;

ಬಾಲಕರ ಹಾಸ್ಟೆಲ್ ಸ್ಥಳಾಂತರಿಸಿ, ಪಾಲಕರ, ವಿಧ್ಯಾರ್ಥಿಗಳ ಹೋರಾಟದ ಎಚ್ಚರಿಕೆ…!!!

ಬಾಲಕರ ಹಾಸ್ಟೆಲ್ ಸ್ಥಳಾಂತರಿಸಿ, ಪಾಲಕರ, ವಿಧ್ಯಾರ್ಥಿಗಳ ಹೋರಾಟದ ಎಚ್ಚರಿಕೆ.

ಸಿಂಧನೂರು : ಜುಲೈ 23. ಬಾಲಕಿಯರ ಹಾಸ್ಟೆಲ್ ಪಕ್ಕದಲ್ಲಿ ಬಾಲಕರ ಹಾಸ್ಟೆಲ್ ಇರಬಾರದು ಎಂಬ ಆದೇಶ ಇದ್ದರೂ ಪರಿಶಿಷ್ಟ ವರ್ಗದ ಬಾಲಕಿಯರ ಹಾಸ್ಟೆಲ್ ಪಕ್ಕದಲ್ಲಿ ಬಾಲಕಿಯರ ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಿಸಿದ್ದು, ಅಲ್ಲಿ ಅಲ್ಪಸಂಖ್ಯಾತ ಬಾಲಕರನ್ನು ಇರಿಸಲಾಗಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಬಾಲಕರನ್ನು ಬೇರೆಡೆಗೆ ಸ್ಥಳಾಂತರ ಮಾಡದೆ ಹೋದರೆ ಸಮಾಜ ಕಲ್ಯಾಣಾಧಿಕಾರಿಗಳ ಹಾಗೂ ಶಾಸಕರ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದೆಂದು ಸಭೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ತೀರ್ಮಾನ ಕೈಗೊಂಡರು.

ಮೂಲಭೂತ ಸೌಕರ್ಯಗಳು ಹಾಗೂ ಬಾಲಕಿಯರ ಸುರಕ್ಷತೆ ಇಲ್ಲದಿರುವ ಬಗ್ಗೆ ನಮ್ಮ ಪತ್ರಿಕೆಯಲ್ಲಿ ವರದಿ ಬಿತ್ತರಿಸಿದ ಹಿನ್ನೆಲೆ,ಇಂದು ಶಿವಜ್ಯೋತಿ ನಗರದಲ್ಲಿರುವ ಪರಿಶಿಷ್ಟ ವರ್ಗದ ವಸತಿ ನಿಲಯದಲ್ಲಿ ಪಾಲಕರ ಸಭೆ ಕರೆಯಲಾಗಿತ್ತು.

ಈ ಸಭೆಯಲ್ಲಿ ಪಾಲಕರ ಸಭೆಯನ್ನು ಕರೆಯದೆ ತರಾತುರಿಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ, ನಿರ್ಜನ ಪ್ರದೇಶವಾದ, ನಗರದಿಂದ 4 ರಿಂದ 5 ಕಿ.ಮೀ ದೂರದಲ್ಲಿದ್ದ, ದಾರಿಯುದ್ದಕ್ಕೂ ಜಾಲಿ ಗಿಡಗಳು ಬೆಳೆದಿದ್ದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪುಂಡಪೋಕರಿಗಳ, ಕುಡುಕರ ಗುಂಪು ಕುಳಿತು ಮದ್ಯಪಾನ ಮಾಡುತ್ತಿರುತ್ತಾರೆ, ವಿದ್ಯಾರ್ಥಿನಿಯರಿಗೆ ಯಾವುದೇ ತರದ ಸುರಕ್ಷತೆ ಇಲ್ಲದೆ ಹಾಗೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಸಾರಿಗೆ, ಮಹಿಳೆಯರ ಸುರಕ್ಷತೆ, ಗ್ರಂಥಾಲಯ, ಇವುಗಳಿಲ್ಲದಿರುವ ಸ್ಥಳಕ್ಕೆ ವಸತಿ ನಿಲಯ ಅವಸರವಾಗಿ ಯಾಕೆ ಸ್ಥಳಾಂತರ ಗೊಳಿಸಲಾಗಿದೆ ಎಂದು ಪರಿಶಿಷ್ಟ ಪಂಗಡದ ತಾಲೂಕು ಅಧಿಕಾರಿಯಾದ ಶಿವಮಾನಪ್ಪಗೆ ತರಾಟೆಗೆ ತೆಗೆದುಕೊಂಡರು.

ಶೌಚಾಲಯಗಳಲ್ಲಿ ನೀರಿಲ್ಲದೆ ಶೌಚಕ್ಕಾಗಿ ಬಯಲಿಗೆ ತೆರಳುತ್ತಿರುವದು, ವಿದ್ಯಾರ್ಥಿನಿಯರ ಪಕ್ಕದಲ್ಲೇ ಬಾಲಕರ ಹಾಸ್ಟೆಲ್ ಇರುವುದರಿಂದ ಸುರಕ್ಷತೆ ಇಲ್ಲದಂತಾಗಿದೆ, ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗಿ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಿ ಬರುವಂತಾಗಿದೆ.
ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದೆ ಹೋದಲ್ಲಿ ಪಾಲಕರ ಜೊತೆಗೂಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಈ ಸಭೆಯಲ್ಲಿ ವಿಧ್ಯಾರ್ಥಿಗಳು ತಮ್ಮ ಅನಾನುಕೂಲದ ಬಗ್ಗೆ ಹೊರಹಾಕಿದರು.

ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ತಾಲೂಕು ಅಧಿಕಾರಿಯಾದ ಶಿವಮಾನಪ್ಪ,ಹಾಸ್ಟೆಲ್ ವಾರ್ಡನ್ ಸವಿತಾ ಸಂಗಳ, ವಿದ್ಯಾರ್ಥಿನಿಯರ ಪಾಲಕರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರಾದ ಅರುಣ್ ಕುಮಾರ್ ನಾಯಕ ಯಾಪಲಪರ್ವಿ, ಹೈದರಾಬಾದ್ ಕರ್ನಾಟಕ ವಾಲ್ಮೀಕಿ ಸಂಘದ ಉಪಾಧ್ಯಕ್ಷರು,ಮಲ್ಲಯ್ಯ ಮ್ಯಾಕಲ್ ಕಾಂಗ್ರೆಸ್ ಎಸ್‌ಟಿ ಸೆಲ್ ಅಧ್ಯಕ್ಷರು,ವೆಂಕೋಬ ನಾಯಕ ರಾಮತ್ನಾಳ ತಾಲೂಕ ಅಧ್ಯಕ್ಷರು ವಾಲ್ಮೀಕಿ ಸಂಘ, ಈರಣ್ಣ ನಾಯಕ್ ಹುಲಗುಂಚಿ, ವೆಂಕೋಬ ಬೂದಿಹಾಳ, ಶಂಕರ್ ನಾಯಕ್ ತುರುವಿಹಾಳ, ವೆಂಕೋಬ್ ನಾಯಕ್ ಬೂತಲದಿನ್ನಿ, ನರಸಣ್ಣ ಗೊನ್ವಾರ್ ಸಭೆಯಲ್ಲಿ ಭಾಗಿಯಾಗಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;