ಬ್ರಿಟನ್ ರಾಣಿ 2ನೇ ಎಲಿಜಬೇತ್ ಗೌರವಾರ್ಥ ಶೋಕಾಚಾರಣೆ ಇದೆ ದಿನಾಂಕ 11/09/2022 ರಂದು ಭಾರತದ್ಯಾದಂತ ಶೋಕಾಚಾರಣೆ ನಡೆಯಲಿದೆ ಎಂದು ಕೇಂದ್ರ ಸರಕಾರ ಶುಕ್ರವಾರದಿವಸ ಘೋಷಿಸಿದೆ. ಈ ಅವಧಿಯಲ್ಲಿ ಅಂದರೆ 11ರಂದು ದೇಶಾದಾದ್ಯಂತ ರಾಷ್ಟ್ರ ದ್ವಜ ಅರ್ಧಕ್ಕೆ ಇಳಿಸಲಾಗುವುದು. ಯಾವುದೇ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಪ್ರಜಾವಾಣಿ ಪತ್ರಿಕೆ ಅಧಿಕೃತ ಹೇಳಿಕೆ ವರದಿ ಪ್ರಕಟಿಸಿಲ್ಪಟಿದೆ.

ಆದರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಕಪ್ಪಲಗುದ್ದಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಇಂದು ಇಡೀ ದೇಶದ ತುಂಬೆಲ್ಲ ಶೋಕಾಚಾರಣೆ ನಿಮಿತ್ಯ ರಾಷ್ಟ್ರ ದ್ವಜ ಅರ್ಧ ಮಟ್ಟಿಗೆ ಹಾರಿಸಿ ರಾಣಿ 2ನೇ ಎಲಿಜಬೇತರವರ ಗೌರವಾರ್ಥ ರಾಷ್ಟ್ರ ದ್ವಜ ಹಾರಿಸಬೇಕಾದ ಗ್ರಾಮ ಪಂಚಾಯತ್ ದಿನಾಂಕ 11/09/2022 ರಂದು ಪೂರ್ತಿಯಾಗಿ ರಾಷ್ಟ್ರದ್ವಜ ಹಾರಿಸಿ ಅಗೌರವ ತೋರಿಸಿದೆ. ಇದರ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಫೋನ್ ಕರೆ ಮೂಲಕ ಮಾಹಿತಿಗಾಗಿ ವಿಚಾರಿಸಿದರೆ ಉಡಾಪೆ ಉತ್ತರ ನೀಡಿದ ಅಧಿಕಾರಿ.ಅಂದರೆ ನೀವು ನಮಗೆ ಬ್ಲಾಕ್ ಮೆಲ್ ಮಾಡಲು ಕರೆಮಾಡಿರುವಿರಾ ಎನ್ನುವ ಉದ್ದಟತನದ ಮೇಲುಧ್ವನಿಯಲ್ಲಿ ಸಂಬಂಧಪಟ್ಟ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡುವುದು ಎಷ್ಟು ಸರಿ,

ಯಾಕೆ ಗ್ರಾಮಪಂಚಾಯಿತಿ ಕಚೇರಿ ಯಾರಪ್ಪನ ಆಸ್ತಿ? ಇದರ ಬಗ್ಗೆ ಮತ್ತು ನಮ್ಮ ರಾಷ್ಟ್ರ ಧ್ವಜದ ಬಗ್ಗೆ ಸಾರ್ವಜನಿಕರಾಗಲಿ ಅಥವಾ ಒಬ್ಬ ಪತ್ರಿಕಾ ಮಾಧ್ಯಮದ ವರದಿಗಾರರು ಹಾಗೂ ಡಿಎಸ್ಎಸ್, ಸಂಘಟನೆಯ ಜವಾಬ್ದಾರಿಯುತ ಹೋರಾಟಗಾರರು ಕೇಳಿದರೆ ಇದು ಬ್ಲಾಕ್ ಮೆಲ್, ಮಾತ ನಿವೇ ಹೇಳಿ ಈ ಒಬ್ಬ ಬೇಜವಾಬ್ದಾರಿ ಯುತ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಲಂಗು ಲಗಾಮು ಹಾಕಲು ಸರ್ಕಾರಕ್ಕೆ ಜವಾಬ್ದಾರಿ ಇಲ್ವಾ ನಿವೇ ಉತ್ತರ ಕೊಡಿ..
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
