ಹಜ್ ಯಾತ್ರೆಗೆ ಪ್ರಯಾಣ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ಶುಭಾ ಹಾರೈಸಿದ ಶಾಸಕರು.
ಸಿಂಧನೂರು :ಅ.31.ಇಂದು ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಮುಸ್ಲಿಂ ಬಾಂಧವರು ಹಜ್ ಯಾತ್ರೆಗೆ ಸುಮಾರು 46 ಜನ ಸಿಂಧನೂರು ನಿಂದ ಹೈದ್ರಾಬಾದ್ ಗೆ ಬಸ್ಸಿನಿಂದ ತಲುಪಿ ಅಲ್ಲಿಂದ ವಿಮಾನದ ಮೂಲಕ ಹಜ್ ಗೆ ಪ್ರಯಾಣ ಮಾಡುತ್ತಿರುವ ಮುಸ್ಲಿಂ ಬಾಂಧವರಿಗೆ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ,ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ, ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ
ಅವರು ಶುಭಾ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ನಿಮ್ಮ ಈ ಪ್ರಯಾಣ ಸುಖಕರವಾಗಿರಲಿ ಅಲ್ಲಾ ನಿಮಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಿ. ಆ ಪವಿತ್ರ ಸ್ಥಳದಲ್ಲಿ ಸಲ್ಲಿಸಿದ ನಿಮ್ಮ ಪ್ರಾಥನೆ ಈಡೇರಲಿ.
ಮನಸಿನಲ್ಲಿ ಅಲ್ಲಾನನ್ನು ನೆನಪಿಸಿಕೊಂಡರೆ ನಿಮ್ಮ ಪ್ರಾಥನೆಯನ್ನು ಈಡೇರಿಸುತ್ತಾನೆ.ಮನುಷ್ಯ ವಿಶ್ವಾಸದಿಂದ ಮಾಡುವ ಎಲ್ಲಾ ಪ್ರಾರ್ಥನೆ ಅಲ್ಲಾಗೆ ಸಲ್ಲುತ್ತದೆ ಎಂದರು.
ವಿಶ್ವಾಸ ಇಲ್ಲದೆ ಮಾಡುವ ಪ್ರಾರ್ಥನೆ ಅರ್ಥವಿಲ್ಲದಂತದ್ದು, ಆ ಒಂದು ಪ್ರಾಥನೆಯನ್ನು ವಿಶ್ವಾಸ ಮತ್ತು ಪ್ರೀತಿಯಿಂದ ಮಾಡಿದರೆ ಫಲವನ್ನು ಕೊಡುತ್ತದೆ. ನಿಮ್ಮ ಯಾತ್ರೆ ಸುಖಕರವಾಗಿರಲಿ, ಇವತ್ತು ಈ ನಾಡಿಗೆ ಬೇಕಾಗಿರೋದು ಶಾಂತಿ, ಸೌಹಾರ್ದತೆ, ಅವಶ್ಯಕತೆಯಿದೆ.ಆ ಒಂದು ಪವಿತ್ರಾ ಸ್ಥಳದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಅವಶ್ಯಕತೆ ಇರುವುದರಿಂದ ನಿಮ್ಮ ಪ್ರಾಥನೆ ಆ ಅಲ್ಲಾ ತಲುಪಿಸಿ ಅದರ ಫಲ ಸಿಗುತ್ತದೆ.ಸಿಂಧನೂರು ಶಾಂತಿ ಸಮೃದ್ಧಿ ನಾಡಾಗಬೇಕು ಎಲ್ಲರೂ ಕೂಡಿ ಬದುಕಬೇಕು ಎನ್ನುವ ವ್ಯವಸ್ಥೆ ನಿರ್ಮಾಣವಾಗಲಿ ಎಂದು ಪ್ರಾರ್ಥನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನದಿಮುಲ್ಲಾ ಆಸೀಪ್ ಮುಸ್ಲಿಂ ಬಾಂಧವರು ಇತರರು ಇದ್ದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
