ಕಾನಿಹಾಳ ಗ್ರಾಮದಲ್ಲಿ ಅಭಿನಂದನ್ ಸಂಸ್ಥೆಯಿಂದ ಸಂಡೆ ಫಾರ್ ಸೋಶಿಯಲ್ ವರ್ಕ್.
ಸಿಂಧನೂರು : ಸ.11.ಅಭಿನಂದನ್ ಸಂಸ್ಥೆಯ 62ನೇ ಸಂಡೇ ಫಾರ್ ಸೋಶಿಯಲ್ ಸೇವಾ ಕಾರ್ಯವನ್ನು ತಾಲೂಕಿನ ಕಾನಿಹಾಳ ಗ್ರಾಮದಲ್ಲಿ ಇರುವಂತಹ ಅಂಗನವಾಡಿ ಕೇಂದ್ರವನ್ನು ಸ್ವಚ್ಛ ಗೊಳಿಸಿ ಮಕ್ಕಳಿಗೆ ಕುಳಿತಕೊಳ್ಳಲು ಆಸನಗಳನ್ನು ಹಾಕಲಾಯಿತು.
ಉಪೇಂದ್ರ ಅಭಿಮಾನಿ ಬಳಗದ ಮುಖ್ಯಸ್ಥರಾದ ಶರಣಬಸವ ಕುರ್ಲಿ ಮಾತನಾಡಿ ಯಶಸ್ವಿಯಾಗಿ 62ನೇ ಸಂಡೇ ಫಾರ್ ಸೋಶಿಯಲ್ ವರ್ಕ್ ಅಭಿಯಾನದ ಸೇವಾ ಕಾರ್ಯವನ್ನು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸಿ ಮುಂದೆ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಗ್ರಾಮದ ನಾಗರಿಕರಿಗೆ ತಿಳುವಳಿಕೆ ಮೂಡಿಸಿ ನಮ್ಮೂರಿಗೆ ಹೊಸ ಮೆರುಗನ್ನು ನೀಡಿರುವ ಅಭಿನಂದನ್ ಸಂಸ್ಥೆಗೆ ಊರಿನ ಹಿರಿಯರ ಪರವಾಗಿ ಧನ್ಯವಾದ ಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಗೌರಮ್ಮ ಮಲ್ಲಯ್ಯ ಮುರುಡಿ, ರಾಜೇಶ್, ಹನುಮೇಶ್, ಕರಿಯಪ್ಪ, ಹನುಮಪ್ಪ ತಳವಾರ್, ಅಯ್ಯನಗೌಡ, ಅಮರೇಶ್, ಭೀಮೇಶ್, ಹುಲುಗಪ್ಪ, ಯುವಕರು ಹಾಗೂ ಲಯನ್ಸ್ ಕ್ಲಬ್ ಶಾಲೆಯ ಮುಖ್ಯ ಗುರುಗಳಾದ ದೊಡ್ಡಪ್ಪ ಗಬ್ಬೂರ, ಅಭಿನಂದನ್ ಸಂಸ್ಥೆಯ ಸಂಸ್ಥಾಪಕರಾದ ರಾಮಣ್ಣ ಹಂಪರ ಗುಂದಿ, ಪದಾಧಿಕಾರಿಗಳಾದ ಜಾಫರಮಿಯಾ ಮಲ್ಲಿಕಾರ್ಜುನ್ ಬಡಿಗೇರ, ರವಿಚಂದ್ರ ಸುಂಕನೂರ, ಹನುಮೇಶ, ಬಸಲಿಂಗಪ್ಪ ಬಾದರ್ಲಿ, ದುರ್ಗೇಶ, ಕಿಶೋರ ಹಾಗೂ ಅಭಿನಂದನ್ ಸ್ಪೂರ್ತಿಧಾಮದ ಮಕ್ಕಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
