ಮನೆಗಳ್ಳರ ಬಂಧನ,ಚಿನ್ನ,ಬೆಳ್ಳಿ ಆಭರಣಗಳ ಸೇರಿ 8 ಲಕ್ಷ ವಶ.
ಸಿಂಧನೂರು.ಸ.21.ತಾಲೂಕಿನಲ್ಲಿ ಜುಲೈ16. 2022 ರಂದು ಬೆಳಗ್ಗೆ 09 ಗಂಟೆಯಿಂದ ಮದ್ಯಾಹ್ನ 01.00 ಗಂಟೆಯ ಮಧ್ಯಾನ್ಹದ ಅವಧಿಯಲ್ಲಿ ನಗರದ ರಾಮ ಕಿಶೋರ ಕಾಲೋನಿಯಲ್ಲಿ ಮಲ್ಲಪ್ಪ ತಂದೆ ಗೊಳಪ್ಪ, ಶಿಕ್ಷಕರು,ಸಾ.ಬಸಾಪುರ.ಕೆ ವಾಸವಾಗಿ ರುವ ಮನೆಯ ಬೀಗ ತೆಗೆದು ಮನೆಯ ಬೆಡ್ ರೂಮಿನ ಅಲಮಾರಿಯಲ್ಲಿದ್ದ ಒಟ್ಟು 130 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರಿನ ಅನ್ವಯ ಸಿಂದನೂರು ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 113/ 2022 ಕಲಂ 454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ದಿ. 20 ಅಗಸ್ಟ್ 2022 ರಿಂದ 24ರ ಮಧ್ಯದ ಅವಧಿಯಲ್ಲಿ ಮಲ್ಲಿನಾ ಶೇಷಗಿರಿರಾವ್ ತಂದೆ ವೆಂಕಟರಾಮಣ್ಣ, ವೆಂಕಟೇಶ್ವರ ಕ್ಯಾಂಪ್ ರವರ ಮನೆಯ ಬೀಗಾ ಮುರಿದು ಯಾರೋ ಕಳ್ಳರು 109 ಗ್ರಾಂ ಬಂಗಾರದ ಆಭರಣ, 2ಕೆಜಿ ಬೆಳ್ಳಿ ಅಭರಣ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರಿನ ಅನ್ವಯ ಸಿಂದನೂರು ನಗರ ಪೊಲೀಸ್ ಠಾಣೆಯ ಗುನ್ನೇ ನಂಬರ್ 159/ 2022 ಕಲಂ 457 454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿದ್ದು ಆರೋಪಿತರನ್ನು ಪತ್ತೆ ಮಾಡುವ ಕುರಿತು ನಿಖಿಲ್ ಬಿ, ಐಪಿಎಸ್,ಎಸ್.ಪಿ.ರಾಯಚೂರು ರವರು, ಆರ್ ಶಿವಕುಮಾರ ಹೆಚ್ಚುವರಿ ಎಸ್ಪಿ ರಾಯಚೂರು, ಮತ್ತು ವೆಂಕಟಪ್ಪ ನಾಯಕ ಡಿವಾಯ್ಎಸ್ಪಿ ರವರ ಮಾರ್ಗದರ್ಶನದಲ್ಲಿ ರವಿಕುಮಾರ ಎ,ಕಪ್ಪತ್ತನವರ ಸಿ.ಪಿ.ಐ,ರವರ ನೇತೃತ್ವದ ಎರಿಯಪ್ಪ ಪಿಎಸ್‌ಐ ಗ್ರಾಮೀಣ ಠಾಣೆ, ಸೌಮ್ಯ, ಪಿ.ಎಸ್.ಐ ನಗರ ಠಾಣೆ, ಬೆಟ್ಟಯ್ಯ,ಪಿ.ಎಸ್.ಐ (ತನಿಖೆ),ಸಿಂಧನೂರು ನಗರ ಠಾಣೆ ರವರನ್ನು ಮತ್ತು ಸಿಬ್ಬಂದಿಗಳಾದ ಆದಯ್ಯ
ಪಿಸಿ67 ಸಂಗನಗೌಡ ಪಿಸಿ 498, ದ್ಯಾಮಣ್ಣ ಪಿಸಿ 396, ಗೋಪಾಲ್ ಪಿಸಿ 679, ಅನಿಲ್ ಕುಮಾರ್ ಪಿಸಿ 447, ಚಂದ್ ಪಾಶ ಪಿಸಿ 686, ಶಿವಲಿಂಗಪ್ಪ ಪಿಸಿ 167, ಅಶೋಕ ಪಿಸಿ 442, ಪ್ರಕಾಶ ಪಿಸಿ 413, ಅಮರೇಶ ಹೆಚ್.ಸಿ 364, ತಾಂತ್ರಿಕ ಸಹಾಯಕ ರಾದ ಅಜಿಮ್ ಪಾಷಾ,ಪಿಹೆಚ್, ಚಾಲಕರಾದ ಸಂಗಮೇಶ ಎಪಿಸಿ 167 ರವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು,ಸದರಿ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಪ್ರಕರಣವನ್ನು ಗಂಭೀರವಾಗಿ, ಪರಿಗಣಿಸಿ ಕಾರ್ಯಾಚರಣೆ ನಡೆಸಿ ಆರೋಪಿತರಾದ ಅವಿನಾಶ್, ಅಭಿಷೇಕ್ ತಂದೆ ಮಾಣಿಕ್ ಶಾ, ಕೊಲ್ಲುಟುಗಿ, 21ವರ್ಷ ಲಿಂಗಾಯತ ಹೊಟೇಲ್ ಕೆಲಸ, ಅಂಜನೇಯ ದೇವಸ್ಥಾನದ ಹತ್ತಿರ, ಮೈಲೂರ್, ಬೀದರ್ ಈತನನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಸಿಂಧನೂರು ನಗರ ರಾಣಿ ಗುಂನ್ನೆ ನಂ 113/2022 ರಲ್ಲಿ 90ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೊತ್ತ 4 ಲಕ್ಷ 50 ಸಾವಿರ ರೂ.ಗಳು ಮತ್ತು ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ:159/2022. 68 ಗ್ರಾಂ ಬಂಗಾರದ ಆಭರಣ 650 ಗ್ರಾಂ ಬೆಳ್ಳಿ ಆಭರಣ ಅಂದಾಜು ಮೊತ್ತ 3 ಲಕ್ಷ 50ಸಾವಿರ ರೂ.ಗಳನ್ನು ಹೀಗೆ ಒಟ್ಟು 08 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ, ಆಭರಣಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಆರೋಪಿತರು ವಿಚಾರಣೆಯ ಕಾಲಕ್ಕೆ ಕಳ್ಳತನ ಮಾಡಿರುವ ಬಗ್ಗೆ ತಪ್ಪು ಒಪ್ಪಿಕೊಂಡಿರುತ್ತಾರೆ, ಸದ್ಯ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೊಡಲಾಗಿದೆ.
ಆರೋಪಿತರನ್ನು ಪತ್ತೆ ಮಾಡಿದ ತಂಡದ ಕಾರ್ಯವನ್ನು ನಿಖಿಲ್ ಬಿ ಐಪಿಎಸ್, ಎಸ್.ಪಿ. ರಾಯಚೂರು ರವರು ಶ್ಲಾಘನೀಯ ಎಂದು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
