ಗಡಿ ಗ್ರಾಮವಾದ ಹಿರೇಕುಂಬಳಗುಂಟೆ ರಸ್ತೆಯಲ್ಲಿ ಅಲ್ಲದಂತೆ ನೀರು, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾದ ಹಿರೇಕುಂಬಳಗುಂಟೆ ಗ್ರಾಮದಿಂದ ದೊಡ್ಡಬೊಮ್ಮನಹಳ್ಳಿ ಜಗಳೂರು ಹೋಗುವ ರಸ್ತೆಯಲ್ಲಿ ನೀರು ನಿಂತಿರುವುದು ಜನರು ಓಡಾಡಲು ಬಹಳ ತೊಂದರೆಯಾಗಿದ್ದು ಗ್ರಾಮ ಪಂಚಾಯಿತಿ ಕಾರ್ಯಾಲಯ ಹಿರೇಕುಂಬಳಗುಂಟೆ ಮೆಂಬರ್ ಗಳು ಇತ್ತ ಗಮನಹರಿಸಿ ಇದಕ್ಕೊಂದು ಪರಿಹಾರ ಯೋಚಿಸಬೇಕಾಗಿದೆ ಎಂದು ಅಕ್ಕಪಕ್ಕದ ಹೊಲಗಳ ಮಾಲೀಕರು ಬೇಸರದ ಸಂಗತಿ ವ್ಯಕ್ತ ಪಡಿಸಿದರು.

ಈ ರಸ್ತೆಯನ್ನು ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮವಾದ ಆದ್ದರಿಂದ ಯಾರು ಇತ್ತ ಗಮನ ಹರಿಸದಂತೆ ಆಗಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಈ ರಸ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯನ್ನು ಸರಿಪಡಿಸಬೇಕೆಂದು ನಮ್ಮ ವರದಿಗಾರರೊಂದಿಗೆ ಮಾತನಾಡಿದರು ಈ ಸಂದರ್ಭದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಹಿರೇಕುಂಬಳಗುಂಟೆ ಮನೋಜ್ ಕುಮಾರ್. ಆಗ್ರಹಿಸಿದರು ಸ್ಥಳೀಯರಾದ ನಿವೃತ್ತಿ ಶಿಕ್ಷಕರು ವೀರಪ್ಪ ಹಾಗೂ ಅಲ್ಲಾಭಕ್ಷಿ ಮಂಜು ಗಣೇಶ್ ಬಾಬು ಸಿ ಸುರೇಶ್ ಶ್ರೀನಿವಾಸ್ ಇದ್ದರು.
ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
