ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ!! ಕೂಡ್ಲಿಗಿ:- ಬಿ.ರಾಧಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವೆಂಕಟಗಿರಿ. ಸಂಡೂರು ( ತಾಲೂಕು)ಈ ಶಾಲೆಯ ಶಿಕ್ಷಕಿಗೆ ಇವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.

ಪ್ರಸ್ತುತ ಇವರು ಈಗಿನ ಹೊಸ ಜಿಲ್ಲೆ ವಿಜಯನಗರ ಕೂಡ್ಲಿಗಿ ಪಟ್ಟಣದ ಬಿ .ಜಯಮ್ಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಇವರ ಮಗಳಾದ ಬಿ.ರಾಧಮ್ಮ 2004 ಫೆಬ್ರವರಿ 24ರಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಡಿ.ಪಿ.ಇ.ಪಿ ಶಾಲೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸುವ ಮೂಲಕ ಸುಮಾರು ಹತ್ತು ವರ್ಷ ನಾಲ್ಕು ತಿಂಗಳು ತಮ್ಮ ವೃತ್ತಿ ಜೀವನ ಸಲ್ಲಿಸಿ, ನಂತರ ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ನಂತರ ಅಲ್ಲಿ ಎಂಟು ವರ್ಷ ಎರಡು ತಿಂಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಈ ಬಾರಿ ಇವರಿಗೆ 2021 22 ನೇ ಸಾಲಿನ ಬಳ್ಳಾರಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿಯು ಒಲಿದು ಬಂದಿರುವುದಕ್ಕೆ ಕೂಡ್ಲಿಗಿಯ ಬಿ.ಕೆ. ಜಯಮ್ಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಮಕ್ಕಳು ಹಾಗೂ ಹಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಬಿ.ಕೆ .ಸರಸ್ವತಿ ರಾಘವೇಂದ್ರ ಇವರು ಹರ್ಷ ವ್ಯಕ್ತಪಡಿಸಿದ್ದಾರೆ..

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
