ಕುಕ್ಕವಾಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ 25 ಲಕ್ಷ ಅನುದಾನ ಘೋಷಣೆ ಮಾಡಿದ ಶಾಸಕ ಚಂದ್ರಪ್ಪ..
ಹೊಳಲ್ಕೆರೆಯ ಗ್ರಾಮ ದೇವತೆ ಶ್ರೀ ಕುಕ್ಕವಾಡೇಶ್ವರಿ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಜೀರ್ಣೋದ್ಧಾರ ಸಮಿತಿವತಿಯಿಂದ ಸಭೆ ಆಯೋಜಿಸಲಾಗಿತ್ತು. ಈ ವೇಳೆಯಲ್ಲಿ ನೂತನ ದೇವಸ್ಥಾನ ನಿರ್ಮಾಣದ ರೂಪು ರೇಷೆಗಳ ಬಗ್ಗೆ ಚರ್ಚೆನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ KSRTC ನಿಗಮದ ಅಧ್ಯಕ್ಷರು ಆದ ಶಾಸಕ ಎಂ ಚಂದ್ರಪ್ಪ ನೂತನ ದೇವಸ್ಥಾನ ನಿರ್ಮಾಣಕ್ಕೆ 25 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀ ರುದ್ರಣ್ಣ, ಶ್ರೀ ಮಹೇಶ್, ಶ್ರೀ ಮೂರ್ತಿ, ಶ್ರೀ ಪ್ರವೀಣ್, ಶ್ರೀ ಅಂಜನಪ್ಪ, ಇತರೆ ಪ್ರಮುಖರು ಹಾಜರಿದ್ದರು…

ವರದಿ. ಸುರೇಶ್. ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
