪಾದಯಾತ್ರೆಯಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೋಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್.ಟಿ. ತಾಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಘಲಪರ್ವಿ, ಶಿವುಕುಮಾರ ಜವಳಿ, ಶರಣಯ್ಯ ಸ್ವಾಮಿ ಕೋಟೆ , ಯೂನೂಷ ಪಾಷಾ ದಡೆಸುಗೂರು, ಪ್ರಭು ದೇವರಗುಡಿ,ಇನ್ನಿತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend