ವಿಷ್ಣುವರ್ಧನ’ ಹೃದಯವಂತ ಗೆಳೆಯರ ನಿಸ್ವಾರ್ಥ ಕಾರ್ಯ ಶ್ಲ್ಯಾಘನೀಯ: ನದಾಫ್…!!!

‘ವಿಷ್ಣುವರ್ಧನ’ ಹೃದಯವಂತ ಗೆಳೆಯರ ನಿಸ್ವಾರ್ಥ ಕಾರ್ಯ ಶ್ಲ್ಯಾಘನೀಯ: ನದಾಫ್

ಅಫಜಲಪುರ:ಸಂಪತ್ತು ಅನೇಕರ ಹತ್ತಿರ ಇದೆ. ಆದರೆ ದಾನ ಮಾಡುವ ಗುಣ ಕೆಲವರಲ್ಲಿ ಇದೆ. 30 ಜನ ಯುವಕರು ಅಪರೂಪದ ಗೆಳೆಯರು. ಸಮಾನತೆ ಮತ್ತು ಸಾಮೂಹಿಕ ನಾಯಕತ್ವ ಇವರ ಗುಟ್ಟು. ಸೇವೆ ಮಾಡುವ ಹೃದಯವಂತ ಗೆಳೆಯರ ಬಳಗ. ಪ್ರತಿಫಲಾಪೇಕ್ಷೆ ಇಲ್ಲ. ಒಳ್ಳೆಯ ಸಂಸ್ಕಾರ ಇವರ ಬಳುವಳಿ. ಬಣ್ಣದ ಲೋಕ ನೋಡದ ಈ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿ ಕೊಳ್ಳಬೇಕು. ಅದಕ್ಕಾಗಿ ಈ ಬಳಗ ಮತ್ತು ನಾವು ನಿಮ್ಮ ಜೋತೆಗೆ ನಾವು ಇದ್ದೇವೆ ಎಂದು ಸಾಹಿತಿ ಹಾಗೂ ಹಿರಿಯ ಶಿಕ್ಷಕರಾದ ಅಬ್ಬಾಸಲಿ ನದಾಫ್ ಹೇಳಿದರು.

ಅಫಜಲಪುರದ ನಟ ಡಾ/ವಿಷ್ಣುವರ್ಧನ ಅವರ ಅಭಿಮಾನಿಗಳು ಹಾಗೂ ಗೆಳೆಯರಾದ 30 ಜನ ಹೃದಯವಂತ ಗೆಳೆಯರ ಬಳಗ ವಿಷ್ಣುವರ್ಧನರ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ ಮಾಡಿ ಮಾತನಾಡಿದ ಅವರು ಹೃದಯವಂತರು ಎಂಬ ವಾಟ್ಸಪ್ ಗ್ರೂಪ್ ನಿಂದ ಆರಂಭಗೊಂಡ ಡಾ. ವಿಷ್ಣುವರ್ಧನ್ ಅವರ ಅಭಿಮಾನಿಗಳ ಹೆಜ್ಜೆ ಇಂದಿಗೆ 6 ವರ್ಷ ಪೂರ್ಣಗೊಂಡಿದೆ.. ಮೊದಲಿಗೆ 7 ಜನರಿಂದ ಆರಂಭಗೊಂಡ ಈ ಗ್ರೂಪ್ ಇಂದಿಗೆ 27 ಜನರದ್ದಾಗಿದೆ. ಈ ಗ್ರೂಪಿನಲ್ಲಿ ಸರಕಾರಿ ನೌಕರಿ ಹೊಂದಿದವರಿದ್ದಾರೆ, ಖಾಸಗೀ ನೌಕರಿ ಮಾಡುವವರಿದ್ದಾರೆ, ಸ್ವಂತ ಉದ್ಯೋಗ ಮಾಡುವವರಿದ್ದಾರೆ, ಟ್ಯಾಕ್ಟರ್ ಡ್ರೈವರ್, ಆಟೋ ಡ್ರೈವರ್, ಮಾಜಿ ಸೈನಿಕರು, ಬಿಎ ಎಂಎಸ್ ಡಾಕ್ಟರ್, ಸೆಂಟ್ರಿಂಗ್ ಕೆಲಸ ಮಾಡುವವರು, ಟೇಲರ್ ಕೆಲಸ ಮಾಡುವವರು, ಎಲ್ಲರನ್ನ ಒಳಗೊಂಡ ಒಂದು ಗ್ರೂಪ್ ಆಗಿದೆ ಎಂದು ತಿಳಿಸಿದರು.

ವಾಟ್ಸಪ್ ಗ್ರೂಪ್ ಮಾಡಿ ಸುಮ್ಮನೆ ಚಾಟಿಂಗ್ ಮಾಡುವುದಕ್ಕಿಂತ ಸಮಾಜದಲ್ಲಿ ಬಹಳ ಅಸಹಾಯಕರಿದ್ದಾರೆ. ಅವರಿಗೆ ನಮ್ಮ ಕೈಲಾದ ಸಹಾಯ ಮಾಡೋಣ ಎಂದು ಎಲ್ಲರೂ ನಿರ್ಧರಿಸಿ. 18-09-2017 ರಂದು ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ಬಳಗದ ಜನ ಸೇವಾ ಕಾರ್ಯಗಳು:

ಅಂದ ಮಕ್ಕಳ ವಸತಿ ನಿಲಯದಲ್ಲಿ ಅಂದ ಮಕ್ಕಳ ಕೈಯಿಂದ ಕೇಕ್ ಕತ್ತರಿಸುವ ಮೂಲಕ ವಿಷ್ಣುವರ್ಧನ್ ಸರ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಅಂಧ ಮಕ್ಕಳಿಗೆ ನಡೆದಾಡಲು ಸ್ಟಿಕ್ ವಿತರಿಸಲಾಯಿತು. ಮುದ್ದು ಮಕ್ಕಳಿಗೆ ಸಿಹಿಯ ಜೊತೆಗೆ ವಿಶೇಷ ಭೋಜನ ವ್ಯವಸ್ಥೆಯು ಮಾಡಿಸಲಾಗಿತ್ತು. ಇದೆ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಂಡು ರಕ್ತದಾನ ಮಾಡಲಾಯಿತು. ಹೃದಯವಂತರು ಅಭ್ಯಾಸ ಕೇಂದ್ರ( ಟ್ಯೂಶನ್ ಕ್ಲಾಸಸ್ ಆರಂಭಿಸಲಾಗಿದೆ. ಅಂಧ ಮಕ್ಕಳಿಗೆ ಸ್ಟಿಕ್ ವಿತರಣೆ ಹಾಗೂ ವಿಶೇಷ ಭೋಜನ ಮಾಡಿಸಲಾಯಿತು. ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡು ತಪಾಸಣೆ ಮಾಡಲಾಯಿತು. ಅಂಧ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ವಿಶೇಷ ಬೋಧನೆ ನೀಡಲಾಯಿತು. ಇದೆ ಸಂದರ್ಭದಲ್ಲಿ ವಿಷ್ಣುವರ್ಧನ ಹುಟ್ಟುಹಬ್ಬದ ನೆನಪಿಗಾಗಿ 100 ಸಸಿ ನೆಡಲಾಯಿತು. ಕಲಬುರ್ಗಿಯ ಅನಾಥಾಲಯದ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ನಿರಾಶ್ರಿತ ಬಡ ವೃದ್ಧ ಕುಟುಂಬಗಳಿಗೆ ದವಸ ಧಾನ್ಯ ವಿತರಣೆ ಮಾಡಲಾಯಿತು. ಜೀವಮಾನ ಸೇವೆಗೆದ ನಿವೃತ್ತ ಶಿಕ್ಷಕರು, ಯೋಧರಿಗೆ ಹಾಗೂ ವೈದ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಕೋವಿಡ್ ವಾರಿಯರ್ಸ್ ಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವೃದ್ಧರಿಗೆ ನಡೆದಾಡಲು ಸ್ಟಿಕ್ ವಿತರಣೆ ಮಾಡಲಾಯಿತು. ಬಡ ನಿರಾಶ್ರಿತರಿಗೆ ದವಸ ಧಾನ್ಯ ವಿತರಣೆ ಮಾಡಲಾಯಿತು. ಅಂಧ ಮಕ್ಕಳ ವಸತಿ ನಿಲಯಕ್ಕೆ ವಾಟರ್ ಪ್ಯೂರಿಫೈಯರ್ ಕಾಣಿಕೆಯಾಗಿ ನೀಡುವುದರ ಜೊತೆಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಕಲಬುರ್ಗಿ ಜಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸಲಾಯಿತು. ಅಂಧ ಮಕ್ಕಳು ವಸತಿ ನಿಲಯಕ್ಕೆ ಫ್ರಿಡ್ಜ್ ಕಾಣಿಕೆಯಾಗಿ ನೀಡಲಾಯಿತು. ಹಾಗೂ ಹೃದಯವಂತರ ಗ್ರೂಪನ್ನು “ಹೃದಯವಂತ ಗೆಳೆಯರ ಬಳಗ” ಎಂಬ ಸಂಘವಾಗಿ ನೋಂದಾಯಿಸಿದ ಪ್ರತಿಗಳನ್ನು ಇದೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಅಬ್ಬಾಸಲಿ ನದಾಫ್ ಸರ್ ಅವರ ಕೈಯಿಂದ ಅನಾವರಣಗೊಳಿಸಲಾಯಿತು. ಹಾಗೂ ಮುದ್ದು ಮಕ್ಕಳಿಗೆ ವಿಶೇಷ ಭೋಜನ ಮಾಡಿಸಲಾಯಿತು. ಕಲಬುರ್ಗಿ ಬೀದಿ ಬದಿ ಮಲಗು ನಿರಾಶ್ರಿತರಿಗೆ ಹಾಸಿಗೆ ಹೊದಿಕೆಯನ್ನು ವಿತರಿಸಲಾಯಿತು. ಜನಸ್ನೇಹಿ ನಿರಾಶ್ರಿತರ ಆಶ್ರಮದ ರೋಗಿಗಳಿಗೆ ಔಷಧಿ ಖರೀದಿಸಲು 11,000 ರೂಪಾಯಿಗಳ ಧನ ಸಹಾಯ ಮಾಡಲಾಯಿತು. 11 ಬಡ ಕುಟುಂಬಗಳಿಗೆ ಮೂರು ತಿಂಗಳವರೆಗೆ ಆಗುವಷ್ಟು ದವಸ ಧಾನ್ಯಗಳನ್ನು ವಿತರಿಸಲಾಯಿತು. ಕಲಬುರ್ಗಿಯ ಉದ್ದಾಶ್ರಮದ ವೃದ್ಧ ತಂದೆ ತಾಯಂದಿರ ಕೈಯಿಂದ ಕೈಯಿಂದ ಕೇಕ್ ಕತ್ತರಿಸುವ ಮೂಲಕ ವಿಷ್ಣುವರ್ಧನ್ ಸರ್ ಅವರ ಹುಟ್ಟುಹಬ್ಬ ಆಚರಿಸಲಾಯಿತು. ಜೊತೆಗೆ ಈ ವೃದ್ಧಾಶ್ರಮಕ್ಕೆ 16000 ರೂಪಾಯಿ ದವಸ ಧಾನ್ಯಗಳನ್ನು ಕಾಣಿಕೆಯಾಗಿ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಡಾ. ಮತೀನ ಅಹಮದ್, ಮುಖ್ಯ ಅತಿಥಿ ಸ್ಥಾನವನ್ನು ಅಬ್ಬಾಸಲಿ ನದಾಫ್ ವಹಿಸಿದ್ದರು. ವಸತಿ ನಿಲಯದ ಮೇಲ್ವಿಚಾರಕಿ ಬನಶಂಕರಿ, ಶಾಲಾ ಸಹ ಶಿಕ್ಷಕಿ ಪದ್ಮಾವತಿ ವೇದಿಕೆಯನ್ನು ಅಲಂಕರಿಸಿದ್ದರು. ಗೆಳೆಯರಾದ ಅಸ್ಲಾಂ, ಸೋಂದು, ಜಟ್ಟಿಂಗರಾಯ, ಹಿರಗಪ್ಪ, ನಾಗರಾಜ, ಜಗನ್ನಾಥ, ಸೋಮಣ್ಣ, ಮಹೇಶ, ದಾನೇಶ, ಚಂದ್ರಕಾಂತ, ನಾಗೇಶ, ಕೀರ್ತಿ ಕುಮಾರ್, ಖಂಡೋಬ, ಸುನಿಲ್, ಸಂತು, ಭಾಗಣ್ಣ, ದತ್ತು, ರವಿಚಂದ್ರ, ಮಹಾಂತೇಶ, ವಸಿಂ, ಶ್ರೀಧರ ಉಪಸ್ಥಿತರಿದ್ದರು…

ವರದಿ.ಬಸಯ್ಯ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend